ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರು ೯ ವಿಶ್ವವಿದ್ಯಾನಿಲಯದ ಕುಲಪತಿಗಳ ತ್ಯಾಗ ಪತ್ರ ಕೇಳಿದರು !

ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದಿಂದ, ‘ಶಿಕ್ಷಣದ ಕೇಸರೀಕರಣ ಮಾಡಲಾಗುತ್ತಿದೆ’, ಎಂದು ಟೀಕೆ !

ತಿರುವನಂತಪುರ (ಕೇರಳ) – ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರು ರಾಜ್ಯದ ೯ ವಿಶ್ವವಿದ್ಯಾಲಯದ ಕುಲಪತಿಗಳ ತ್ಯಾಗ ಪತ್ರ ನೀಡಲು ಆದೇಶಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಅವರು ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ನ್ಯಾಯಾಲಯದಿಂದ ವಿಶ್ವವಿದ್ಯಾಲಯಕ್ಕೆ ಅನುದಾನ ಆಯೋಗದ ನಿಯಮಗಳ ಉಲ್ಲಂಘನೆ ಮಾಡುತ್ತಾ ಎಪಿಜೆ ಅಬ್ದುಲ್ ಕಲಾಂ ಔದ್ಯೋಗಿಕ ವಿಶ್ವವಿದ್ಯಾಲಯದ ಕುಲಪತಿಯ ನೇಮಕ ರದ್ದು ಪಡಿಸುವ ಆದೇಶ ನೀಡಲಾಗಿತ್ತು. ಈ ಆದೇಶದಿಂದಾಗಿ ರಾಜ್ಯಪಾಲ ಖಾನ್ ಇವರು ಕೇರಳ ವಿಶ್ವವಿದ್ಯಾಲಯ, ಮ. ಗಾಂಧಿ ವಿಶ್ವವಿದ್ಯಾನಿಲಯ, ಕೊಚ್ಚಿ ವಿಶ್ವವಿದ್ಯಾನಿಲಯ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ, ಕೇರಳ ವಿಶ್ವವಿದ್ಯಾಲಯ ಆಫ್ ಫಿಶರೀಸ್ ಅಂಡ್ ಓಶಿಯನ್ ಸ್ಟಡೀಸ್, ಕನ್ನೂರ್ ವಿಶ್ವವಿದ್ಯಾಲಯ, ಎಪಿಜೆ ಅಬ್ದುಲ್ ಕಲಾಂ ಟೆಕ್ನಾಲಜಿ ವಿಶ್ವವಿದ್ಯಾಲಯ, ಶ್ರೀ ಶಂಕರಾಚಾರ್ಯ ವಿಶ್ವವಿದ್ಯಾಲಯ ಆಫ್ ಸಂಸ್ಕೃತ ವಿಶ್ವವಿದ್ಯಾಲಯ ಆಫ್ ಕೈಲಿಕಟ್, ಮಲಯಾಳಂ ವಿಶ್ವವಿದ್ಯಾಲಯ ಇದರ ಕುಲಪತಿಗಳಿಗೆ ತ್ಯಾಗಪತ್ರ ನೀಡಲು ಆದೇಶಿಸಿದ್ದಾರೆ.

ರಾಜ್ಯಪಾಲ ಖಾನ್ ಇವರು ಈ ಆದೇಶಕ್ಕೆ ರಾಜ್ಯದಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರದಿಂದ ಭಾಜಪ ಮತ್ತು ಸಂಘ ಇವುಗಳ ಷಡ್ಯಂತ್ರ ಇದೇ ಎಂದು ಆರೋಪಿಸಿದ್ದಾರೆ. ‘ಈ ಆದೇಶವೆಂದರೆ ಪ್ರಜಾಪ್ರಭುತ್ವದ ಎಲ್ಲಾ ನಿಯಮಗಳ ಉಲ್ಲಂಘನೆಯಾಗಿದೆ, ಶಿಕ್ಷಣದ ಕೇಸರಿಕರಣ ಮಾಡುವ ಉದ್ದೇಶದಿಂದ ಇದೆಲ್ಲವೂ ನಡೆಯುತ್ತಿದೆ’, ಎಂದು ಅವರು ಹೇಳಿದರು.