ಅದು ಕುತುಬಮಿನಾರವಲ್ಲ, ಮೇರುಸ್ತಂಭ ಅಂದರೆ, ವರಾಹಮಿಹೀರರ ಅದ್ಭುತ ವೇಧಶಾಲೆ !

‘ಇತ್ತೀಚೆಗೆ ದೆಹಲಿಯ ಸಾಕೇತ ನ್ಯಾಯಾಲಯದಲ್ಲಿ ಕುತುಬಮಿನಾರದ ಮಾಲೀಕತ್ವದ ಬಗ್ಗೆ ಒಂದು ಅರ್ಜಿಯು ದಾಖಲಾಗಿದೆ. ಬಹಳಷ್ಟು ಸಲ ಮುಸಲ್ಮಾನರು ಕುತುಬಮಿನಾರದ ಮೇಲೆ ತಮ್ಮ ಹಕ್ಕನ್ನು ಹೇಳುತ್ತಾರೆ ; ಆದರೆ ಪ್ರತ್ಯಕ್ಷದಲ್ಲಿ ಕುತುಬಮಿನಾರವನ್ನು ಯಾರು ಕಟ್ಟಿದರು ? ಅದು ನಿರ್ಧಿಷ್ಟವಾಗಿ ಏನಾಗಿದೆ ? ಇದರ ಬಗೆಗಿನ ಮಾಹಿತಿಯ ವಿಚಾರ ವಿನಿಮಯ ಮಾಡುವ ಈ ಲೇಖನವನ್ನು ಇಲ್ಲಿ ಕೊಡುತ್ತಿದ್ದೇವೆ.

ಆಚಾರ್ಯ ವರಾಹಮಿಹೀರರು ಅನೇಕ ವೇದಯಂತ್ರ ಮತ್ತು ವೇಧಶಾಲೆಗಳ ನಿರ್ಮಾಪಕರಾಗಿದ್ದರು. ದೆಹಲಿಯ ಮಿಹರೌಲಿಯಲ್ಲಿನ ಮೇರುಸ್ತಂಭವೆಂದರೆ ವರಾಹಮಿಹೀರರ ಅದ್ಭುತ ವೇಧಶಾಲೆಯಾಗಿದೆ ಎಂಬುದನ್ನು ಇಲ್ಲಿ ಸಿದ್ಧಪಡಿಸಲು ಪ್ರಯತ್ನಿಸಲಾಗಿದೆ. ಅದಕ್ಕಾಗಿ ನಮಗೆ ಅದರ ನಿರ್ಮಾಣದ ಅವಶ್ಯಕತೆ, ನಿರ್ಮಾಣದ ಕಾಲಾವಧಿ, ಅದರ ರಚನೆ, ಅದರ ಭಗ್ನವಾಗಿರುವ ಭಾಗ, ಅದರ ಇತಿಹಾಸ, ಅದರ ಶಿಲ್ಪಕಲೆಯ ಎಲ್ಲ ಅಂಗಗಳು ಮತ್ತು ಪುರಾವೆಗಳನ್ನು ಸೂಕ್ಷ್ಮದಿಂದ ಅಭ್ಯಾಸ ಮಾಡುವ ಅವಶ್ಯಕತೆಯಿದೆ.’

ಜ್ಯೋತಿಷಿ ಡಾ. ಜಿತೇಂದ್ರ ವ್ಯಾಸ

೧. ಕ್ರೂರಕರ್ಮಿ ಕುತುಬುದ್ದೀನನು ಹಿಂದೂಗಳ ವಂಶವಿಚ್ಛೇದನೆ ಮತ್ತು ದೇವಸ್ಥಾನಗಳನ್ನು ಧ್ವಂಸ ಮಾಡಿ ಮಸೀದಿಗಳನ್ನು ಕಟ್ಟುವುದು

