ಹಲಾಲ್ ಪ್ರಮಾಣಪತ್ರವಿರುವ ಯಾವುದೇ ವಸ್ತುಗಳನ್ನು ಹಿಂದೂಗಳು ಖರೀದಿಸಬಾರದು ! – ಶ್ರೀ. ಪ್ರಮೋದ ಮುತಾಲಿಕ, ಸಂಸ್ಥಾಪಕರು, ಶ್ರೀರಾಮ ಸೇನೆ

ಹುಬ್ಬಳ್ಳಿಯಲ್ಲಿ ಕನ್ನಡ ಭಾಷೆಯ ‘ಹಲಾಲ್ ಜಿಹಾದ್ ?’ ಗ್ರಂಥ ಲೋಕಾರ್ಪಣೆ

ಶ್ರೀ. ಪ್ರಮೋದ ಮುತಾಲಿಕ

ಹಲಾಲ್ ಅರ್ಥವ್ಯವಸ್ಥೆಯಿಂದಾಗಿ ಭಾರತಕ್ಕೆ ಹಾಗೂ ಹಿಂದೂ ಸಮಾಜಕ್ಕೆ ತುಂಬಾ ಹಾನಿ ಆಗುತ್ತಿದೆ ಇದರ ಗಾಂಭೀರತೆಯನ್ನು ಅರಿತು ನಾವೆಲ್ಲರೂ ಹಲಾಲ್ ಸರ್ಟಿಫಿಕೇಟ್ ಪಡೆದ ಯಾವುದೇ ವಸ್ತುಗಳನ್ನು ಖರೀದಿಸಬಾರದು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕರಾದ ಶ್ರೀ. ಪ್ರಮೋದ್ ಮುತಾಲಿಕ ಇವರು ಕರೆ ನೀಡಿದರು. ಅವರು ಅಕ್ಟೋಬರ್ ೧೫ ರಂದು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ಈ ವೇಳೆ ಶ್ರೀ ರಾಮಕೃಷ್ಣ ಮಿಷನ್‌ನ ಶ್ರೀ. ಸಂಭಾಜಿ ಎಸ್. ಕಲಾಲ, ಕಲಾಲ ಸಮಾಜದ ಶ್ರೀ. ರಮೇಶ ಮಂಡಳಕರ, ಕೃಷಿ ಉತ್ಪನ್ನ ಮಾರುಕಟ್ಟೆಯ ಮಾಜಿ ಸದಸ್ಯರಾದ ಶ್ರೀ. ಚನ್ನು ಹೊಸಮನಿ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ನಾರಾಯಣ ಯಾಜಿ,  ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಮತ್ತು ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಉಪಸ್ಥಿತರಿದ್ದರು. ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯವಾದಿ ನಾರಾಯಣಜಿ ಇವರು ಮಾತನಾಡುತ್ತಾ “ವೈಯಕ್ತಿಕ ಸ್ವಾರ್ಥವನ್ನು ಮರೆತು ಸಮಾಜದ ರಕ್ಷಣೆಗಾಗಿ ನಿಸ್ವಾರ್ಥವಾಗಿ ಅಧ್ಯಯನ ಮಾಡಿ ಗ್ರಂಥವನ್ನು ಬರೆದು ಲೋಕಾರ್ಪಣೆ ಮಾಡುತ್ತಿರುವ ಶ್ರೀ. ರಮೇಶ ಶಿಂದೆ ಇವರ ಕಾರ್ಯ ಶ್ಲಾಘನೀಯ’’, ಎಂದರು.