ಕಿಶೋರಾವಸ್ಥೆಯ ಐವರಲ್ಲಿ ಒಬ್ಬರು ತಮ್ಮ ನಗ್ನ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ ಮಾಡುತ್ತಾರೆ !

ರಸಾತಳಕ್ಕೆ ಇಳಿದಿರುವ ನೈತಿಕತೆ !

ಲಾಸಎಂಜಿಲ್ಸ (ಅಮೇರಿಕಾ) – ಮಕ್ಕಳ ಆನ್‌ಲೈನ ಶೋಷಣೆಯಾಗದಿರಲು ಸಂಗಣಕೀಯ ವ್ಯವಸ್ಥೆಯನ್ನು ನಿರ್ಮಿಸುವ ಖಾಸಗಿ ಸಂಸ್ಥೆಯಾದ ‘ಥಾರ್ನ’ ಒಂದು ವರದಿಯನ್ನು ಪ್ರಕಾಶಿಸಿದೆ. ಇದರಲ್ಲಿ ಕಿಶೋರಾವಸ್ಥೆಯ ಐವರಲ್ಲಿ ಒಬ್ಬರು ತಮ್ಮ ನಗ್ನ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ ಮಾಡುತ್ತಾರೆ.

೧. ಇಂತಹ ಘಟನೆಗಳಲ್ಲಿ ಮಕ್ಕಳು ತಾವಾಗಿಯೇ ಇಂತಹ ಛಾಯಾಚಿತ್ರಗಳನ್ನು ಪ್ರಸಾರ ಮಾಡುತ್ತಾರೆ, ಹಾಗೆಯೇ ತಮ್ಮ ಗೆಳೆಯ-ಗೆಳತಿಯ ಬೇಡಿಕೆಯಿಂದಾಗಿ ಹೀಗೆ ಮಾಡುತ್ತಾರೆ. ಅನೇಕ ಬಾರಿ ಅವರ ಮೇಲೆ ಒತ್ತಡವನ್ನು ಹೇರಲಾಗುತ್ತದೆ. ಇಂತಹ ಮಕ್ಕಳಿಗೆ ಹೆಚ್ಚಿನ ಸಮಯ ‘ಈ ಛಾಯಾಚಿತ್ರಗಳು ಮುಂದೆ ಎಲ್ಲಿಯವರೆಗೆ ಹೋಗಬಹುದು ?’ ಎಂಬುದು ತಿಳಿದಿರುವುದಿಲ್ಲ.

೨. ಈ ವರದಿಗಾಗಿ ೨೦೧೯ರ ನಂತರ ‘ಥಾರ್ನ’ ೯ ರಿಂದ ೧೭ ವರ್ಷ ವಯಸ್ಸಿನ ೧ ಸಾವಿರಕ್ಕೂ ಹೆಚ್ಚಿನ ಮಕ್ಕಳೊಂದಿಗೆ ಚರ್ಚಿಸಿದೆ. ೨೦೧೯ರ ನಂತರ ಇಂತಹ ಛಾಯಾಚಿತ್ರಗಳನ್ನು ಪ್ರಸಾರಿಸುವ ಘಟನೆಗಳು ಸತತವಾಗಿ ಹೆಚ್ಚುತ್ತಿದೆ.