‘ತಬಕಾತ-ಎ-ನಾಸಿರಿ’ ಈ ಇತಿಹಾಸ ಗ್ರಂಥಕ್ಕನುಸಾರ ಕುತುಬುದ್ದೀನನ ಕಿರುಬೆರಳನ್ನು ಕತ್ತರಿಸಲಾಗಿತ್ತು. ಆದ್ದರಿಂದ ಅವನಿಗೆ ‘ಐಬಕ’ (ಕೈಯಿಂದ ಅಪಂಗ) ಎಂದು ಹೇಳಲಾಗುತ್ತಿತ್ತು. ಇತಿಹಾಸದ ಇನ್ನೂ ಒಂದು ಗ್ರಂಥ ‘ತಾಜುಲ-ಮಾ-ಆಸೀರ’ ಕುತುಬುದ್ದೀನ ಐಬಕನು ಕಾಫೀರರ (ಹಿಂದೂಗಳ) ವಿಧ್ವಂಸಕನಾಗಿದ್ದನು. ಅವನು ಖಡ್ಗದ ಬಲದಿಂದ ಮೂರ್ತಿಪೂಜಕರ ಸಂಸಾರವನ್ನು ನರಕದ ಬೆಂಕಿಯಲ್ಲಿ ತಳ್ಳಿದನು. ಪ್ರತಿಮೆಗಳ ಮತ್ತು ಮೂರ್ತಿಗಳ ಸ್ಥಾನದಲ್ಲಿ ಮಸೀದಿ ಮತ್ತು ಮದರಸಾಗಳನ್ನು ಕಟ್ಟಿದನು. ಅವನ ಈ ಕೃತ್ಯದಿಂದ ಜನರಿಗೆ ನೌಶೇರಾ, ರುಸ್ತಮ ಮತ್ತು ಹಾತಿಮತಾಯಿ ಈ ಯುದ್ಧಗಳೂ ಮರೆತುಹೋಗಿದ್ದವು.

೧೨೦೬ ರಿಂದ ೧೨೧೦ ರ ಕಾಲಾವಧಿಯಲ್ಲಿ ಹಿಂದುಸ್ಥಾನದಲ್ಲಿ ಮುಸಲ್ಮಾನರ ಅಧಿಕೃತ ಭೂಭಾಗದ ಹೆಸರು ಸುಲ್ತಾನವಾಗಿತ್ತು. ಈ ನಾಲ್ಕು ವರ್ಷಗಳಲ್ಲಿ ಕುತುಬುದ್ದೀನನ ಹೆಚ್ಚಿನ ಸಮಯವು ಅಲ್ಲಲ್ಲಿ ಓಡಾಡಿ ವಿದ್ರೋಹವನ್ನು ಶಮನಗೊಳಿಸುವುದರಲ್ಲಿಯೇ ಕಳೆದುಹೋಯಿತು. ಈ ಅವಧಿಯಲ್ಲಿ ಅವನು ೨ ಬಾರಿ ಗಝನಿಗೆ ಹೋಗಿದ್ದನು ಮತ್ತು ಚಿಕ್ಕ-ದೊಡ್ಡ ಯುದ್ಧಗಳಲ್ಲಿ ವ್ಯಸ್ತವಾಗಿದ್ದನು ಮತ್ತು ನವೆಂಬರ್ ೧೨೧೦ ರ ಪ್ರಾರಂಭದ ದಿನಗಳಲ್ಲಿ ಲಾಹೋರದ ಚೌಗಾನದಲ್ಲಿ ಕುದುರೆಯ ಮೇಲಿನಿಂದ ಬಿದ್ದು ಸತ್ತನು.

೨. ಒಬ್ಬ ಇತಿಹಾಸಕಾರನೂ ಕುತುಬಮಿನಾರವನ್ನು ನಿರ್ಮಿಸಿದ ಶ್ರೇಯಸ್ಸನ್ನು ಕುತುಬುದ್ದೀನನಿಗೆ ಕೊಡಲಿಲ್ಲ

