ನರೇಂದ್ರ ಮೋದಿ ಒಬ್ಬ ಮಹಾನ ದೇಶಭಕ್ತರಾಗಿದ್ದು ಅವರ ನಾಯಕತ್ವದಲ್ಲಿ ಭಾರತದ ಭವಿಷ್ಯವು ಉಜ್ವಲವಾಗಿರಲಿದೆ !

ರಷ್ಯಾ ಅಧ್ಯಕ್ಷ ಪುಟಿನ್ ಅವರಿಂದ ಪ್ರಧಾನಿ ನರೇಂದ್ರ ಮೋದಿಯ ಶ್ಲಾಘನೆ

ಮಾಸ್ಕೋ (ರಷ್ಯಾ) – ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ ದೇಶಭಕ್ತರಾಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರತದ ಭವಿಷ್ಯವು ಉಜ್ವಲವಾಗಿದೆ. ಅವರ ‘ಮೇಕ್ ಇನ್ ಇಂಡಿಯಾ’ದ ಪರಿಕಲ್ಪನೆಯು ಆರ್ಥಿಕ ಮತ್ತು ನೈತಿಕ ಈ ಎರಡೂ ದೃಷ್ತಿಯಲ್ಲಿ ಮಹತ್ವದ್ದಾಗಿದೆ. ಕೆಲವು ವಿಷಯಗಳನ್ನು ಮಿತಿಗೊಳಿಸಲು ಅಥವಾ ತಡೆಯಲು ಪ್ರಯತ್ನಗಳಾಗುತ್ತಿರುವಾಗಲೂ ಅವರು ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಲು ಸಮರ್ಥರಾಗಿದ್ದಾರೆ. ಭಾರತದ ಜಾಗತಿಕ ಬೆಳವಣಿಗೆಗಳಲ್ಲಿ ಹೆಚ್ಚು ಪಾತ್ರವಿರಲಿದೆ ಎಂಬುದರ ಬಗ್ಗೆ ನನಗೆ ಖಾತ್ರಿ ಇದೆ ಎಂದು ಹೇಳುತ್ತಾ ರಷ್ಯಾದ ಅಧ್ಯಕ್ಷ ವ್ಲಾದಿಮಿರ ಪುಟಿನ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದರು. ಮಾಸ್ಕೋದಲ್ಲಿನ ‘ವಾಲ್ಡೈ ಡಿಸ್ಕಶನ್ ಕ್ಲಬ್’ನ ಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದರು. ‘ಭಾರತ ಮತ್ತು ರಷ್ಯಾ ನಡುವೆ ಸಂಬಂಧಗಳು ಉತ್ತಮವಾಗಿದ್ದು ಯಾವುದೇ ಅಂಶದ ವಿಷಯದಲ್ಲಿ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿಲ್ಲ’, ಎಂದೂ ಅವರು ಈ ವೇಳೆ ಸ್ಪಷ್ಟಪಡಿಸಿದರು.

ಪುಟಿನ್ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಬ್ರಿಟಿಷ್ ವಸಾಹತುಶಾಹಿಯಿಂದ ಸ್ವತಂತ್ರ ದೇಶ ಹೀಗೆ ಭಾರತವು ಬಹು ದೂರ ಸಾಗಿ ಬಂದಿದೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಆದ್ದರಿಂದ, ಭವಿಷ್ಯವು ಭಾರತದ್ದೇ ಆಗಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ನಾವು ಭಾರತದೊಂದಿಗೆ ವಿಶೇಷ ಸಂಬಂಧ ಹೊಂದಿದ್ದೇವೆ. ನಮ್ಮ ನಡುವೆ ಯಾವಾಗಲೂ ಕಷ್ಟಕರ ಸಮಸ್ಯೆಗಳು ಬಂದಿಲ್ಲ. ನಾವು ಪರಸ್ಪರರನ್ನು ಬೆಂಬಲಿಸಿದ್ದೇವೆ ಮತ್ತು ಈಗಲೂ ಹಾಗೆಯೇ ಮಾಡುತ್ತಿದ್ದೇವೆ. ಮುಂದೆಯೂ ಇದನ್ನು ಹೇಗೆಯೇ ಮುಂದುವರಿಸುವೆವು ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ.

೨. ಪ್ರಧಾನಿ ಮೋದಿ ಒಂದು ‘ಐಸ್ ಬ್ರೇಕರ್’ ಇದ್ದಂತೆ. ಅವರು ತಮ್ಮ ನಾಗರಿಕರ ಹಿತಾಸಕ್ತಿಗಳನ್ನು ಚೆನ್ನಾಗಿ ರಕ್ಷಿಸುತ್ತಾರೆ. ಸ್ವತಂತ್ರ ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ನಿಪುಣರಾದವರಲ್ಲಿ ಮೋದಿ ಒಬ್ಬರು. ಹಲವು ಪಾಶ್ಚಿಮಾತ್ಯ ದೇಶಗಳು ಭಾರತದ ಮೇಲೆ ವಿವಿಧ ನಿರ್ಬಂಧಗಳನ್ನು ಹೇರಲು ಪ್ರಯತ್ನಿಸಿದವು; ಆದರೆ ಮೋದಿ ಅವರ ಆಸೆಯನ್ನು ವಿಫಲಗೊಳಿಸಿದರು.

೩. ರಷ್ಯಾಗೆ ಭಾರತ ಯಾವಾಗಲೂ ವಿಶೇಷವಾಗೇ ಇದ್ದಿದೆ. ಭಾರತ-ರಷ್ಯಾ ಸಂಬಂಧ ಸಾಕಷ್ಟು ಹಳೆಯದು. ನಾವು ದೀರ್ಘಕಾಲದ ಸಂಬಂಧವನ್ನು ಹೊಂದಿದ್ದೇವೆ. ನಮ್ಮ ನಡುವೆ ಯಾವುದೇ ವಿವಾದವಿಲ್ಲ ಎಂಬುದು ವಿಶೇಷ ! ಎಂದು ಹೇಳಿದರು.