೧. ವ್ಯಷ್ಟಿ ಸಾಧನೆಗಾಗಿ ಮಾಡಬೇಕಾದ ಪ್ರಯತ್ನಗಳು
೧ ಅ. ಸಮಷ್ಟಿ ಸಾಧನೆ ಮಾಡಲು ಸಾಧ್ಯವಿಲ್ಲದಿದ್ದರೆ ಮನೆಯಲ್ಲಿಯೇ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯ ಮೂಲಕ ವ್ಯಷ್ಟಿ ಸಾಧನೆ ಮಾಡಬೇಕು ! : ‘ಕೆಲವು ಶಾರೀರಿಕ ಮತ್ತು ಕೌಟುಂಬಿಕ ಅಡೆತಡೆಗಳಿಂದ ಹಾಗೂ ಕಾಯಿಲೆಗಳಿಂದ ಸಮಷ್ಟಿ ಸಾಧನೆ ಮಾಡಲು ಸಾಧ್ಯವಿಲ್ಲದಿದ್ದರೆ ಅವರು ಸಂತರು ಹೇಳಿದಂತೆ ಮನೆಯಲ್ಲೇ ಸಾಧನೆ ಮತ್ತು ಸೇವೆ ಮಾಡಬೇಕು. ಮನೆಯ ನಿತ್ಯಕರ್ಮಗಳನ್ನು ಮಾಡುವಾಗ ಆಗುವ ತಪ್ಪುಗಳನ್ನು ಬರೆದಿಟ್ಟು ಅದಕ್ಕಾಗಿ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು. ರಾತ್ರಿ ಮಲಗುವಾಗ ಮನೆ ಕೆಲಸದ ವರದಿಯನ್ನು ದೇವರಿಗೆ ಕೊಡಬೇಕು. ಮನೆಯಲ್ಲಿ ಒಂದು ಫಲಕ (ಹಲಗೆ) ಇಟ್ಟು ಅದರ ಮೇಲೆ ದಿನನಿತ್ಯವೂ ನಮ್ಮಿಂದಾದ ತಪ್ಪುಗಳನ್ನು ಬರೆಯಬೇಕು. ಮನೆಯ ಸದಸ್ಯರಿಗೆ ನಮ್ಮ ಮೇಲೆ ಗಮನವಿಡಲು ಹೇಳಬೇಕು. ಸಾಧನೆಯಲ್ಲಿ ಅವರ ಸಹಾಯವನ್ನು ತೆಗೆದುಕೊಳ್ಳಬೇಕು. ಅವರ ಸಂದರ್ಭದಲ್ಲಿ ನಮ್ಮಿಂದೇನಾದರೂ ತಪ್ಪುಗಳಾಗಿದ್ದರೆ, ನಮ್ಮ ಕಿವಿ ಹಿಡಿದು ಅವರಲ್ಲಿ ಕ್ಷಮೆಯಾಚಿಸಬೇಕು.
೧ ಆ. ಸಾಧನೆಯಿಂದ ನಮ್ಮ ನಡವಳಿಕೆಯಲ್ಲಾದ ಸಕಾರಾತ್ಮಕ ಬದಲಾವಣೆಯನ್ನು ನೋಡಿ ಮನೆಯ ಇತರ ಸದಸ್ಯರು ಸಾಧನೆ ಮಾಡಲು ಪ್ರಾರಂಭಿಸುವುದು ಮತ್ತು ಮನೆಯ ವಾತಾವರಣವು ಬದಲಾಯಿಸುವುದು ! : ನಾವೇ ನಮ್ಮ ಶುದ್ಧೀಕರಣ ಪ್ರಕ್ರಿಯೆಯನ್ನು ಮಾಡಲು ಪ್ರಾರಂಭಿಸಿದರೆ, ಮನೆಯವರು ನಮ್ಮನ್ನು ನೋಡುವ ದೃಷ್ಟಿಕೋನವು