ಜಗತ್ತಿನಲ್ಲಿನ ಒಬ್ಬ ಇತಿಹಾಸಕಾರನೂ ಅವನಿಗೆ ತಥಾಕಥಿತ ಕುತುಬಮಿನಾರವನ್ನು ನಿರ್ಮಿಸಿದ ಶ್ರೇಯಸ್ಸನ್ನು ಕೊಟ್ಟಿಲ್ಲ. ಪ್ರಸಿದ್ಧ ಇತಿಹಾಸಕಾರ ಮತ್ತು ಜಮ್ಮು-ಕಾಶ್ಮೀರದ ಮಾಜಿ ನ್ಯಾಯಾಧೀಶರಾದ ಆರ್.ಬಿ. ಕಂವರ ಸೇನ ಇವರು ಇದರ ಬಗ್ಗೆ ಒಂದು ಪುಸ್ತಕವನ್ನು ಬರೆದು ಪ್ರಕಾಶನ ಮಾಡಿದ್ದಾರೆ. ಅದರಲ್ಲಿ ‘ಈ ಮಿನಾರಕ್ಕೆ ಮತ್ತು ಕುತುಬುದ್ದೀನ ಐಬಕನಿಗೆ ಯಾವುದೇ ಸಂಬಂಧವಿಲ್ಲ’, (Qutubuddin Aibak, the first Muslim ruler of Delhi, was not the author or founder of Qutub Minar) ಎಂದು ಬರೆದಿದ್ದಾರೆ. ಹೆಸರಿನ ಹೊಂದಾಣಿಕೆಯಿಂದ ಅವನು ಈ ಮಿನಾರವನ್ನು ನಿರ್ಮಿಸಿದ್ದಾನೆ ಎಂದು ಒಪ್ಪಿಕೊಂಡರೂ, ಮುಂದಿನ ಪ್ರಶ್ನೆಗಳು ಉದ್ಭವಿಸುತ್ತವೆ, ಅವನು ಇದನ್ನು ಯಾವಾಗ ನಿರ್ಮಿಸಲು ಆರಂಭಿಸಿದನು? ಅದಕ್ಕಾಗಿ ಒಟ್ಟು ಎಷ್ಟು ಜನರು ಕೆಲಸ ಮಾಡುತ್ತಿದ್ದರು ? ಕಟ್ಟಡದ ಕೆಲಸಕ್ಕಾಗಿ ಯಾರೆಲ್ಲ ಇದ್ದರು ? ಅದಕ್ಕೆ ಒಟ್ಟು ಎಷ್ಟು ಹಣ ಖರ್ಚಾಯಿತು ? ಅದು ಯಾವಾಗ ಪೂರ್ಣವಾಯಿತು ? ಮತ್ತು ಕುತುಬುದ್ದೀನ ಐಬಕನ ವೃತಾಂತದ ದಿನಗಳಲ್ಲಿ ಈ ಮಿನಾರ ಕ್ರಿಸ್ತಪೂರ್ವ ೨೮೦ ವರ್ಷ ಪುರಾತನ ‘ಗರುಡಸ್ತಂಭ’ ಎಲ್ಲಿಂದ ಬಂತು ?’

೩. ಮುಸಲ್ಮಾನ ಇತಿಹಾಸಕಾರರು ‘ಕುತುಬಮಿನಾರ’ದ ಶ್ರೇಯಸ್ಸನ್ನು ಕುತುಬುದ್ದೀನನಿಗೆ ಕೊಡುವುದು

‘ಕುತುಬ’ ಒಂದು ಉರ್ದು ಶಬ್ದವಾಗಿದ್ದು ಅದರ ಅರ್ಥ ‘ಧ್ರುವ’ ಎಂದಾಗುತ್ತದೆ ಮತ್ತು ಕುತುಬಮಿನಾರದ ಸರಳ ಅರ್ಥ ಧ್ರುವಸ್ತಂಭ ಅಥವಾ ಧ್ರುವತಾರೆಗಳನ್ನು ನೋಡುವ ಮಿನಾರ’, ಎಂದಾಗುತ್ತದೆ. ಅರಬೀ ಭಾಷೆಯಲ್ಲಿಯೂ ಕುತುಬಮಿನಾರದ ಅರ್ಥ ‘ನಕ್ಷತ್ರಗಳ ನಿರೀಕ್ಷಣೆಯ ಸ್ತಂಭ’ವಾಗಿದೆ, ಆದುದರಿಂದ ಆ ಸ್ಥಂಬಕ್ಕೆ ಆಡು ಭಾಷೆಯಲ್ಲಿ ಕುತುಬಮಿನಾರ ಎಂದು ಕರೆಯಲಾಗುತ್ತದೆ. ಈಗಲೂ ಕೂಡ ಹಡಗುಗಳು ಮತ್ತು ಸಬ್‌ಮೆರಿನ್‌ಗಳಲ್ಲಿ ದಿಶಾ ದರ್ಶಕ ಚುಂಬಕೀಯ ಯಂತ್ರಗಳನ್ನು ಅಳವಡಿಸಲಾಗುತ್ತದೆ, ಅವುಗಳಿಗೆ  ಆಡು ಭಾಷೆಯಲ್ಲಿ ‘ಕುತೂಬನಾಮಾ’ ಅಥವಾ ‘ಕುತೂಬಘಡಿ’ ಎಂದು ಹೇಳಲಾಗುತ್ತದೆ. ಮುಸಲ್ಮಾನ ಇತಿಹಾಸಕಾರರು ಈ  ಶಬ್ದವನ್ನು ‘ಕುತುಬುದ್ದೀನ’ ನ ಜೊತೆಗೆ ಜೋಡಿಸಿದರು ಮತ್ತು ‘ಕುತುಬಮಿನಾರ’ದ ಶ್ರೇಯಸ್ಸನ್ನು ಕುತುಬುದ್ದೀನನಿಗೆ ನೀಡಿದರು.

