ಸನಾತನದ ‘ಮನೆಮನೆಗಳಲ್ಲಿ ಕೃಷಿ ಅಭಿಯಾನ’

ಸೌ. ರಾಘವಿ ಕೊನೆಕರ

‘ರಾಸಾಯನಿಕ ಕೃಷಿಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಗಮನಕ್ಕೆ ಬಂದ ನಂತರ ಪಾಶ್ಚಾತ್ಯ ದೇಶಗಳಲ್ಲಿ ಜೈವಿಕ ಕೃಷಿ ಆರಂಭವಾಯಿತು. ಈ ಪದ್ಧತಿಯಲ್ಲಿ ‘ಕಂಪೋಸ್ಟ’ ಗೊಬ್ಬರ (ವಿಘಟನಶೀಲ ಕಸವನ್ನು ಗುಂಡಿಯಲ್ಲಿ ಕೊಳೆಸಿ ಮಾಡಿದ ಗೊಬ್ಬರ), ‘ಬೋನಮೀಲ್ (ಪ್ರಾಣಿಗಳ ಮೂಳೆಯಿಂದ ತಯಾರಿಸಿದ ಗೊಬ್ಬರ)’ ಇಂತಹ ಗೊಬ್ಬರಗಳನ್ನು ಬಳಸಲಾಗುತ್ತದೆ. ಇವುಗಳನ್ನು ತಯಾರಿಸಲು ವಿದೇಶಿ ಎರೆಹುಳಗಳ ಉಪಯೋಗವನ್ನು ಮಾಡಲಾಗುತ್ತದೆ. ಅವುಗಳ ಮಲದಲ್ಲಿ (ಶೌಚದಲ್ಲಿ) ‘ಅರ್ಸನಿಕ’, ಸೀಸ ಇಂತಹ ವಿಷಕಾರಿ ಧಾತುಗಳ ಅಂಶವಿರುತ್ತದೆ. ಈ ದುಬಾರಿ ಗೊಬ್ಬರಗಳನ್ನು ಬಹಳಷ್ಟು ಸಲ ಇತರರಿಂದ ಖರೀದಿಸಬೇಕಾಗುತ್ತದೆ. ಇದರಿಂದ ಹೊಲಕ್ಕೆ ಮಾಡಬೇಕಾದ ಖರ್ಚು ಹೆಚ್ಚಾಗುತ್ತದೆ. ಆಪತ್ಕಾಲದಲ್ಲಿ ಈ ಗೊಬ್ಬರಗಳು ಉಪಲಬ್ಧವಾಗಲು ಅಡಚಣೆಗಳು ಬರಬಹುದು. ತದ್ವಿರುದ್ದ ‘ನೈಸರ್ಗಿಕ ಕೃಷಿಯು’ ಸಂಪೂರ್ಣ ಸ್ವಾವಲಂಬಿಯಾಗಿದ್ದು ಅದು ಆಪತ್ಕಾಲಕ್ಕೆ ಮತ್ತು ಪ್ರತಿನಿತ್ಯಕ್ಕೂ ಬಹಳ ಉಪಯುಕ್ತವಾಗಿದೆ.’