ಸನಾತನದ ಮೊದಲ ಬಾಲ ಸಂತ ಪೂ. ಭಾರ್ಗವರಾಮ ಪ್ರಭು (೫ ವರ್ಷ) ಇವರ ಬಗ್ಗೆ ಕು. ಕುಹು ಪಾಂಡೇಯ ಇವರಿಗೆ ಅರಿವಾದ ದೈವೀ ಗುಣವೈಶಿಷ್ಟ್ಯಗಳು

ಪೂ. ಭಾರ್ಗವರಾಮ ಪ್ರಭು

`ನನ್ನ ಹೆಸರು ಭಾರ್ಗವರಾಮ, ರಾಮರಾಮ |’  ಈ ಶಬ್ದಗಳಲ್ಲಿ ಪೂ. ಭಾರ್ಗವರಾಮ ಇವರು ನನಗೆ ತಮ್ಮ ಪರಿಚಯವನ್ನು ಮಾಡಿಕೊಟ್ಟರು. ಯಾರ ಹೆಸರಿನಲ್ಲಿಯೇ ರಾಮನಿದ್ದಾನೆಯೋ, ಮತ್ತು ಯಾರು ತಮ್ಮ ಪರಿಚಯವನ್ನು ಮಾಡಿ ಕೊಡುವಾಗಲೂ ಪ್ರಭು ಶ್ರೀರಾಮನ ಜೊತೆಯನ್ನು ಬಿಡುವುದಿಲ್ಲವೋ, ಅಂತಹ ಮಹಾನ ಸಂತರ ವರ್ಣನೆಯನ್ನು ನಾನು ಶಬ್ದಗಳಲ್ಲಿ ಹೇಗೆ ಮಾಡಿಕೊಡಲಿ ? ನನಗೆ ಅರಿವಾದ ಅವರ ದೈವೀಗುಣವೈಶಿಷ್ಟ್ಯಗಳು ಮತ್ತು ಅವರ ಬಗ್ಗೆ ಬಂದ ಅನುಭೂತಿಗಳನ್ನು ನಾನು ಗುರುಗಳ ಚರಣಗಳಲ್ಲಿ ಅರ್ಪಿಸುತ್ತಿದ್ದೇನೆ.

ಕು. ಕುಹು ಪಾಂಡೆಯ

೧. ಸಹನಶೀಲತೆ

ಒಂದು ಸಲ ಅವರ ಹಲ್ಲು ಬಹಳ ನೋಯಿಸುತ್ತಿತ್ತು. ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ಅವರು ತಮ್ಮ ಹಲ್ಲಿನ ನೋವನ್ನು ಆನಂದದಿಂದ ಸಹಿಸಿಕೊಳ್ಳುತ್ತಿದ್ದರು. ಅವರನ್ನು ನೋಡಿದರೆ `ಅವರಿಗೆ ಹಲ್ಲು ನೋವಿದೆ’, ಎಂದು ಅನಿಸುತ್ತಿರಲೇ ಇಲ್ಲ. ಅವರು ನಿತ್ಯದಂತೆ ಆನಂದದಲ್ಲಿಯೇ ಇದ್ದರು. ಅವರ ತಾಯಿ ಹೇಳಿದಾಗ ನನಗೆ ಅವರ ಹಲ್ಲು ನೋಯಿಸುತ್ತಿದೆ ಎಂಬುದು ತಿಳಿಯಿತು.

೨. ಇತರರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವುದು

ಪೂ. ಭಾರ್ಗವರಾಮರವರ ಎಲ್ಲಕ್ಕಿಂತ ಹೆಚ್ಚು ಆಕರ್ಷಿಸುವ ಗುಣವೆಂದರೆ, ಅವರು ಯಾವುದೇ ವಯಸ್ಸಿನ ವ್ಯಕ್ತಿಯ ಜೊತೆಗೆ ಒಂದೇ ಕ್ಷಣದಲ್ಲಿ ಸಹಜವಾಗಿ ಬೆರೆಯುತ್ತಾರೆ. ಅವರು ಎದುರಿಗಿನ ವ್ಯಕ್ತಿಯ ಪ್ರಕೃತಿ ಮತ್ತು ಸ್ಥಿತಿಯನ್ನು ನೋಡಿ ಅವರೊಂದಿಗೆ ಮಾತನಾಡುತ್ತಾರೆ. `ತಮ್ಮ ಎದುರಿಗಿನ ವ್ಯಕ್ತಿಗೆ ಹೇಗೆ ಆನಂದವನ್ನು ಕೊಡಬೇಕು ?’ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ.