೪.ದೆಹಲಿಯಲ್ಲಿನ ತಥಾಕಥಿತ ಕುತುಬಮಿನಾರದ ಜಾಗದಲ್ಲಿ ಅಗೆಯುವಾಗ ಅನೇಕ ದೇವತೆಗಳ ಮೂರ್ತಿಗಳು ಸಿಕ್ಕವು; ಆದರೆ ಅವುಗಳನ್ನು ಅಡಗಿಸಿಡಲಾಯಿತು

ಕುತುಬಮಿನಾರ / ಮೇರುಸ್ತಂಭದ ವಾಸ್ತವಿಕ ಸ್ವರೂಪವು ಈಗಿನಂತೆ ಇರಲಿಲ್ಲ, ಅದು ಅತ್ಯಂತ ವಿಶಾಲವಾಗಿತ್ತು. ೨೭ ನಕ್ಷತ್ರಗಳನ್ನು ತಿಳಿದುಕೊಳ್ಳಲು ಅದರ ನಾಲ್ಕೂ ಬದಿಗಳಲ್ಲಿ ೨೭ ನಕ್ಷತ್ರ ಭವನಗಳಿದ್ದವು, ಅವುಗಳನ್ನು ನಿರ್ಮಿಸಲು ಇಂದಿನ ಲೆಕ್ಕದಲ್ಲಿ ಕೋಟ್ಯಾವಧಿ ರೂಪಾಯಿಗಳನ್ನು ಖರ್ಚು ಮಾಡಲಾಗಿತ್ತು. ಈ ಸ್ತಂಭವು ‘ದೆಹಲಿಯ ಲಾಟ’, ಪೃಥ್ವಿರಾಜನ ‘ವಿಜಯಸ್ತಂಭ’, ‘ಸೂರ್ಯಸ್ತಂಭ’, ‘ವೇಧಸ್ತಂಭ’, ‘ವಿಕ್ರಮಸ್ತಂಭ’ ಇತ್ಯಾದಿ ಹೆಸರುಗಳಿಂದ ಸುಪರಿಚಿತವಾಗಿತ್ತು. ‘೧೯೭೬ ರಲ್ಲಿ ದೆಹಲಿಯಲ್ಲಿನ ತಥಾಕಥಿತ ಕುತುಬಮಿನಾರದ ಪರಿಸರದಲ್ಲಿ ಜಾಗವನ್ನು ಅಗೆಯಲಾಯಿತು. ಅದರಲ್ಲಿ ಅನೇಕ ದೇವತೆಗಳ ಮೂರ್ತಿಗಳು ಸಿಕ್ಕವು. ಕೆಲವು ಮೆಟ್ಟಿಲುಗಳಲ್ಲಿ ಮತ್ತು ಕೆಲವು ಗೋಡೆಗಳಲ್ಲಿ ಸಿಕ್ಕವು. ಆ ಕಾಲದಲ್ಲಿ ಪುರಾತತ್ತ್ವ ವಿಭಾಗದ ಮಂತ್ರಿ ಕಾಂಗ್ರೆಸ್ಸಿನ ಸದಸ್ಯ ಮತ್ತು ಮುಸಲ್ಮಾನನಾಗಿದ್ದನು. ಇದಲ್ಲದೆ ಕುತುಬಮಿನಾರದ ಅಭಿಲೇಖವನ್ನು (ಬರವಣಿಗೆಯನ್ನು) ನೋಡಿದಾಗ ನಮಗೆ ಅನೇಕ ಹಿಂದೂ ರಾಜರು ಮತ್ತು ಮುಸಲ್ಮಾನ ಸುಲ್ತಾನರು ಆಗಾಗ ಇದರ ದುರುಸ್ತಿಯನ್ನು ಮಾಡಿಸಿದರು ಎಂಬ ಪುರಾವೆ ಸಿಕ್ಕಿತು; ಆದರೆ ಎಲ್ಲಿಯೂ ಈ ಕಟ್ಟಡದ ಹೆಸರನ್ನು ‘ಕುತುಬಮಿನಾರ’ ಎಂದು ನೋಂದಣಿ ಮಾಡಿಲ್ಲ ಮತ್ತು ಇದರ ಆದಿನಿರ್ಮಾಪಕನೆಂದು ಕುತುಬುದ್ದೀನನ ಹೆಸರನ್ನೂ ಎಲ್ಲಿಯೂ ನೋಂದಣಿ ಮಾಡಿಲ್ಲ. ಇದರಿಂದ ಕುತುಬಮಿನಾರದಲ್ಲಿ ಹಿಂದೂ ಪುರಾವೆಗಳು ಸಿಗುವುದು ಯೋಗ್ಯವೆನಿಸಲಿಲ್ಲ. ರಾತ್ರಿ ಅಗೆಯುವಾಗ ಸಿಕ್ಕಿರುವ ಮೂರ್ತಿಗಳನ್ನು ಅಲ್ಲಿಂದ ದೂರ ಒಯ್ದು ಅಡಗಿಸಿಡಲಾಯಿತು.

