ಪೋಷಕರ ದೂರಿನ ಮೇರೆಗೆ ಪರೀಕ್ಷಾ ಕೇಂದ್ರದ ಆಡಳಿತಾಧಿಕಾರಿ ಹಾಗೂ ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮ
(ಹಿಜಾಬ್ ಎಂದರೆ ಮುಸಲ್ಮಾನ ಮಹಿಳೆಯರ ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವ ಬಟ್ಟೆ)
ಭರೂಚ (ಗುಜರಾತ) – ಅಂಕಲೇಶ್ವರದ ಖಾಸಗಿ ‘ಲಯನ್ಸ್ ಸ್ಕೂಲ್’ನಲ್ಲಿ ಮಾರ್ಚ್ 13 ರಂದು 10 ನೇ ತರಗತಿಯ ಗಣಿತದ ಪರೀಕ್ಷೆ ಪ್ರಾರಂಭವಾಗುವ ಮೊದಲು, ಕೆಲವು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರದ ಉಸ್ತುವಾರಿ ನಿರ್ವಹಿಸುವ ನಿರ್ವಾಹಕರು ಹಿಜಾಬ ತೆಗೆಯುವಂತೆ ಮಾಡಿದರೆಂದು ಪೋಷಕರು ಆರೋಪಿಸಿದ್ದರು. ಈ ಆರೋಪದ ನಂತರ ರಾಜ್ಯದ ಶಿಕ್ಷಣ ಇಲಾಖೆಯು ಪರೀಕ್ಷಾ ಕೇಂದ್ರದ ಆಡಳಿತಾಧಿಕಾರಿ ಮತ್ತು ಶಾಲೆಯ ಮುಖ್ಯೋಪಾಧ್ಯಾಪಕಿ ಇಲಾಬೆನ ಸುರತಿಯಾ ಇವರನ್ನು ವಜಾಗೊಳಿಸುವಂತೆ ಆದೇಶ ನೀಡಿದರು. ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಯಾವ ತರಗತಿಯಲ್ಲಿ ಪರೀಕ್ಷೆಯನ್ನು ನೀಡುತ್ತಾರೆಯೋ, ಅಲ್ಲಿನ ಸಿಸಿಟಿವಿ ರೆಕಾರ್ಡಿಂಗ ನೋಡಿದಾಗ 2 ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಹಿಜಾಬ ತೆಗೆಯಲು ಹೇಳುತ್ತಿರುವುದು ಕಂಡು ಬಂದಿದೆ.
‘ವಿದ್ಯಾರ್ಥಿಗಳ ಉಡುಪಿನ ವಿಷಯದಲ್ಲಿ ಯಾವುದೇ ನಿರ್ದಿಷ್ಟ ನಿಯಮಗಳು ಇಲ್ಲದ ಕಾರಣ ಅವರು ಯಾವುದೇ ಸೂಕ್ತ ಉಡುಪು ಧರಿಸಿ ಪರೀಕ್ಷೆಯನ್ನು ನೀಡಬಹುದು’ ಎಂದು ಗುಜರಾತ ಮಾಧ್ಯಮಿಕ ಮತ್ತು ಉಚ್ಚ ಮಾಧ್ಯಮಿಕ ಶಿಕ್ಷಣ ಮಂಡಳಿಯು ಸ್ಪಷ್ಟ ಪಡಿಸಿದೆ.
ಸಂಪಾದಕೀಯ ನಿಲುವುಕರ್ನಾಟಕದಲ್ಲಿ, ಭಾಜಪ ಸರಕಾರ ಇರುವಾಗ ಶಾಲೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಿತ್ತು, ಈಗ ರಾಜಸ್ಥಾನದಲ್ಲಿ ಭಾಜಪ ಸರಕಾರ ಹಿಜಾಬ್ ಅನ್ನು ನಿಷೇಧಿಸುತ್ತಿದೆ; ಆದರೆ ಗುಜರಾತ್ ನಲ್ಲಿ ಇಂತಹ ನಿಷೇಧವಿಲ್ಲ. ಇದರಿಂದ ದೇಶದ ಪ್ರತಿಯೊಂದು ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ಸಮವಸ್ತ್ರದ ಬಗ್ಗೆ ವಿಭಿನ್ನ ನಿಯಮಗಳಿವೆ ಎನ್ನುವುದು ಗಮನಕ್ಕೆ ಬರುತ್ತದೆ. ಇದನ್ನು ನೋಡಿದರೆ ಈಗ ಸಂಪೂರ್ಣ ದೇಶದಲ್ಲಿ ಈ ಕುರಿತು ಒಂದೇ ನಿಯಮವನ್ನು ರೂಪಿಸುವ ಆವಶ್ಯಕತೆಯಿದೆ ! |