ಬದಲಾಗುತ್ತದೆ. ಸತತವಾಗಿ ಆಗುವ ತಪ್ಪುಗಳ ಮೇಲೆ ಗಮನವಿಟ್ಟು ಅದಕ್ಕನುಸಾರ ಸ್ವಯಂಸೂಚನೆ ತೆಗೆದು ಕೊಳ್ಳುವುದರಿಂದ ಕ್ರಮೇಣವಾಗಿ ನಮ್ಮ ಸ್ವಭಾವದೋಷಗಳು ಕಡಿಮೆಯಾಗುತ್ತವೆ ಮತ್ತು ನಮ್ಮ ಮುಖಚರ್ಯೆ ಹಾಗೂ ಮನಸ್ಸು ಆನಂದದಲ್ಲಿರತೊಡಗುತ್ತದೆ. ಮನೆಯವರಿಗೂ ನಮ್ಮಲ್ಲಾದ ಬದಲಾವಣೆಗಳು ಗಮನಕ್ಕೆ ಬರಲು ಪ್ರಾರಂಭವಾಗುತ್ತದೆ. ನಮಗಿಂತ ಹೆಚ್ಚು ಮನೆಯ ಸದಸ್ಯರು ನಮ್ಮ ನಡವಳಿಕೆಯ ನಿರೀಕ್ಷಣೆ ಮಾಡುತ್ತಿರುತ್ತಾರೆ. ಸಾಧನೆಯಿಂದ ನಮ್ಮಲ್ಲಿ ಬಂದ ಸ್ಥಿರತೆಯನ್ನು ನೋಡಿ ಇತರರಿಗೆ ನಮ್ಮ ಆಧಾರವೆನಿಸುತ್ತದೆ. ‘ಮೊದಲು ಇವರು ಹೇಗಿದ್ದರು, ಸಾಧನೆ ಮಾಡಿ ಇವರಲ್ಲಿ ಎಷ್ಟು ಸಕಾರಾತ್ಮಕ ಬದಲಾವಣೆಯಾಗಿದೆ ? ಎಂದು ಅವರಿಗನಿಸಿ ನಮ್ಮ ಆದರ್ಶ ಪಡೆದುಕೊಂಡು ಕ್ರಮೇಣ ಮನೆಯಲ್ಲಿ ಇತರ ಸದಸ್ಯರು ಸಾಧನೆಯನ್ನು ಪ್ರಾರಂಭಿಸುತ್ತಾರೆ. ಒಟ್ಟಾರೆ ಮನೆಯ ವಾತಾವರಣವೇ ಬದಲಾಯಿಸುತ್ತದೆ.
೧ ಇ. ‘ಮನೆಯಲ್ಲಿ ನಮ್ಮ ಜೊತೆ ಸಾಕ್ಷಾತ್ ಭಗವಂತನೇ ಇದ್ದಾನೆ’, ಎಂಬ ದೃಢ ಶ್ರದ್ಧೆಯಿಂದ ಸಾಧನೆ ಮಾಡಬೇಕು ! : ಮನೆಯಲ್ಲಿ ಒಬ್ಬರೇ ಇದ್ದು ಸಾಧನೆ ಮಾಡುವಾಗ ಮನೆಯಲ್ಲಿದ್ದು ಮಾಡಬಹುದಾದ ಸುಲಭ ಸೇವೆಗಳನ್ನು ಮಾಡಬೇಕು. ‘ನಾನು ಮನೆಯಲ್ಲಿ ಒಬ್ಬಳೇ ಇದ್ದೇನೆ, ಏನು ಮಾಡುವುದು ?, ಎಂಬಂತಹ ವಿಚಾರ ಮಾಡಬಾರದು. ‘ನಮ್ಮ ಜೊತೆ ಸಾಕ್ಷಾತ ಭಗವಂತನಿದ್ದಾನೆ. ಅವನು ಇಡೀ ಬ್ರಹ್ಮಾಂಡದ ಸಂಚಾಲಕನಿದ್ದಾನೆ. ಅಂತಹವನು ನಮ್ಮ ಜೀವನದ ಸಾರಥಿಯಾಗಲಾರನೇ ?’, ಎಂಬ ದೃಢ ಶೃದ್ಧೆಯಿಂದದಲೇ ಸಾಧನೆ ಮಾಡಬೇಕು.