೫. ಅಗೆಯುವಾಗ ಸಿಕ್ಕಿರುವ ಮೂರ್ತಿಗಳನ್ನು ಅಡಗಿಸಿಟ್ಟ ಬಗ್ಗೆ ಪ್ರಸಿದ್ಧ ಇತಿಹಾಸಕಾರ ಸ್ವ. ಪು.ನಾ. ಓಕ್ ಇವರಿಂದ ಅಂದಿನ ಪುರಾತತ್ವ ವಿಭಾಗದ ಪ್ರಮುಖರಿಗೆ ಮತ್ತು ರಾಷ್ಟ್ರಪತಿಗಳಿಗೆ ದೂರು ಸಲ್ಲಿಕೆ

ದೇವತೆಗಳ ಮೂರ್ತಿಗಳನ್ನು ಅಡಗಿಸಿಟ್ಟ ಬಗ್ಗೆ ಪ್ರಸಿದ್ಧ ಇತಿಹಾಸಕಾರ ಸ್ವ. ಪು.ನಾ.ಓಕ್ ಇವರು ಮಾರ್ಚ್ ೧೯೮೭ ಮತ್ತು ೧೯೮೮ ರಲ್ಲಿ ಅನೇಕ ಪತ್ರಗಳನ್ನು ಬರೆದು ಭಾರತದ ಅಂದಿನ ಪುರಾತತ್ವ ವಿಭಾಗದ ಪ್ರಮುಖ ಜಾಗತಪತಿ ಜೋಶಿ ಮತ್ತು ಅಂದಿನ ರಾಷ್ಟ್ರಪತಿಗಳಾದ ಶಂಕರ ದಯಾಳ ಶರ್ಮಾ ಇವರಲ್ಲಿ ದೂರನ್ನು ದಾಖಲಿಸಿದ್ದರು; ಆದರೆ ಅವರಿಬ್ಬರೂ ಏನೂ ಮಾಡಲಿಲ್ಲ. ಈ ಮೇಲಿನ ಎಲ್ಲ ಪುರಾವೆಗಳಿಂದ, ಕುತುಬಮಿನಾರಕ್ಕೆ ತಥಾಕಥಿತ ಗುಲಾಮವಂಶದ ಸುಲ್ತಾನ ಕುತುಬುದ್ದೀನನ ಯಾವುದೇ ಸಂಬಂಧವಿರಲಿಲ್ಲ ಮತ್ತು ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕುತುಬುದ್ದೀನನಂತಹ ವಿಧ್ವಂಸಕನು ಎಂದಿಗೂ ಇದರ ನಿರ್ಮಾಪಕನಾಗಲು ಸಾಧ್ಯವಿಲ್ಲ.

೬. ಕುತುಬಮಿನಾರಿನ ಪರಿಸರದಲ್ಲಿ ಜಗತ್ತಿನಲ್ಲಿನ ಎಲ್ಲಕ್ಕಿಂತ ಹೆಚ್ಚು ಶುದ್ಧ ‘ಪಿಟವಾ’ ಕಬ್ಬಿಣದ ಮಾಧ್ಯಮದಿಂದ ‘ಗರುಡಸ್ತಂಭ’ವನ್ನು ನಿರ್ಮಿಸಲಾಗಿದೆ

