ಖಲಿಸ್ತಾನಿಗಳಿಗೆ ಆರ್ಥಿಕ ನೆರವು ನೀಡಿ, ಶಸ್ತ್ರಾಸ್ತ್ರಗಳನ್ನು ದೊರಕಿಸಿ ಕೊಡಿ ಹಾಗೂ ಅವರಿಗೆ ಭಾರತದಲ್ಲಿ ಅಶಾಂತಿ ಹರಡಲು ಪ್ರೋತ್ಸಾಹಿಸಿ !

ಭಾರತದ ವಿರುದ್ಧ ಖಲಿಸ್ತಾನಿಗಳನ್ನು ಸಂಘಟಿಸಲು ಜಗತ್ತಿನಾದ್ಯಂತ ಇರುವ ಪಾಕಿಸ್ತಾನಿ ರಾಯಭಾರಿ ಕಛೇರಿಗಳಿಗೆ ‘ಆಯ್‌.ಎಸ್‌.ಆಯ್‌.’ನ ಫತವಾ

ಇಸ್ಲಾಮಾಬಾದ – ಪಾಕಿಸ್ತಾನ ಹಾಗೂ ಅದರ ಗುಪ್ತಚರ ಸಂಘಟನೆಯಾದ ಆಯ್‌. ಎಸ್‌. ಆಯ್‌. ಭಾರತದಲ್ಲಿ ಅಸ್ಥಿರತೆ ಹಾಗೂ ಒಡಕನ್ನು ಪಸರಿಸಲು ನಿಯಮಿತವಾಗಿ ಪ್ರಯತ್ನಿಸುತ್ತಿರುತ್ತದೆ. ಈ ನಿಮಿತ್ತ ಪಂಜಾಬ ರಾಜ್ಯವನ್ನು ಅಸ್ಥಿರಗೊಳಿಸುವ ತಂತ್ರವನ್ನು ರಚಿಸಲು ಆಯ್. ಎಸ್‌. ಆಯ್‌. ಹಾಗೂ ಖಲಿಸ್ತಾನಿ ಭಯೋತ್ಪಾದಕರ ನಡುವೆ ಲಾಹೋರಿನಲ್ಲಿ ಅನೇಕ ಸಭೆಗಳು ನಡೆದಿವೆ. ಈ ಸಭೆಯಲ್ಲಿ ಜಗತ್ತಿನಾದ್ಯಂತ ಇರುವ ಪಾಕಿಸ್ತಾನಿ ರಾಯಭಾರಿ ಕಛೇರಿಗಳಿಗೆ ಸೂಚನೆ ನೀಡಲಾಗದೆ. ತಮ್ಮ ದೇಶಗಳಲ್ಲಿರುವ ಜಿಹಾದಿ ಭಯೋತ್ಪಾದಕರು ಹಾಗೂ ಖಲಿಸ್ತಾನವಾದಿಗಳಿಗೆ ‘ಆರ್ಥಿಕ ನೆರವು ನೀಡಿ’, ಶಸ್ತ್ರಾಸ್ತ್ರಗಳನ್ನು ಪೂರೈಸಿ’ ಹಾಗೂ ‘ಅವರಿಗೆ ಭಾರತದಲ್ಲಿ ಅಶಾಂತಿ ಹರಡಲು ಪ್ರೋತ್ಸಾಹಿಸಿ’, ಎಂದು ಸೂಚಿಸಲಾಗಿದೆ. ಇದಕ್ಕಾಗಿ ಆಯ್‌. ಎಸ್‌. ಆಯ್‌.ಯು ‘ಖಲಿಸ್ತಾನಿ ಘೋಷಣಾಪತ್ರ’ ಎಂಬ ಹೆಸರಿನ ಷಡ್ಯಂತ್ರವನ್ನೂ ಸಿದ್ಧಪಡಿಸಿದೆ.

‘ಸಿಖ್‌ ಫಾರ್‌ ಜಸ್ಟಿಸ್‌’ನಿಂದ ನಕಲಿ ಟ್ವಿಟ್ಟರ್‌ ಖಾತೆಯ ನಿರ್ಮಿತಿ !

‘ಸಿಖ್‌ ಫಾರ್‌ ಜಸ್ಟಿಸ್‌’ ಎಂಬ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯು ‘ಖಲಿಸ್ತಾನ ಜನಮತಸಂಗ್ರಹ’ದ (‘ರೆಫರೆಂಡಮ’ ನ) ಅಂಶಗಳನ್ನು ಮುಂದಿಡಲು ೧ ಸಾವಿರದ ೪೫೦ ನಕಲಿ ಟ್ವಿಟ್ಟರ್‌ ಖಾತೆಗಳನ್ನು ಸಿದ್ಧಪಡಿಸಿದೆ. ಕಳೆದ ಒಂದು ತಿಂಗಳಿನಲ್ಲಿ ಖಲಿಸ್ತಾನ ಜನಮತಸಂಗ್ರಹದ ಸಮರ್ಥನೆಗಾಗಿ ಒಟ್ಟೂ ೨೯ ಸಾವಿರದ ೩೨ ಟ್ವೀಟ್‌ಗಳನ್ನು ಮಾಡಲಾಗಿದೆ. ಈ ಟ್ವೀಟ್‌ಗಳನ್ನು ೭ ಸಾವಿರದ ೮೨೬ ಜನರು ರಿಟ್ವೀಟ್‌(ಪುನಃ ಟ್ವೀಟ್‌) ಮಾಡಿದ್ದಾರೆ. ಈ ಖಾತೆಗಳಿಂದ ಹಿಜಾಬ ನಿರ್ಬಂಧಕ್ಕೆ ವಿರೋಧ, ಹಾಗೆಯೇ ಪಾಕಿಸ್ತಾನಿ ಸೈನ್ಯ, ಕಾಶ್ಮೀರ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ‘ಹ್ಯಾಶಟ್ಯಾಗ್‌’ಗಳನ್ನು ಬಳಸಿ ಟ್ವೀಟ್‌ ಮಾಡಲಾಗಿದೆ. ಹೆಚ್ಚಿನ ಖಾತೆಗಳನ್ನು ಪಾಕಿಸ್ತಾನನಿಂದ ನಡೆಸಲಾಗುತ್ತಿದೆ. ಈ ಟ್ವೀಟ್‌ಗಳಿಗೆ ಪಾಕಿಸ್ತಾನ, ಕೆನಡಾ, ಜರ್ಮನಿ, ಅಮೇರಿಕಾ ಹಾಗೂ ಬ್ರಿಟನನಲ್ಲಿರುವ ಖಲಿಸ್ತಾನವಾದಿಗಳಿಂದ ಸಮರ್ಥನೆ ಸಿಗುತ್ತಿದೆ.

ಸಂಪಾದಕೀಯ ನಿಲುವು

ಭಾರತವಿರೋಧಿ ಶಕ್ತಿಗಳನ್ನು ಕೆರಳಿಸುವುದರ ಹಿಂದೆ ಜಿಹಾದಿ ಪಾಕಿಸ್ತಾನದ ಕೈವಾಡ ಇರುವುದರಿಂದಲೇ ಅದನ್ನು ನಾಶ ಮಾಡಲು ಈಗ ಭಾರತವು ರಣನೀತಿಯನ್ನು ರಚಿಸುವುದು ಆವಶ್ಯಕವಾಗಿದೆ !