ಮುಸ್ಲಿಂ ಮಹಿಳೆಯರಿಗೆ 145 ಕೋಟಿ ರೂಪಾಯಿ ಪರಿಹಾರ !

ಬಂಧಿತ 2 ಮುಸ್ಲಿಂ ಮಹಿಳೆಯರ ಚಿತ್ರ ತೆಗೆಯಲು ಪೊಲೀಸರು ಅವರ ಹಿಜಾಬ್ ತೆಗೆದ ಪ್ರಕರಣ

(ಹಿಜಾಬ್ ಎನ್ನುವುದು ಮುಸ್ಲಿಂ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಧರಿಸುವ ಉಡುಪು)

ನ್ಯೂಯಾರ್ಕ್ (ಅಮೇರಿಕಾ) – 2018 ರಲ್ಲಿ, ಇಲ್ಲಿನ ಪೊಲೀಸರು ಇಬ್ಬರು ಮುಸ್ಲಿಂ ಮಹಿಳೆಯರ ಹಿಜಾಬ್ ಅನ್ನು ತೆಗೆದುಹಾಕುವಂತೆ ಅನಿವಾರ್ಯಗೊಳಿಸಿದ್ದರು. ಇದರಿಂದಾಗಿ ಈ ಮಹಿಳೆಯರಿಗೆ ಪರಿಹಾರವಾಗಿ 145 ಕೋಟಿ ರೂಪಾಯಿ ಸಿಗಲಿದೆ. ಮಹಿಳೆಯರ ಹೆಸರು ಜಮೀಲಾ ಕ್ಲಾರ್ಕ್ ಮತ್ತು ಅರ್ವಾ ಅಜೀಜ್ ಎಂದಾಗಿದ್ದೂ ಅವರು ಪೊಲೀಸರ ವಿರುದ್ಧ ದೂರು ದಾಖಲಿಸಿದ್ದರು. ಅವರು, ನಮ್ಮನ್ನು ಬಂಧಿಸಿದ ನಂತರ ಗುರುತಿಗಾಗಿ ಅವರ ಛಾಯಾಚಿತ್ರ ತೆಗೆಯಬೇಕಾಯಿತು. ಇದಕ್ಕಾಗಿ ಅವರು ತಮ್ಮ ಹಿಜಾಬ್ ಅನ್ನು ತೆಗೆದುಹಾಕಲು ಒತ್ತಾಯಿಸಲಾಯಿತು, ಇದು ಅವರಿಗೆ ಅವಮಾನವನ್ನುಂಟುಮಾಡಿತು. ಆ ಅವಮಾನಕರ ಕ್ಷಣಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಆ ವೇಳೆ ಪೊಲೀಸ್ ಠಾಣೆಯಲ್ಲಿ ಹಲವು ಪುರುಷ ಪೊಲೀಸ್ ಅಧಿಕಾರಿಗಳು ಹಾಗೂ 30 ಕೈದಿಗಳು ಹಾಜರಿದ್ದರು.

ಕ್ಲಾರ್ಕ್ ಅವರನ್ನು ಜನವರಿ 9, 2017 ರಂದು ಬಂಧಿಸಲಾಯಿತು ಹಾಗೂ ಅಜೀಜ್ ಅವರನ್ನು ಆಗಸ್ಟ್ 30, 2017 ರಂದು ಬಂಧಿಸಲಾಗಿತ್ತು.