ಸ್ವಯಂಸೇವೀ ಸಂಸ್ಥೆಯು ನೀಡಿದ ದೂರಿನ ನಂತರ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗವು ನೋಟೀಸು ಜಾರಿ ಮಾಡಿದೆ !
ನವದೆಹಲಿ-ಜಗತ್ಪ್ರಸಿದ್ಧ ‘ಆನ್‌ಲೈನ್ ಶಾಪಿಂಗ್’ ಕಂಪನಿ ಅಮೆಝಾನ್ ಇಂದಿನವರೆಗೆ ಅನೇಕ ಬಾರಿ ಹಿಂದೂ ದೇವತೆಗಳ ವಿಡಂಬನೆ ಮಾಡಿದೆ. ಈಗ ಈ ಕಂಪನಿಯು ಹಿಂದೂ ಮಕ್ಕಳನ್ನು ಕ್ರೈಸ್ತ ಪಂಥಕ್ಕೆ ಮತಾಂತರಿಸುವ ‘ಆಲ್ ಇಂಡಿಯಾ ಮಿಶನ್’ ಎಂಬ ಹೆಸರಿನ ಸ್ವಯಂಸೇವೀ ಸಂಸ್ಥೆಗೆ ಹಣವನ್ನು ಪೂರೈಸುತ್ತಿದೆ, ಎಂಬುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣ ಆಯೋಗವು ಅಮೇಝಾನ್‌ಗೆ ನೋಟೀಸು ಕಳುಹಿಸಿ ನವಂಬರ ೧ ರ ಒಳಗೆ ಸ್ಪಷ್ಟೀಕರಣ ನೀಡಬೇಕೆಂದು ಅದರ ಭಾರತದಲ್ಲಿನ ಪ್ರಮುಖ ಅಮಿತ ಅಗ್ರವಾಲರಿಗೆ ಆದೇಶವನ್ನು ನೀಡಿದೆ.
೧. ‘ಆಲ್ ಇಂಡಿಯಾ ಮಿಶನ್’ ಈ ಸಂಸ್ಥೆಯು ಭಾರತದಲ್ಲಿನ ಮಕ್ಕಳನ್ನು ಕ್ರೈಸ್ತ ಪಂಥಕ್ಕೆ ಮತಾಂತರಿಸುತ್ತಿರುತ್ತದೆ. ಈ ಪ್ರಕರಣದಲ್ಲಿ ಅರುಣಾಚಲ ಪ್ರದೇಶದ ಸ್ವಯಂಸೇವೀ ಸಂಸ್ಥೆ ‘ಸೋಶಲ್ ಜಸ್ಟೀಸ್ ಫೋರಮ್’ನಿಂದ ದೂರನ್ನು ದಾಖಲಿಸಲಾಗಿದೆ. ಈ ದೂರನ್ನು ಅವಲೋಕಿಸಿ ರಾಷ್ಟ್ರೀಯ ಮಕ್ಕಳ ಹಕ್ಕು ಸಂಸ್ಥೆಯು ಸಪ್ಟೆಂಬರದಲ್ಲಿ ‘ಅಮೇಝಾನ್’ ಗೆ ನೋಟೀಸು ಜಾರಿಗೊಳಿಸಿತ್ತು.
೨. ಈ ದೂರಿನಲ್ಲಿ ನಮೂದಿಸಿದಂತೆ ಸಂಪೂರ್ಣ ಭಾರತದಲ್ಲಿ ‘ಆಲ್ ಇಂಡಿಯಾ ಮಿಶನ್’ನ ೧೦೦ ಕ್ಕಿಂತಲೂ ಹೆಚ್ಚು ಅನಾಥಾಶ್ರಮಗಳಿವೆ. ಈ ಸಂಸ್ಥೆಯ ಸಂಕೇಸ್ಥಳ ಮತ್ತು ಸಾಮಾಜಿಕ ಮಾಧ್ಯಮಗಳ ಅಧಿಕೃತ ಪುಟಗಳಲ್ಲಿ ‘ಭಾರತದಲ್ಲಿನ ಜನರನ್ನು ಮತಾಂತರಿಸುವ ಉದ್ದೇಶವಿದೆ ಹಾಗೂ ಅದು ಭಾರತದ ವಿಶೇಷವಾಗಿ ಈಶಾನ್ಯ ಭಾರತ ಮತ್ತು ಝಾರಖಂಡದಲ್ಲಿ ಈ ಮೊದಲೆ ಅನೇಕ ಜನರನ್ನು ಮತಾಂತರಿಸಿದೆ’, ಎಂದು ದಾವೆ ಹೂಡಲಾಗಿದೆ. ಈ ಸಂಸ್ಥೆಗೆ ‘ಅಮೇಝಾನ್ ಇಂಡಿಯಾ’ದಿಂದ ನಿಧಿ ಸಿಗುತ್ತಿದೆ.
ಸಂಪಾದಕೀಯ ನಿಲುವು
|