೩. ತಾಯಿಯ ಬಗ್ಗೆ ಗೌರವವಿದ್ದು ಅವರ ಆಜ್ಞಾಪಾಲನೆಯನ್ನು ಮಾಡುವುದು

ಅವರ ಹೆಸರಿನಲ್ಲಿ ಹೇಗೆ `ರಾಮ’ ಶಬ್ದ ಇದೆಯೋ, ಹಾಗೆಯೇ ಅವರ ಕೃತಿಗಳೂ ರಾಮನಂತೆಯೇ ಆದರ್ಶವಾಗಿರುತ್ತವೆ.  ಒಂದು ಸಲ ಅವರು ಓರ್ವ ಸಾಧಕಿಯ ಜೊತೆಗೆ ಸಂಚಾರವಾಣಿಯಲ್ಲಿ ಒಂದು ಚಲನಚಿತ್ರವನ್ನು (ವಿಡಿಯೋ) ನೋಡುತ್ತಿದ್ದರು. ಅನಂತರ ಅವರಿಗೆ ಇನ್ನೊಂದು ಚಲನಚಿತ್ರವನ್ನು ನೋಡುವುದಿತ್ತು. ಅವರ ಮಲಗುವ ಸಮಯವಾಗಿದ್ದರಿಂದ ಎರಡನೇಯ ಚಲನಚಿತ್ರವನ್ನು ಆರಂಭಿಸುವ ಮೊದಲು ಸಾಧಕಿಯು ಅವರಿಗೆ, ‘ಇನ್ನೊಂದು ಚಲನಚಿತ್ರ ನೋಡಲೇ ?’, ಎಂದು ಅಮ್ಮನ ಬಳಿ ಕೇಳಿ ಬನ್ನಿ’, ಎಂದು ಹೇಳಿದಳು. ಅದನ್ನು ಕೇಳಿದ ತಕ್ಷಣ ಅವರು ಒಂದು ಕ್ಷಣ ತಡ ಮಾಡದೆ ತಾಯಿಯ ಕಡೆಗೆ ಓಡುತ್ತಾ ಹೋದರು. ತಾಯಿ `ಆಯಿತು’ ಎಂದು ಒಪ್ಪಿಗೆ ಕೊಟ್ಟ ನಂತರವೇ ಅವರು ಹಿಂತಿರುಗಿ ಬಂದರು ಮತ್ತು ಅವರು ಅತ್ಯಂತ ನಮ್ರತೆಯಿಂದ, `ಅಮ್ಮ ಒಪ್ಪಿಗೆ ಕೊಟ್ಟಿದ್ದಾರೆ’ ಎಂದು ಹೇಳಿದರು.

ಈ ಪ್ರಸಂಗದಲ್ಲಿ ಅವರ ಕೃತಿ ಆದರ್ಶವಂತೂ ಆಗಿತ್ತು. ಅದರ ಜೊತೆಗೆ ಕೃತಿಯನ್ನು ಮಾಡುವಾಗ ಅವರ ಮುಖದ ಮೇಲಿನ ಹಾವಭಾವಗಳನ್ನು ನೋಡಿ ಅವರ ಮನಸ್ಸಿನಲ್ಲಿ ತಾಯಿಯ ಬಗ್ಗೆ ಇರುವ ಗೌರವ ಮತ್ತು`ಕೇಳಿಕೊಂಡು ಯೋಗ್ಯ ಕೃತಿ ಮಾಡುವ ಸಂಸ್ಕಾರ’ ಕೂಡ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಇದನ್ನು ನೋಡಿ ಅವರ ಬಗೆಗಿನ ಗೌರವ ಇನ್ನೂ ಹೆಚ್ಚಾಯಿತು.

