’ದಿ ವಾಯರ’ ಸಮಾಚಾರ ಜಾಲತಾಣದ ಸಂಸ್ಥಾಪಕ ಮತ್ತು ಸಂಪಾದಕ ಇವರ ಮನೆಯ ಮೇಲೆ ದೆಹಲಿ ಪೊಲೀಸರಿಂದ ದಾಳಿ

ಭಾಜಪದ ಅಮಿತ ಮಾಲವಿಯ ಇವರ ಬಗ್ಗೆ ಸುಳ್ಳು ಸಮಾಚಾರ ಪ್ರಸಾರ ಮಾಡಿರುವ ಪ್ರಕರಣ

’ದಿ ವಾಯರ’ ಸಮಾಚಾರ ಜಾಲತಾಣದ ಸಂಸ್ಥಾಪಕ ಸಿದ್ದಾರ್ಥ ವರದರಾಜನ ಮತ್ತು ಸಂಪಾದಕ ಎಂ ಕೆ ವೇಣು

ನವದೆಹಲಿ – ಭಾಜಪದ ಮಾಹಿತಿ ತಂತ್ರಜ್ಞಾನ ಇಲಾಖೆಯ ಮುಖ್ಯಸ್ಥ ಅಮಿತ ಮಾಲವಿಯ ಇವರ ವಿಷಯವಾಗಿ ಸುಳ್ಳು ಸಮಾಚಾರ ಪ್ರಸಾರ ಮಾಡಿ ಅವರಿಗೆ ಅಪಕೀರ್ತಿ ತಂದಿರುವ ಪ್ರಕರಣದಲ್ಲಿ ದೆಹಲಿ ಪೊಲೀಸರು ’ದಿ ವಾಯರ’ ಈ ಕಮ್ಯುನಿಸ್ಟ್ ಸಮಾಚಾರ ಜಾಲತಾಣದ ಸಂಸ್ಥಾಪಕ ಸಿದ್ದಾರ್ಥ ವರದರಾಜನ ಮತ್ತು ಸಂಪಾದಕ ಎಂ ಕೆ ವೇಣು ಇವರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಅವರ ಮನೆಯಲ್ಲಿನ ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳ ಪರಿಶೀಲನೆ ನಡೆಸಿದೆ ಎಂಬ, ಸಮಾಚಾರವನ್ನು ಎ ಎನ್ ಐ ಎಂಬ ವಾರ್ತಾಸಂಸ್ಥೆಯು ಪ್ರಸಾರಗೊಳಿಸಿದೆ.

’ದಿ ವಾಯರ’ ಇಂದ ಮಾಲವಿಯ ಇವರನ್ನು ಗುರಿಯಾಗಿಸಿ ಅವರ ಬಗ್ಗೆ ಸುಳ್ಳು ಸಮಾಚಾರ ಪ್ರಸಾರ ಮಾಡಲಾಗಿತ್ತು. ಅದರ ಬಗ್ಗೆ ಅಮಿತ ಮಾಲವಿಯ ಇವರು ಅಕ್ಟೋಬರ್ ೨೯.೨೦೨೨ ರಂದು ದೆಹಲಿ ಪೋಲಿಸರ ಹತ್ತಿರ ’ದಿ ವಾಯರ’ ದ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದರು. ಅವರು ಅದರಲ್ಲಿ ’ದಿ ವಾಯರ’ ನ ಸಂಸ್ಥಾಪಕ ಮತ್ತು ಸಂಪಾದಕ ಇವರ ನಕಲಿ ಕಾಗದ ಪತ್ರಗಳ ಸಹಾಯದಿಂದ ತಮ್ಮ ಮಾನಹಾನಿ ಮಾಡಿರುವ ಆರೋಪಿಸಿದ್ದರು.