ಇದರ ನಿರ್ಮಾಣದ ಕಾಲಾವಧಿಯನ್ನು ಗಮನಿಸಿದರೆ, ಪ್ರಸ್ತುತ ಗರುಡಸ್ತಂಭವನ್ನು ಬಹಳಷ್ಟು ವಿಚಾರ ಮಾಡಿ, ಯೋಜನಾಬದ್ಧ ರೀತಿಯಲ್ಲಿ, ನಿಧಾನವಾಗಿ ಮತ್ತು ಯಾವುದಾದರೊಬ್ಬ ಶಕ್ತಿಶಾಲಿ ಹಿಂದೂ ಸಮ್ರಾಟನ ವೀಕ್ಷಣೆಯಲ್ಲಿ ನಿರ್ಮಿಸಿರುವ ಹಿಂದೂ ಶಿಲ್ಪಕಲೆಯ ಜೀವಂತ ಉದಾಹರಣೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅದನ್ನು ಆಗಿನ ಸಾಮ್ರಾಟನು ಮುಕ್ತಹಸ್ತಗಳಿಂದ ಧನ ಮತ್ತು ಸಮಯವನ್ನು ನೀಡಿ ಪ್ರೇಮದಿಂದ ನಿರ್ಮಿಸಿದ್ದಾನೆ ಎಂಬುದೂ ಸ್ಪಷ್ಟವಾಗುತ್ತದೆ. ತಥಾಕಥಿತ ಕುತುಬಮಿನಾರದ ಪರಿಸರದಲ್ಲಿ ನಿರ್ಮಿಸಿದ ಈ ಗರುಡಸ್ತಂಭದ ಕಬ್ಬಿಣ ಎಷ್ಟು ಶುದ್ಧವಾಗಿದೆ ಎಂದರೆ, ಅದಕ್ಕೆ ಜಗತ್ತಿನಲ್ಲಿನ ಅತೀ ಶುದ್ಧ ‘ಪಿಟವಾ’ ಕಬ್ಬಿಣವೆಂದು ಹೇಳಲಾಗಿತ್ತು. ಈ ಸ್ತಂಭದ ಕಬ್ಬಿಣ ಶೇ. ೯೯.೭೨೦ ರಷ್ಟು, ಕಾರ್ಬನ್ ಶೇ. ೦.೦೮೦ ಮತ್ತು ಫಾಸ್ಪರಸ್ ಶೇ. ೦.೧೧೯ ರಷ್ಟು ಇದೆ. ಈ ಲೋಹಸ್ತಂಭದ (ಗರುಡಸ್ತಂಭದ) ಮೇಲೆ ಎಂದಿಗೂ ಗೀಚುಗಳು ಬೀಳುವುದಿಲ್ಲ ಮತ್ತು ಧೂಳು ಸಂಗ್ರಹ ಆಗುವುದಿಲ್ಲ. ಇಂದು ಸಾವಿರಾರು ವರ್ಷಗಳು ಕಳೆದರೂ ಅದಕ್ಕೆ ಬಿರುಗಾಳಿ, ಮಳೆ ಮತ್ತು ಉಷ್ಣತೆಯ ಯಾವುದೇ ಪರಿಣಾಮವಾಗಿಲ್ಲ. ಸಂಪೂರ್ಣ ವಿಶ್ವದಲ್ಲಿ ಇದೊಂದು ‘ಭಾರತೀಯ ಧಾತು ವಿಜ್ಞಾನ’ದ ಅನುಪಮ ಉದಾಹರಣೆಯಾಗಿದೆ. ಅದಕ್ಕೆ ಜಗತ್ತಿನಲ್ಲಿ ಎಲ್ಲಿಯೂ ಸರಿಸಾಟಿಯಿಲ್ಲ. ವರಾಹಮಿಹೀರರ ‘ಬೃಹತ್ ಸಂಹಿತೆ’ ಯ ಅಧ್ಯಾಯ ೫೭ ರಲ್ಲಿನ ಶ್ಲೋಕ ೧ ರಿಂದ ೮ ರಲ್ಲಿನ ‘ವಜ್ರ ಲೇಪಾಧ್ಯಾಯ’ದಲ್ಲಿ ೧ ಕೋಟಿ ವರ್ಷಗಳ ವರೆಗೆ ಹಾಳಾಗದ ಧಾತು ಮತ್ತು ವಜ್ರಲೇಪ ತಯಾರಿಸುವ ವಿಧಿಯನ್ನು ಹೇಳಲಾಗಿದೆ.