 ೪. ಚುರುಕು ಬುದ್ಧಿ

ಅವರ ಜೊತೆಗೆ ಆಟವಾಡುವಾಗ `ಅವರ ಮಾತುಗಳಿಂದ ಇಷ್ಟು ಚಿಕ್ಕ ವಯಸ್ಸಿನಲ್ಲಿಯೂ ಅವರ ವಿಚಾರಗಳು, ಶಬ್ದಗಳ ಆಯ್ಕೆ, ನಿರೀಕ್ಷಣಾ ಕ್ಷಮತೆ ಮತ್ತು ಗ್ರಹಿಸುವ ಕ್ಷಮತೆ ಅಸಾಧಾರಣವಾಗಿರುವುದು’, ಗಮನಕ್ಕೆ ಬರುತ್ತದೆ.

೫. ಉತ್ತಮ ನಿರೀಕ್ಷಣಾಕ್ಷಮತೆ

ಒಂದು ಸಲ ಅವರು ನನ್ನ ಬಟ್ಟೆಗಳನ್ನಿಡುವ `ಬ್ಯಾಗ್’ನ್ನು ನೋಡಿದರು. ನಾನು ಬ್ಯಾಗಿನ `ಚೈನ್’ ತೆಗೆದು ವಸ್ತುಗಳನ್ನು ಒಳಗಿಡುವಾಗ, ನನಗೆ ಅದರ `ಚೈನ್‌ಅನ್ನು’ ಒಂದು ಕೈಯಿಂದ ಹಿಡಿಯಬೇಕಾಗುತ್ತಿತ್ತು. ಇದನ್ನು ನೋಡಿ ಅವರು, “ಮುಂದಿನ ಸಲ ಬರುವಾಗ ಹೀಗೆ ಚೈನ್‌ಅನ್ನು ಹಿಡಿದುಕೊಂಡು ಇರಬಾರದಂತಹ ಬ್ಯಾಗನ್ನು ತೆಗೆದುಕೊಂಡು ಬನ್ನಿ, ಆಗ ನಿಮಗೆ ಅದರಲ್ಲಿ ಎರಡೂ ಕೈಗಳಿಂದ ಸಹಜವಾಗಿ ಬಟ್ಟೆಗಳನ್ನು ತುಂಬಲು ಬರುತ್ತದೆ’’ ಎಂದು ಹೇಳಿದರು. ಇಷ್ಟು ಚಿಕ್ಕ ವಯಸ್ಸಿನಲ್ಲಿನ ಅವರ ಈ ವಿಚಾರವನ್ನು ಕೇಳಿ ನಾನು ಮಂತ್ರಮುಗ್ಧನಾದೆ.

೬. ಅಖಂಡ ಅನುಸಂಧಾನದಲ್ಲಿರುವುದು

ಅನೇಕ ಬಾರಿ ಅವರು ಆಡುತ್ತಿರುವಾಗ ಒಮ್ಮೆಲೆ ಶಾಂತ ಮತ್ತು ಸ್ಥಿರವಾಗಿ ಕುಳಿತುಕೊಳ್ಳುತ್ತಾರೆ. ಒಂದು ಸಲ ಅವರು, `ಎಲ್ಲರೂ ಶಾಂತ ಕುಳಿತುಕೊಂಡು ಮುದ್ರೆ ಮಾಡಿ ನಾಮಜಪ ಮಾಡೋಣ ಎಂದು ಹೇಳಿದರು.’ ಅನಂತರ ನನ್ನಂತಹ ಅಜ್ಞಾನಿ ಜೀವಕ್ಕೂ ವಾತಾವರಣದಲ್ಲಿನ ಶಾಂತಿಯನ್ನು ಅನುಭವಿಸಲು ಬಂದಿತು.

