ಮತಾಂತರ ಮತ್ತು ಬಾಂಗ್ಲಾದೇಶಿ ನುಸುಳುಕೋರರಿಂದಾಗಿ ದೇಶದ ಜನಸಂಖ್ಯೆಯಲ್ಲಿ ಅಸಮತೋಲನವಾಗುತ್ತಿದೆ ! – ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ

ಮತಾಂತರವಿರೋಧಿ ಕಾನೂನನ್ನು ಕಡ್ಡಾಯಗೊಳಿಸಬೇಕೆಂಬ ಬೇಡಿಕೆ

ಸರ್‌ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

ಪ್ರಯಾಗರಾಜ (ಉತ್ತರಪ್ರದೇಶ) – ಮತಾಂತರ ಮತ್ತು ಬಾಂಗ್ಲಾದೇಶಿ ನುಸುಳುಕೋರರಿಂದಾಗಿ ಭಾರತದ ಜನಸಂಖ್ಯೆಯಲ್ಲಿ ಅಸಂತುಲನವಾಗಿದೆ. ಉತ್ತರ ಬಿಹಾರ, ಪೂರ್ಣಿಯಾ, ಕಟಿಹಾರದಂತಹ ವಿವಿಧ ಜಿಲ್ಲೆಗಳಲ್ಲಿ ಹಾಗೂ ರಾಜ್ಯಗಳಲ್ಲಿ ಬಾಂಗ್ಲಾದೇಶಿ ನುಸುಳುಕೋರರ ಪ್ರಮಾಣ ಹೆಚ್ಚಾಗಿದೆ. ಇದರಿಂದ ಮತಾಂತರವಿರೋಧಿ ಕಾನೂನನ್ನು ಕಡ್ಡಾಯಗೊಳಿಸುವ ಅವಶ್ಯಕತೆಯಿದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ್‌ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಇವರು ವಿನಂತಿಸಿದ್ದಾರೆ. ಅವರು ಇಲ್ಲಿ ಆಯೋಜಿಸಿದ ರಾ.ಸ್ವ.ಸಂಘದ ಕಾರ್ಯಕಾರೀ ಮಂಡಳದ ಬೈಠಕ್‌ನಲ್ಲಿ ಭಾಗವಹಿಸಿದ್ದರು. ಅನಂತರ ಅವರು ಪತ್ರಕಾರ ಪರಿಷತ್ತಿನಲ್ಲಿ ಮಾತಾನಾಡುವಾಗ ಈ ಬೇಡಿಕೆಯನ್ನು ಮುಂದಿಟ್ಟರು. ‘ಮತಾಂತರವಾಗುವ ನಾಗರಿಕರಿಗೆ ಮೀಸಲಾತಿಯ ಯಾವುದೇ ಲಾಭವನ್ನು ಕೊಡಬಾರದು’, ಎಂದು ಕೂಡ ಅವರು ವಿನಂತಿಸಿದರು.

೧. ದತ್ತಾತ್ರೇಯ ಹೊಸಬಾಳೆ ಇವರು ಮಾತು ಮುಂದುವರಿಸುತ್ತಾ ಹೇಳಿದರು, ಮತಾಂತರದಿಂದಾಗಿ ಅನೇಕ ಸ್ಥಳಗಳಲ್ಲಿ ಹಿಂದೂಗಳ ಜನಸಂಖ್ಯೆ ಕುಸಿಯುತ್ತಿದ್ದು ಅದರ ಪರಿಣಾಮವನ್ನೂ ಭೋಗಿಸಬೇಕಾಗುತ್ತದೆ. ಇದು ಈ ಹಿಂದೆ ಕೂಡ ಆಗಿತ್ತು ಹಾಗೂ ಅದರ ಸಮಸ್ಯೆಯೂ ಅರಿವಾಗಿದೆ. ಮತಾಂತರದ ವಿಷಯದಲ್ಲಿ ಜನಜಾಗೃತಿ ಮಾಡುವ ಕಾರ್ಯವನ್ನು ಸಂಘದಿಂದ ಮಾಡಲಾಗುತ್ತಿದೆ. ಘರವಾಪಸಿ ಆಂದೋಲನದಿಂದ ಒಳ್ಳೆಯ ಪರಿಣಾಮಗಳಾಗಿರವುದು ಸಹ ಎಲ್ಲರೆದುರು ಬಂದಿದೆ. ಘರವಾಪಸಿ ಆಂದೋಲನವನ್ನು ಇಸ್ಲಾಮ್ ಮತ್ತು ಕ್ರೈಸ್ತ ಪಂಥವನ್ನು ಸ್ವೀಕರಿಸಿದವರನ್ನು ಪುನಃ ಹಿಂದೂ ಧರ್ಮಕ್ಕೆ ತರಲು ಹಮ್ಮಿಕೊಳ್ಳಲಾಗಿದೆ. ಮತಾಂತರವನ್ನು ತಡೆಗಟ್ಟಲು ಅನೇಕ ಕಾನೂನುಗಳನ್ನು ಮಾಡಲಾಗಿದೆ; ಆದರೆ ಈ ಕಾನೂನನ್ನು ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ. ಉತ್ತರಪ್ರದೇಶ ಸಹಿತ ಇತರ ಕೆಲವು ರಾಜ್ಯಗಳಲ್ಲಿ ಬಲವಂತದಿಂದ ಮತಾಂತರಗೊಳಿಸಲು ಅನುಮತಿಯಿಲ್ಲ.

೨. ಸರ್‌ಸಂಘಚಾಲಕ ಪ.ಪೂ.ಡಾ. ಮೋಹನ ಭಾಗವತರು ಸಹ ೧೬ ರಿಂದ ೧೯ ಅಕ್ಟೋಬರದ ವರೆಗೆ ಆಯೋಜಿಸಿದ ಕಾರ್ಯಕಾರೀ ಮಂಡಳದ ಈ ಭೈಠಕ್‌ನಲ್ಲಿ ಭಾಗವಹಿಸಿದ್ದಾರೆ. ದೇಶದಲ್ಲಿ ಸಂಘದ ಶಾಖೆಗಳ ಸಂಖ್ಯೆ ೬೧ ಸಾವಿರದ ೪೫ ಕ್ಕೆ ಏರಿದೆ.