೭. ಮೇರುಸ್ತಂಭವು ಹಿಂದೂ ಶಿಲ್ಪಕಲೆಯ ಒಂದು ಅನುಪಮ ಉದಾಹರಣೆಯಾಗಿದೆ

ಸುಪ್ರಸಿದ್ಧ ಇತಿಹಾಸಕಾರ ಮತ್ತು ಪುರಾತತ್ವಜ್ಞಾನಿ ಡಾ. ಡಿ. ಎಸ್. ತ್ರಿವೇದಿ ಇವರು ‘ಕುತುಬಮಿನಾರ ಅಥವಾ ವಿಷ್ಣುಧ್ವಜ’ ಎಂಬ ಒಂದು ಶೋಧಗ್ರಂಥವನ್ನು ಬರೆದಿದ್ದಾರೆ. ಅದರಲ್ಲಿ ಅಲ್ಲಗಳೆಯಲಾಗದಂತಹ ಪುರಾವೆಗಳನ್ನು ನೀಡಿದ್ದಾರೆ. ಅದಕ್ಕನುಸಾರ ಕುತುಬಮಿನಾರವು ಹಿಂದೂ ಶಿಲ್ಪಶಾಸ್ತ್ರದ ಒಂದು ಅನುಪಮ ಉದಾಹರಣೆಯಾಗಿದ್ದು, ಅದನ್ನು ಕ್ರಿ.ಪೂ. ೨೮೦ ರಲ್ಲಿ ಹಿಂದೂ ಸಮ್ರಾಟ ಸಮುದ್ರಗುಪ್ತನು ನಿರ್ಮಿಸಿದ್ದಾನೆ. ಈ ಪುಸ್ತಕದ ಭೂಮಿಕೆಯಿಂದ ಇತಿಹಾಸತಜ್ಞ ಸರ್ ರಾಮಸ್ವಾಮಿ ಅಯ್ಯರ್ ಇವರು ಸಮುದ್ರಗುಪ್ತನು ತನ್ನ ಆಡಳಿತಕಾಲದಲ್ಲಿ ಒಟ್ಟು ೩ ವೇಧಶಾಲೆಗಳನ್ನು ನಿರ್ಮಿಸಿದ್ದನು ಎಂದು ಸ್ಪಷ್ಟಪಡಿಸಿದ್ದಾರೆ. ಅದರಲ್ಲಿ ಮೊದಲನೆಯದ್ದು ದೆಹಲಿಯಲ್ಲಿ ಮಿಹಾರಾವಲೀ (ಮಿಹಾರೌಲಿ), ಎರಡನೆಯದ್ದು ಗಯಾ (ಬಿಹಾರ)ದಲ್ಲಿ ಮತ್ತು ಮೂರನೆಯದ್ದು ಫಿರೋಜ ಖಾ (ತುರ್ಕಸ್ತಾನ) ದಲ್ಲಿ ನಿರ್ಮಿಸಿದನು. ಈ ಸ್ಥಾನಗಳಲ್ಲಿ (ಮಿಹಾರಾವಲಿ) ಕ್ರಿ.ಶ. ೪ ರಲ್ಲಿ, ನಿರ್ಮಾಣ ಮಾಡಿದ ಲೋಹಸ್ತಂಭ (ವಿಷ್ಣುಸ್ತಂಭ) ಅವನ ಪುತ್ರ ಚಂದ್ರಗುಪ್ತ ಮೌರ್ಯ ಇವನ ಕೀರ್ತಿಗಾಗಿ ನಿರ್ಮಿಸಲಾಗಿದೆ.

೮. ಕುತುಬಮಿನಾರದ ಪರಿಸರದಲ್ಲಿನ ಅಗೆತದಲ್ಲಿ ಸಂಸ್ಕೃತದಲ್ಲಿನ ಶಿಲಾಲೇಖ ಮತ್ತು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಚಿಹ್ನೆಗಳು ಕಂಡುಬಂದಿವೆ

