ಮತಾಂತರಗೊಳಿಸಿ ವಿವಾಹ ಮಾಡಿಕೊಳ್ಳದೆ ಇದ್ದರೆ ಶಿರಚ್ಚೇದದ ಬೆದರಿಕೆ !

ಶಾಹರುಖನು ಹಿಂದೂ ಸೈನಿಕನ ಮಗಳನ್ನು ‘ಲವ್ ಜಿಹಾದ್’ನ ಸುಳಿಗೆ ಸಿಲುಕಿಸಿದ !

ಆರೋಪಿ ಶಾಹರುಖ

ಫಿರೋಜಾಬಾದ (ಉತ್ತರಪ್ರದೇಶ) – ಸೈನ್ಯದಲ್ಲಿನ ಒಬ್ಬ ಹಿಂದೂ ಸೈನಿಕನ ಮಗಳು ಲವ್ ಜಿಹಾದ್‌ನಲ್ಲಿ ಸಿಲುಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಾಹರುಖ ಅಲಿಯಾಸ್ ವಿಹಾನ ಎಂಬ ಯುವಕನು ಇಲ್ಲಿಯ ಸೈನಿಕನ ೨೨ ವರ್ಷದ ಹುಡುಗಿಯನ್ನು ಫೇಸ್‌ಬುಕ್ ಮೂಲಕ ಪ್ರೇಮದ ಬಲೆಯಲ್ಲಿ ಸಿಲುಕಿಸಿದ್ದಾನೆ. ಆಕೆ ಮತಾಂತರಗೊಂಡು ವಿವಾಹ ಮಾಡಿಕೊಳ್ಳದಿದ್ದರೆ ಆಕೆ ಮತ್ತು ಆಕೆಯ ಸಹೋದರನ ಶಿರಚ್ಛೇದ ಮಾಡುವುದಾಗಿ ಬೆದರಿಕೆ ನೀಡಿದನು. ಪೊಲೀಸರಲ್ಲಿ ಶಾಹರುಖನ ವಿರುದ್ಧ ದೂರು ದಾಖಲಿಸಲಾಗಿದೆ.

ಶಾಹರುಖ ಅಮರೋಹ ಜಿಲ್ಲೆಯವನಾಗಿದ್ದು ಸಪ್ಟೆಂಬರ್ ೨೪ ರಂದು ಫಿರೋಜಾಬಾದಿನ ಶಿಕೋಹಾಬಾದನಲ್ಲಿ ಯುವತಿಯನ್ನು ಭೇಟಿ ಮಾಡಲು ಬಂದಿದ್ದನು. ಆಗ ಅವನು ಆಕೆಯನ್ನು ಅಮರೋಹಾಗೆ ಕರೆದುಕೊಂಡು ಹೋದನು. ಆ ಸಮಯದಲ್ಲಿ ಅವನು ಆಕೆಗೆ ಮತಾಂತರಗೊಂಡು ವಿವಾಹ ಮಾಡಿಕೊಳ್ಳಲು ಒತ್ತಡ ಹೇರಿದನು, ಹಾಗೆ ಮಾಡದೇ ಇದ್ದರೆ ಆಕೆಯ ಅಶ್ಲೀಲ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ನೀಡಿದನು. ಸಂತ್ರಸ್ತೆಯು, ಶಾಹರುಖನು ಆಕೆಯ ಕೆಲವು ಛಾಯಾಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಸಾರಗೊಳಿಸಿದ್ದಾನೆ ಎಂದು ಆರೋಪಿಸಿದ್ದಾಳೆ.

ಸಂಪಾದಕೀಯ ನಿಲುವು

ಒಬ್ಬ ಸೈನಿಕನ ಮಗಳನ್ನು ಲವ್ ಜಿಹಾದ್‌ನ ಬಲೆಗೆ ಸಿಲುಕಿಸುವ ಈ ಘಟನೆಯಿಂದ ಮತಾಂಧರ ಧೈರ್ಯ ಎಷ್ಟರಮಟ್ಟಿಗೆ ಹೆಚ್ಚಿದೆ ಎಂಬುದು ಗಮನಕ್ಕೆ ಬರುತ್ತದೆ. ಇಂತಹವರನ್ನು ಸರಿಯಾದ ದಾರಿಗೆ ತರುವುದಕ್ಕೆ ಸರಕಾರದಿಂದ ರಾಜ್ಯಗಳಲ್ಲಿ ಲವ್ ಜಿಹಾದ್ ವಿರೋಧಿ ಕಾನೂನಿನ ಕಠಿಣ ಕ್ರಮ ಕೈಗೊಳ್ಳಬೇಕು !