೨. ಸಾಧನೆಯಲ್ಲಿ ಪ್ರಗತಿಗಾಗಿ ಸಮಷ್ಟಿ ಸಾಧನೆಯ ಮಹತ್ವ
೨ ಅ. ದೇವರು ಸಾಧಕರ ಮಾಧ್ಯಮದಿಂದ ನಮ್ಮಲ್ಲಿರುವ ಸ್ವಭಾವದೋಷಗಳನ್ನು ತೋರಿಸುತ್ತಿರುವುದರಿಂದ ಸಮಷ್ಟಿ ಸಾಧನೆಯ ಸತ್ವ ಪರೀಕ್ಷೆ ಆಗುತ್ತಿರುತ್ತದೆ : ಒಬ್ಬರೇ ಇದ್ದಾಗ ನಮಗೆ ಕಲಿಯಲು ಸಿಗಲಾರಷ್ಟು ಸಮಷ್ಟಿಯಲ್ಲಿ ಕಲಿಯುವ ಅವಕಾಶ ಸಿಗುತ್ತದೆ. ಸಮಷ್ಟಿಯಲ್ಲಿದ್ದರೆ ನಮ್ಮಲ್ಲಿರುವ ಗುಣ ಮತ್ತು ದೋಷಗಳು ಕೂಡಲೇ ಗಮನಕ್ಕೆ ಬರುತ್ತವೆ. ಸಮಷ್ಟಿಗೆ ಹೋದ ಮೇಲೆಯೇ ನಮ್ಮ ಸಾಧನೆಯ ನಿಜವಾದ ಸತ್ವಪರೀಕ್ಷೆಯಾಗುತ್ತದೆ. ಮನೆಯಲ್ಲಿ ಒಬ್ಬರೇ ಕುಳಿತು ನಾಮಜಪಾದಿ ಸಾಧನೆ ಮಾಡುವುದು ಸುಲಭ; ಏಕೆಂದರೆ ಅಲ್ಲಿ ನಮಗೆ ಯಾರೂ ನಮ್ಮ ಸ್ವಭಾವದೋಷಗಳನ್ನು ತೋರಿಸುವುದಿಲ್ಲ; ಆದರೆ ಸಮಷ್ಟಿ ಸಾಧನೆ ಮಾಡುವಾಗ ಮಾತ್ರ ದೇವರು ಸಾವಿರಾರು ಕಣ್ಣುಗಳಿಂದ ನಮ್ಮ ಗುಣ ಮತ್ತು ದೋಷಗಳನ್ನು ಸಹಸಾಧಕರ ಮಾಧ್ಯಮದಿಂದ ನೋಡುತ್ತಿರುತ್ತಾನೆ.
೨ ಆ. ಸಮಷ್ಟಿಯಲ್ಲಿ ಮನಸ್ಸಿಗನುಸಾರ ಮಾಡುವ ಪ್ರಮಾಣವು ಕಡಿಮೆಯಾಗಿ ಅಹಂ-ನಿರ್ಮೂಲನೆಗೆ ಸಹಾಯವಾಗುವುದು : ನಾವು ಒಬ್ಬರೇ ಇರುವಾಗ ನಾವು ಮಾಡಿದ ತಪ್ಪು ಮತ್ತು ಸರಿಯನ್ನು ಹೇಳಲು ಸ್ಥೂಲದಲ್ಲಿ ಯಾರೂ ಜೊತೆಯಲ್ಲಿರುವುದಿಲ್ಲ. ಒಂಟಿತನದಿಂದ ಹೊರಗೆ ಬಂದು ಸಮಷ್ಟಿಯ ಜೊತೆಯಲ್ಲಿ ಸಾಧನೆ ಮಾಡಿದರೆ, ಮನಸ್ಸಿಗನುಸಾರ ಮಾಡುವ ಪ್ರಮಾಣವು ಕಡಿಮೆಯಾಗಿ ಇತರರು ಹೇಳುವುದನ್ನು ಕೇಳುವ ವೃತ್ತಿಯು ಹೆಚ್ಚುತ್ತದೆ. ಇತರರಿಗೆ ಕೇಳಿ ಕೃತಿ ಮಾಡುವ ಸಂಸ್ಕಾರವು ನಿರ್ಮಾಣವಾಗುತ್ತದೆ. ಅದರಿಂದ ನಮ್ಮ ಅಹಂಕಾರವು ಕಡಿಮೆಯಾಗಲು ಸಹಾಯವಾಗುತ್ತದೆ.