೭. ಪ್ರತಿಕೂಲ ಪರಿಸ್ಥಿತಿಯಲ್ಲಿ ಎಲ್ಲಕ್ಕಿಂತ ಮೊದಲು ಈಶ್ವರನ ಸ್ಮರಣೆಯನ್ನೇ ಮಾಡಬೇಕು

ಒಂದು ಸಲ ಪೂ. ಭಾರ್ಗವರಾಮ ಇವರಿಗೆ ಸಿಡಿಲಿನ ಧ್ವನಿ ಯನ್ನು ಕೇಳಿ ಹೆದರಿಕೆಯಾಯಿತು. ಇಂತಹ ಸಿಡಿಲಿನ ಧ್ವನಿಯನ್ನು ಕೇಳಿದರೆ ಸಾಮಾನ್ಯವಾಗಿ ಮಗು ಕೂಡಲೇ ತನ್ನ ತಾಯಿಯ ಬಳಿ ಓಡಿ ಹೋಗುತ್ತದೆ; ಆದರೆ ಅವರು ತಕ್ಷಣ, “ಎಲ್ಲ ದೇವತೆಗಳನ್ನು ಕರೆಯಿರಿ. ಎಲ್ಲರನ್ನೂ ಕರೆಯಿರಿ’’ ಎಂದು ಹೇಳಿದರು. ಅವರ ಈ ಕೃತಿಯಿಂದ `ಪ್ರತಿಕೂಲ ಪರಿಸ್ಥಿತಿಯಲ್ಲಿ ಮೊದಲು ಈಶ್ವರನ ಸ್ಮರಣೆಯನ್ನು ಮಾಡಬೇಕು’, ಎಂಬುದು ಕಲಿಯಲು ಸಿಕ್ಕಿತು.

೮. ಸತತವಾಗಿ ವರ್ತಮಾನಕಾಲದಲ್ಲಿದ್ದು ಪ್ರತಿಯೊಂದು ಕ್ಷಣ ಆನಂದವನ್ನು ಪಡೆದುಕೊಳ್ಳುವುದು

ಪೂ. ಭಾರ್ಗವರಾಮರವರ ಜೊತೆಗಿರುವಾಗ ನನಗೆ `ಭಾವ ಮತ್ತು ಭಾವನೆ’ ಇವುಗಳಲ್ಲಿನ ಭೇದ ಕಲಿಯಲು ಸಿಕ್ಕಿತು. ಅವರು ಎಲ್ಲರ ಜೊತೆಗಿರುತ್ತಾರೆ, ಆದರೆ ಅವರು ಯಾರಲ್ಲಿಯೂ ಸಿಲುಕಿ ಕೊಳ್ಳುವುದಿಲ್ಲ. ಅವರು ಸತತವಾಗಿ ವರ್ತಮಾನಕಾಲದಲ್ಲಿರುತ್ತಾರೆ. `ವರ್ತಮಾನಕಾಲದಲ್ಲಿದ್ದು ಪ್ರತಿಯೊಂದು ಕ್ಷಣ ಆನಂದವನ್ನು ಹೇಗೆ ತೆಗೆದುಕೊಳ್ಳಬೇಕು’, ಎಂಬುದನ್ನು ನಾನು ಅವರಿಂದ ಕಲಿತೆ.

