ಅತೀ ಶ್ರೀಮಂತ ಜನರ ಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ

(೧೦೦ ದಶಲಕ್ಷ ಡಾಲರ‍್ಸ ಎಂದರೆ ಸುಮಾರು ೮೩೦ ಕೋಟಿ ರೂಪಾಯಿಗಳ ಸಂಪತ್ತು ಇರುವ ವ್ಯಕ್ತಿಗೆ ಅತೀ ಶ್ರೀಮಂತ ಅಂದರೆ ‘ಸೆಂಟಿ-ಮಿಲಿಯನೆಯರ್ಸ್’ ಎಂದು ಕರೆಯಲಾಗುತ್ತದೆ.)

ನವದೆಹಲಿ – ಜಗತ್ತಿನಾದ್ಯಂತ ೨೫ ಸಾವಿರದ ೪೯೦ ಅತೀ ಶ್ರೀಮಂತ ಜನರಲ್ಲಿ (‘ಸೆಂಟಿ -ಮಿಲಿಯನೆಯರ್ಸ್’ಗಳಲ್ಲಿ) ಭಾರತವು ಇಂತಹ ೧ ಸಾವಿರದ ೧೩೨ ಅತೀ ಶ್ರೀಮಂತ ಜನರ ದೇಶವಾಗಿದೆ. ಅಮೇರಿಕಾ (೯ ಸಾವಿರದ ೭೩೦ ಅತೀ ಶ್ರೀಮಂತರು) ಹಾಗೂ ಚೀನಾ (೨ ಸಾವಿರದ ೨೧ ಅತೀ ಶ್ರೀಮಂತರು)ದ ನಂತರ ಈ ಸಂದರ್ಭದಲ್ಲಿ ಭಾರತವು ಮೂರನೇಯ ಕ್ರಮಾಂಕದಲ್ಲಿದೆ. ಯುನೈಟೆಡ್ ಕಿಂಗಡಮ್‌ (೯೬೮) ನಾಲ್ಕನೆಯ ಕ್ರಮಾಂಕದಲ್ಲಿದ್ದು ಜರ್ಮನಿಯು (೯೬೬) ಐದನೆಯ ಕ್ರಮಾಂಕದಲ್ಲಿದೆ. ಈ ಅಂಕೆಸಂಖ್ಯೆಯು ಹೆನ್ಲೆ ಅಂಡ್ ಪಾರ್ಟನರ್ಸ್ ಎಂಬ ಅಂತರ್ರಾಷ್ಟ್ರೀಯ ಬಂಡವಾಳ ಸ್ಥಳಾಂತರ ಸಲಹೆಗಾರ ಕಂಪನಿಯ ವರದಿಯಿಂದ ಬಹಿರಂಗವಾಗಿದೆ.

೧. ಈ ವರದಿಯ ಪ್ರಕಾರ ಭಾರತವು ಯುನೈಟೆಡ್ ಕಿಂಗಡಮ್‌, ಜರ್ಮನಿ, ರಷ್ಯಾ ಹಾಗೂ ಸ್ವಿತ್ಝರ್ಲ್ಯಾಂಡನಂತಹ ಪ್ರಗತಿಪರ ದೇಶಗಳನ್ನು ಹಿಂದಿಕ್ಕಿದೆ.

೨. ಅತೀ ಶ್ರೀಮಂತರಾಗುವವರ ಪ್ರಮಾಣವು ವಿಯೆಟ್ನಾಮ್, ಭಾರತ ಮತ್ತು ಮಾರಿಷಸ್‌ನಲ್ಲಿ ಅತ್ಯಂತ ಹೆಚ್ಚಿದೆ.

೩. ನ್ಯೂಯಾರ್ಕ್ ನಗರದಲ್ಲಿ ಎಲ್ಲಕ್ಕಿಂತ ಹೆಚ್ಚು ಅತೀ ಶ್ರೀಮಂತ ಜನರು ವಾಸಿಸುತ್ತಾರೆ. ಮುಂಬೈ ಈ ಪಟ್ಟಿಯಲ್ಲಿ ೧೫ ನೇ ಸ್ಥಾನದಲ್ಲಿದ್ದು ಇಲ್ಲಿ ೨೪೩ ಅತೀ ಶ್ರೀಮಂತರು ವಾಸಿಸುತ್ತಾರೆ.