ಕುತುಬಮಿನಾರದ ಪರಿಸರದಲ್ಲಿನ ಅಗೆತದಲ್ಲಿ ಸಂಸ್ಕೃತದಲ್ಲಿ ಬರೆದಿರುವ ಶಿಲಾಲೇಖ ಮತ್ತು ಕೆಂಪು ಕಲ್ಲುಗಳ ಮೇಲೆ ಕಾಮಧೇನು, ಮತ್ತು ವರಾಹನ ರಾಜಚಿಹ್ನೆಗಳು ಕಂಡು ಬಂದಿವೆ. ಹಸು ಮತ್ತು ವರಾಹ ಇವೆರಡೂ ಪ್ರಾಣಿಗಳ ವಿಷಯದಲ್ಲಿ ಇಸ್ಲಾಮ್‌ನಲ್ಲಿ ಪ್ರಚಂಡ ಶತ್ರುತ್ವ ಮತ್ತು ಜಿಗುಪ್ಸೆ ಇದೆ. ಭಾರತ ಅಥವಾ ಭಾರತದ ಹೊರಗೆ ಯಾವುದೇ ಮಸೀದಿಯಲ್ಲಿ ಹಸು, ಸ್ವಸ್ತಿಕ, ಘಂಟೆ, ವಿಷ್ಣು, ಗರುಡ, ವೃಕ್ಷಗಳು, ಹೂವು ಮತ್ತು ಎಲೆಗಳ ತೋರಣ ಮತ್ತು ಅಲಂಕಾರದ ವಿಷಯದಲ್ಲಿನ ಚಿಹ್ನೆಗಳು ಕಾಣಿಸುವುದಿಲ್ಲ; ಏಕೆಂದರೆ, ಎಲ್ಲಿ ಇಸ್ಲಾಮ್ ಧರ್ಮ ನಿರ್ಮಾಣವಾಯಿತೋ, ಅಲ್ಲಿ ಗಿಡಗಳಿರಲಿಲ್ಲ ಅಥವಾ ಸುಂದರ ಪಶುಪಕ್ಷಿಗಳಿರಲಿಲ್ಲ ಮತ್ತು ಇವುಗಳನ್ನು ಚಿತ್ರಿಸುವ ಶಿಲ್ಪಶಾಸ್ತ್ರದ ಪರಂಪರೆಯೂ ಅಲ್ಲಿ ಇರಲಿಲ್ಲ. ಕಾಲಾಂತರದಲ್ಲಿ ಆ ಪರಂಪರೆಯ ರೂಢಿಯಾಯಿತು ಮತ್ತು ಯಾವುದೇ ಜೀವಂತ ಪ್ರಾಣಿಯ ಆಕೃತಿಯನ್ನು ಚಿತ್ರಿಸದಿರುವ ನಿಯಮವು ಇಸ್ಲಾಮ್ ಶಿಲ್ಪಶಾಸ್ತ್ರದ ಅನಿವಾರ್ಯ ಅಂಗವಾಯಿತು. ಭಾರತ ಸರಕಾರದ ಪುರಾತತ್ವ ವಿಭಾಗವು ದೆಹಲಿಯ ಬಗ್ಗೆ ಒಂದು ಪುಸ್ತಕವನ್ನು ಪ್ರಕಾಶಿಸಿದೆ, ಅದರ ೫೫ ನೆ ಪುಟದಲ್ಲಿ, ‘ಜನಾಭಿಪ್ರಾಯಕ್ಕನುಸಾರ ಕುತುಬಮಿನಾರವನ್ನು ದೆಹಲಿಯ ಕೊನೆಯ ಶಾಸಕನಾದ ಸಮ್ರಾಟ ಪೃಥ್ವಿರಾಜ ಚೌಹಾನನು ನಿರ್ಮಿಸಿದನು, ಅವನ ಮಗಳು ಅಲ್ಲಿಗೆ ಹೋಗಿ ಯಮುನಾ ನದಿಯ ಉಗಮಸ್ಥಾನವನ್ನು ಸಂಪೂರ್ಣ ರೂಪದಲ್ಲಿ ವೀಕ್ಷಿಸುತ್ತಿದ್ದಳು ಮತ್ತು ಪ್ರತಿದಿನ ನದಿಯ ಪೂಜೆಯನ್ನು ಮಾಡುತ್ತಿದ್ದಳು ಎಂದು ಹೇಳಲಾಗಿದೆ. ಆದರೂ ಈ ಮಿನಾರದ ಹೊರಗಿನ ಸ್ವರೂಪವು ಇಸ್ಲಾಮಿಕ್ ಆಗಿರುವುದು ಕಾಣಿಸುತ್ತದೆ ಮತ್ತು ಇದರಲ್ಲಿ ಹಿಂದೂ ಶಿಲ್ಪಶಾಸ್ತ್ರದ ಶೈಲಿಯೂ ದೊಡ್ಡ ಪ್ರಮಾಣದಲ್ಲಿ ಕಾಣಿಸುತ್ತದೆ. ಈ ಸಂದರ್ಭದಲ್ಲಿ ಇದರಲ್ಲಿ ಕಂಡುಬರುವ ದೇವನಾಗರಿಯ ಶಿಲಾಲೇಖ ಮತ್ತು ಮಂದಿರದ ಮೂರ್ತಿಮಂತ ಕಲ್ಲುಗಳು ಸ್ವತಃ ಈ ವಾಸ್ತುವಿನ  ಪುರಾವೆಗಳಾಗಿವೆ.  (೧.೧೦.೨೦೧೨)              (ಮುಂದುವರಿಯುವುದು)

– ಜ್ಯೋತಿಷ್ಯ ಡಾ. ಜಿತೇಂದ್ರ ವ್ಯಾಸ, ಜೋಧಪುರ, ರಾಜಸ್ಥಾನ.