೯. ವ್ಯಾಪಕತೆ

ಅವರ ಪ್ರೇಮವು ಕೇವಲ ಮನುಷ್ಯರ ಬಗ್ಗೆ ಮಾತ್ರ ಇಲ್ಲದೇ. `ಅವರು ಚಿಕ್ಕ ಇರುವೆಗಳ ಬಗ್ಗೆಯೂ ವಿಚಾರ ಮಾಡುತ್ತಾರೆ.’ ಒಂದು ಸಲ ಪೂ. ಭಾರ್ಗವರಾಮ ಇವರು ಶರಬತ್‌ಅನ್ನು ತಯಾರಿಸಿದ್ದರು. ಅದನ್ನು ಕುಡಿಯುವಾಗ ಅದರ ಕೆಲವು ಹನಿಗಳು ನೆಲದ ಮೇಲೆ ಬಿದ್ದವು. ಆಗ ಕೆಲವು ಇರುವೆಗಳು ಪೂ. ಭಾರ್ಗವರಾಮರು ತಯಾರಿಸಿದ ಅಮೃತರೂಪಿ ಶರಬತ್ತಿನ ರಸಪಾನ ಮಾಡಲು ಓಡಿ ಬಂದವು. ನಾನು ನೆಲದ ಮೇಲೆ ಬಿದ್ದಿರುವ ಶರಬತ್ತಿನ ಹನಿಗಳನ್ನು ಒರೆಸೋಣ ಎನ್ನುವಷ್ಟರಲ್ಲಿಯೇ, ಪೂ. ಭಾರ್ಗವರಾಮರು “ತಡೆಯಿರಿ, ಇರುವೆಗಳು ಬಂದಿವೆ. ಅವುಗಳಿಗೂ ಶರಬತ್ತನ್ನು ಕುಡಿಯಲಿ ಬಿಡಿ” ಎಂದು ಹೇಳಿದರು. ಇದನ್ನು ಕೇಳಿ ನನ್ನ ಭಾವ ಜಾಗೃತವಾಯಿತು.

೧೦. ಪ್ರೀತಿ

ಒಂದು ಸಲ ಅವರ ತಾಯಿ ಕೈಯಲ್ಲಿ ಕೆಲವು ಸಾಮಾನುಗಳನ್ನು ಹಿಡಿದುಕೊಂಡು `ಬಸ್’ನಲ್ಲಿ ಹತ್ತುತ್ತಿದ್ದರು. ಆಗ ಆ ಬಸ್ಸಿನಲ್ಲಿ ಹತ್ತುವ ಮೊದಲು ಪೂ. ಭಾರ್ಗವರಾಮ ಇವರು ಹಿಂದಿರುಗಿ ಯಾರಾದರೂ ಸಹಾಯಕ್ಕೆ ಬರಬಹುದೇ ? ಎಂದು ನೋಡಿದರು ಮತ್ತು`ಅಮ್ಮನಿಗೆ ಸಾಮಾನುಗಳನ್ನು ತೆಗೆದು ಕೊಳ್ಳಲು ಸಹಾಯ ಬೇಕಾಗಬಹುದೇ ? ಅಮ್ಮನಿಗೆ ತೊಂದರೆ ಆಗಲಿಕ್ಕಿಲ್ಲವಲ್ಲ ?’, ಎಂಬುದನ್ನು ಖಚಿತಪಡಿಸಿಕೊಂಡೇ ಅವರು ಬಸ್‌ನಲ್ಲಿ ಹತ್ತಿದರು.

ಒಂದು ಸಲ ಓರ್ವ ಬಾಲ ಸಾಧಕಿ ಅಳುತ್ತಿದ್ದಳು. ಅವರು ಅವಳಿಗೆ ಏಕೆ ಅಳುತ್ತಿದ್ದಿಯಾ ಎಂದು ಕೇಳಿದರು. ಆಗ ಅವರಿಗೆ `ಅವಳು ತನ್ನ ತಾಯಿಯನ್ನು ಹುಡುಕುತ್ತಿದ್ದಾಳೆ ಎಂಬುದು ತಿಳಿಯಿತು.’ ಆಗ ಅವರು ಓಡುತ್ತಾ ಹೋಗಿ ಅವಳ ತಾಯಿಯ ಕೈಯನ್ನು ಹಿಡಿದು ಕರೆದುಕೊಂಡು ಬಂದರು ಮತ್ತು ಆ ಬಾಲಸಾಧಕಿಯ ಎದುರಿಗೆ ನಿಲ್ಲಿಸಿದರು.

೧೧. ಕೃಷ್ಣನಂತೆ ಲೀಲೆಗಳನ್ನು ಮಾಡಿ ಸಮಷ್ಟಿಗೆ ಆನಂದ ಕೊಡುವುದು

ನಾನು ಕೋಣೆಗೆ ಬಂದ ಮೇಲೆ ಅವರು ಕೆಲವೊಮ್ಮೆ ನನ್ನ ವೇಲನ್ನು ಹಿಡಿದುