ಕೊಯಮತ್ತೂರು (ತಮಿಳುನಾಡು) ದೇವಸ್ಥಾನದ ಸಮೀಪದಲ್ಲಾದ ಸ್ಫೋಟದ ಹಿಂದೆ ಭಯೋತ್ಪಾದಕರ ಕೈವಾಡ ಇರುವ ಶಂಕೆಯ ಹಿನ್ನೆಲೆಯಲ್ಲಿ ತನಿಖೆ

ಸ್ಫೋಟದಲ್ಲಿ ಸಾವನ್ನಪ್ಪಿದ ಜಮೇಶಾ ಮುಬೀನ ಇವನನ್ನು ಇಸ್ಲಾಮಿಕ್ ಸ್ಟೇಟ್ ಜೊತೆಗಿನ ಸಂಬಂಧಕ್ಕಾಗಿ ಕಳೆದ ವರ್ಷ ತನಿಖೆ ನಡೆಸಲಾಗಿತ್ತು!

ಕೊಯಮತ್ತೂರು (ತಮಿಳುನಾಡು) – ಅಕ್ಟೋಬರ್ ೨೩ ರಂದು ಕೊಟ್ಟೈ ಈಶ್ವರಂ ದೇವಸ್ಥಾನದ ಬಳಿ ಚತುಶ್ಚಕ್ರ ವಾಹನದಲ್ಲಿ ಆದ ಸ್ಫೋಟದ ಹಿಂದೆ ಭಯೋತ್ಪಾದಕರ ಕೈವಾಡವಿದೆಯೇ ? ಈ ನಿಟ್ಟಿನಲ್ಲಿ ತಮಿಳುನಾಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ತನಿಖೆಗಾಗಿ ೬ ಪೊಲೀಸ ತಂಡಗಳನ್ನು ಸ್ಥಾಪಿಸಲಾಗಿದೆ. ಈ ಸ್ಫೋಟದಲ್ಲಿ ಜಮೇಜಾ ಮುಬೀನ (೨೫ ವರ್ಷ) ಎಂಬ ಯುವಕನು ಮೃತಪಟ್ಟಿದ್ದಾನೆ. ಇಸ್ಲಾಮಿಕ್ ಸ್ಟೇಟ್ ಜೊತೆಗಿನ ಸಂಬಂಧಕ್ಕಾಗಿ ೨೦೧೯ ರಲ್ಲಿ ‘ಮುಬೀನ’ ಅನ್ನು ತನಿಖೆ ಮಾಡಲಾಗಿತ್ತು’, ಎಂದು ಪೊಲೀಸರು ತಿಳಿಸಿದ್ದಾರೆ. ‘ಭವಿಷ್ಯತ್ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ರಕ್ತಪಾತವನ್ನು ಮಾಡಿಸುವ ಸಿದ್ಧತೆ ನಡೆಯುತ್ತಿರುವ ಸಾಧ್ಯತೆಯಿದೆ’ ಎಂದು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಸಿ. ಸೈಲೇಂದ್ರ ಬಾಬು ವ್ಯಕ್ತಪಡಿಸಿದರು. ವಿಶೇಷವಾಗಿ ದೀಪಾವಳಿ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.

೧. ‘ಮುಬೀನ ೨ ಸಿಲಿಂಡರ್‌ಗಳನ್ನು ಇಟ್ಟುಕೊಂಡು ವಾಹನವನ್ನು ಓಡಿಸುತ್ತಿದ್ದನು ಮತ್ತು ಅವುಗಳಲ್ಲಿ ಒಂದು ಸ್ಫೋಟಗೊಂಡಿದೆ’, ಎಂದು ಪೊಲೀಸರು ತಿಳಿಸಿದರು. ಅವನ ಮನೆಯಲ್ಲಿ ಶೋಧ ನಡೆಸಿದಾಗ ಪೊಟಾಷಿಯಂ ನೈಟ್ರೇಟ್, ಅಲ್ಯೂಮಿನಿಯಂ ಪೌಡರ್, ಇದ್ದಿಲು ಮತ್ತು ಸಲ್ಫರ್ ಸೇರಿದಂತೆ ಸ್ಫೋಟಕಗಳನ್ನು ತಯಾರಿಸಲು ಬಳಸಲಾಗುವ ಸಾಮಗ್ರಿಯನ್ನು ವಶಪಡಿಸಿಕೊಳ್ಳಲಾಯಿತು.

೨. ಸ್ಫೋಟಗೊಂಡ ಚತುಶ್ಚಕ್ರದ ವಾಹನದಲ್ಲಿ ವಾಹನಗಳ ಬಿಡಿಭಾಗಗಳು, ಮಾರ್ಬಲ್‌ಗಳು ಮತ್ತಿತರ ವಸ್ತುಗಳು ಪತ್ತೆಯಾಗಿದ್ದು, ವಿಧಿವಿಜ್ಞಾನ (ಫೊರೆನ್ಸಿಕ್) ವಿಭಾಗದಿಂದ ಪರಿಶೀಲನೆ ನಡೆಸಲಾಗುತ್ತಿದೆ, ಎಂದು ಅಧಿಕಾರಿಯೊಬ್ಬರು ತಿಳಿಸಿದರು.

೩. ಈ ಕುರಿತು ಭಾಜಪದ ರಾಜ್ಯಾಧ್ಯಕ್ಷ ಅಣ್ಣಾಮಲೈ ಇವರು, ರಾಜ್ಯದಲ್ಲಿನ ಡಿಎಂಕೆ ಸರಕಾರ ಈ ವಿಚಾರದಲ್ಲಿ ಮರೆಮಾಚುತ್ತಿದೆ ಎಂದು ಆರೋಪಿಸಿದ್ದಾರೆ.