೨ ಇ. ಸಮಷ್ಟಿ ಸಾಧನೆಯಲ್ಲಿ ಸಹಸಾಧಕರು ಹೇಳಿದ ತಪ್ಪುಗಳನ್ನು ಸ್ವೀಕರಿಸುವುದರಿಂದ ದೇವರಿಗೆ ಪ್ರಿಯವಾದ ‘ನಮ್ರತೆ’ ಎಂಬ ಗುಣ ಸಂವರ್ಧನೆಯಾಗುತ್ತದೆ : ಸಮಷ್ಟಿ ಸಾಧನೆ ಮಾಡಲು ವಾತಾವರಣವು ಅನುಕೂಲವಿದ್ದರೆ, ಮಾತ್ರ ಸಾಧಕರ ಸಹವಾಸದಲ್ಲಿದ್ದು ಸೇವೆಗೆ ಹೆಚ್ಚು ಪ್ರಾಧಾನ್ಯ ಕೊಡಬೇಕು; ಏಕೆಂದರೆ ಅದರಿಂದ ನಮ್ಮ ಪ್ರಗತಿಯು ಬೇಗ ಆಗುತ್ತದೆ. ಸಮಷ್ಟಿಯಲ್ಲಿ ಇತರ ಸಾಧಕರ ಮಾಧ್ಯಮದಿಂದ ‘ಸಮಷ್ಟಿ-ಈಶ್ವರನು ನಮಗೆ ನಮ್ಮ ಗುಣ-ಅವಗುಣಗಳನ್ನು ತೋರಿಸಿ ಸಾಧನೆಯಲ್ಲಿ ಮುಂದೆ ಹೋಗಲು ಸಹಾಯ ಮಾಡುತ್ತಿರುತ್ತಾನೆ. ಸಹಸಾಧಕರು ನಮ್ಮ ತಪ್ಪುಗಳನ್ನು ಹೇಳಿದ ನಂತರ ಅದನ್ನು ದೊಡ್ಡ ಮನಸ್ಸಿನಿಂದ ಸ್ವೀಕರಿಸಬೇಕು. ಇದರಲ್ಲೇ ನಮ್ಮ ಒಳಿತಿರುತ್ತದೆ. ಸ್ವೀಕಾರವೃತ್ತಿ ಹೆಚ್ಚುವುದರಿಂದ ನಮ್ಮಲ್ಲಿ ‘ನಮ್ರತೆ ಗುಣದ ಸಂವರ್ಧನೆಯಾಗುತ್ತದೆ. ನಮ್ರತೆಯಿಂದ ನಾವು ಸಾಧಕರ, ಸಂತರ, ಕೊನೆಗೆ ದೇವರ ಪ್ರೀತಿಗೂ ಪಾತ್ರರಾಗುತ್ತೇವೆ.
೨ ಈ. ಸಮಷ್ಟಿ ಸತ್ಸಂಗದಿಂದ ಮನೋಲಯ ಮತ್ತು ಬುದ್ಧಿಲಯವಾಗಿ ದೇವರ ಪ್ರಾಪ್ತಿಯಾಗುತ್ತದೆ : ಸಮಷ್ಟಿ ಸತ್ಸಂಗಕ್ಕೆ ಬಹಳ ಮಹತ್ವವಿದೆ. ಸಾಧ್ಯವಾದಷ್ಟು ಸಮಷ್ಟಿಯಲ್ಲಿದ್ದು ಸಾಧನೆ ಮತ್ತು ಸೇವೆಯನ್ನು ಮಾಡಲು ಪ್ರಯತ್ನಿಸಿ ನಮ್ಮ ತಪ್ಪುಗಳ ಕಡೆಗೆ ಸತತ ಗಮನಕೊಟ್ಟರೆ ಬೇಗ ಗುರುಕೃಪೆಯಾಗಲು ಸಾಧ್ಯವಾಗುತ್ತದೆ. ಅದರಿಂದ ಮನೋಲಯ ಮತ್ತು ಬುದ್ಧಿಲಯವಾಗುವುದರಿಂದ ಬೇಗನೆ ದೇವರಪ್ರಾಪ್ತಿಯಾಗುತ್ತದೆ.
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (೨೬.೩.೨೦೨೨)