ಬಾಬಾ ವಾಂಗಾರವರು ೨೦೨೩ ರ ಬಗ್ಗೆ ನುಡಿದ ಭವಿಷ್ಯವಾಣಿಗಳು ನಿಜವಾದರೆ ಜಗತ್ತು ಅಲ್ಲೋಲಕಲ್ಲೋಲ !

ಬಾಬಾ ವಾಂಗಾ

ನವ ದೆಹಲಿ : ಬಲ್ಗೇರಿಯಾದ ದಿವಂಗತ ಮಹಿಳೆ ಬಾಬಾ ವಾಂಗಾ ಇವರು ಅನೇಕ ಭವಿಷ್ಯ ನುಡಿದಿದ್ದಾರೆ. ಅವರು ಈ ಹಿಂದೆ ನುಡಿದ ಹಲವಾರು ಭವಿಷ್ಯವಾಣಿಗಳು ನಿಜವಾಗಿವೆ. ೨೦೨೩ ರ ಬಗ್ಗೆ ಅವರ ೫ ನುಡಿದ ೫ ಭವಿಷ್ಯವಾಣಿಗಳು ನಿಜವಾದರೆ, ಜಗತ್ತು ಅಲ್ಲೋಲಕಲ್ಲೋಲವಾಗಬಹುದು. ವಿಸೇಷವೆಂದರೆ, ಬಾಬಾ ವಾಂಗಾ ಅವರು ನುಡಿದ ಭವಿಷ್ಯವಾಣಿಗಳನ್ನು ಎಲ್ಲಿಯೂ ಬರೆದಿಲ್ಲ. ಅವರು ತನ್ನ ಅನುಯಾಯಿಗಳ ಮೂಲಕ ಹೇಳುತ್ತಾರೆ.

೧. ಮೊದಲನೆಯ ಭವಿಷ್ಯವಾಣಿಯನುಸಾರ, ಒಂದು ದೊಡ್ಡ ದೇಶವು ಜೈವಿಕ ಅಸ್ತ್ರಗಳಿಂದ ದಾಳಿ ಮಾಡುವ ಸಾಧ್ಯತೆಯಿದೆ. ಈ ಭವಿಷ್ಯವಾಣಿಯನ್ನು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ದೃಷ್ಟಿಯಿಂದ ನೋಡಲಾಗುತ್ತಿದೆ. ರಷ್ಯಾದಿಂದ ಇಂತಹ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ವ್ಯಕ್ತಪಡಿಸಲಾಗುತ್ತಿದೆ.

೨. ಎರಡನೇ ಭವಿಷ್ಯವಾಣಿಯನುಸಾರ, ಸೌರ ಚಂಡಮಾರುತ ಅಥವಾ ಸೌರ ಸುನಾಮಿ ಬರಬಹುದು. ಈ ಸೌರ ಚಂಡಮಾರುತದಿಂದ ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಇದರಿಂದ ಭೂಮಿಯ ಮೇಲಿನ ವೇಗದಲ್ಲಿ ಬದಲಾವಣೆಯಾಗುವ ಅಪಾಯ ಉಂಟುಮಾಡಬಹುದು.

೩. ೨೦೨೩ ರಲ್ಲಿ, ಸಂಪೂರ್ಣ ಜಗತ್ತಿನಲ್ಲಿ ಅಂಧಕಾರ ಹರಡಬಹುದು. ಎಲಿಯನ್ಸ್ (ಬೇರೆ ನಾಗರಿಕರು) ಭೂಮಿಯ ಮೇಲೆ ಆಕ್ರಮಣ ಮಾಡಬಹುದು ಮತ್ತು ಅದರಿಂದ ಲಕ್ಷಾಂತರ ಜನರು ಸಾಯಬಹುದು.

೪. ೨೦೨೩ ರ ವರೆಗೆ ಪ್ರಯೋಗಾಲಯದಲ್ಲಿ ಮನುಷ್ಯ ಜನ್ಮ ಪಡೆಯಬಹುದು. ಇಲ್ಲಿ ಜನಿಸಿದ ಮನುಷ್ಯನ ಚಾರಿತ್ರ್ಯ ಮತ್ತು ಚರ್ಮದ ಬಣ್ಣವನ್ನು ನಿರ್ಧರಿಸಲಾಗುವುದು.

೫. ಪರಮಾಣು ಶಕ್ತಿಯೋಜನೆಯ ಸ್ಥಾವರವು ಸ್ಫೋಟಗೊಳ್ಳಬಹುದು, ಇದು ಏಷ್ಯಾ ಖಂಡದಲ್ಲಿ ವಿಷಕಾರಿ ಮೋಡಗಳನ್ನು ಹರಡಲು ಕಾರಣವಾಗಬಹುದು ಎಂದು ೫ ನೇ ಭವಿಷ್ಯವಾಣಿಯಲ್ಲಿ ಹೇಳಲಾಗಿದೆ.

ಸಂಪಾದಕೀಯ ನಿಲುವು

ಸನಾತನ ಕಳೆದ ೨ ದಶಕಗಳಿಂದ `ಪ್ರಪಂಚದಲ್ಲಿ ಆಪತ್ಕಾಲ ಬರುತ್ತದೆ’, ಎಂದು ಹೇಳುತ್ತಿದೆ. ಜಗತ್ತು ಅದೇ ದಿಕ್ಕಿನತ್ತ ಮಾರ್ಗಕ್ರಮಣ ಮಾಡುತ್ತಿದೆ, ಇದರಿಂದ ಗಮನಕ್ಕೆ ಬರುತ್ತದೆ