ನನ್ ಮತ್ತು ಪಾದ್ರಿಗಳು ಇಂಟರನೆಟ್‌ನಲ್ಲಿ ಅಶ್ಲೀಲ(ಪಾರ್ನ) ವೀಡಿಯೊಗಳನ್ನು ನೋಡುತ್ತಾರೆ !

ಪೋಪ್ ಫ್ರಾನ್ಸಿಸ್ ಬಹಿರಂಗ ಒಪ್ಪಿಗೆ !

ವ್ಯಾಟಿಕನ್ ಸಿಟಿ – ಸಾಮಾನ್ಯ ಜನರಂತೆ ನನ್ ಮತ್ತು ಪಾದ್ರಿಗಳು ಸಹ ‘ಆನ್‌ಲೈನ್’ ಅಶ್ಲೀಲ (ಪಾರ್ನ) ವೀಡಿಯೊಗಳನ್ನು ನೋಡುತ್ತಾರೆ. ಇದು ಒಂದು ಕೆಟ್ಟ ಅಭ್ಯಾಸವಾಗಿದೆ ಮತ್ತು ಇದು ಅನೇಕರಿಗಿದೆ. ಇದು ಪುರುಷರು ಮತ್ತು ಮಹಿಳೆಯರ ನಡುವೆ ಇದ್ದೇ ಇದೆ ಹಾಗೆಯೇ ಪಾದ್ರಿ ಮತ್ತು ನನ್‌ಗಳಲ್ಲಿಯೂ ಇದೆ ಎಂದು ಕ್ರೈಸ್ತ ಧರ್ಮದ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್, ಬಹಿರಂಗವಾಗಿ ಒಪ್ಪಿಕೊಂಡರು. ಮುಂಬರುವ ಪಾದ್ರಿಗಳಿಗಾಗಿ ರೋಮನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ‘ಸಾಮಾನ್ಯ ವ್ಯಕ್ತಿಗಳು ಹೀಗೆ ಸೈತಾನನಾಗುತ್ತಾನೆ ಎಂದೂ ಸಹ ಹೇಳಿದರು.

ಯಾರು ಪ್ರತಿದಿನ ಯೇಸುಗೆ ಶುದ್ಧ ಹೃದಯದಿಂದ ಪೂಜಿಸುವನೋ ಆತ ಅಶ್ಲೀಲಕ್ಕೆ ಒಳಗಾಗುವುದಿಲ್ಲ !

ಚರ್ಚ್‌ನಲ್ಲಿ ಒಬ್ಬ ವಿದ್ಯಾರ್ಥಿ ಪೋಪ್ ಫ್ರಾನ್ಸಿಸ್‌ನನ್ನು, ‘ಭಕ್ತರು ಸಂಚಾರವಾಣಿಯಂತಹ ಸೌಲಭ್ಯಗಳನ್ನು ಬಳಸಬೇಕೆ ಅಥವಾ ಬೇಡವೇ ?’ ಎಂದು ಕೇಳಿದನು. ಇದಕ್ಕೆ ಪೋಪ್ ಫ್ರಾನ್ಸಿಸ್, ‘ಸಂಚಾರವಾಣಿಯನ್ನು ಮಾತನಾಡಲು ಬಳಸುವುದು ಸೂಕ್ತವಾಗಿದೆ; ಆದರೆ ವಿಡಿಯೋ ಅಶ್ಲೀಲತೆ ಎಂದರೇನು ? ನಿನಗೆ ಅದು ಗೊತ್ತಿದೆ. ಯಾರು ಪ್ರಭು ಯೇಸುವನ್ನು ಪರಿಶುದ್ಧ ಹೃದಯದಿಂದ ಪ್ರತಿದಿನವೂ ಆರಾಧಿಸುವನೋ ಆತ ಈ ರೀತಿಯ ಅಶ್ಲೀಲತೆಗೆ ಒಳಗಾಗಲಾರನು. ನಿಮಗೆ ನಿಮ್ಮ ಸಂಚಾರವಾಣಿಯಿಂದ ಈ ಅಶ್ಲೀಲ ವಿಡಿಯೋಗಳನ್ನು ಅಳಿಸಿಹಾಕಲು ಸಾಧ್ಯವಾದರೆ, ಅವುಗಳನ್ನು ಅಳಿಸಿ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದು ಕ್ರೈಸ್ತರ ನಿಜ ಸ್ವರೂಪ ! ಈ ಬಗ್ಗೆ ಭಾರತದ ಪ್ರಸಾರ ಮಾಧ್ಯಮಗಳು, ತಥಾಕಥಿತ ಜಾತ್ಯತೀತವಾದಿಗಳು ಮತ್ತು ‘ಕ್ರೈಸ್ತರನ್ನು ಶಾಂತಿಪ್ರಿಯರೆಂದು ಕರೆಯುವ’ ಪ್ರಗತಿ(ಅಧೋಗತಿ)ಪರರು ಏನಾದರೂ ಹೇಳುವರೇ ?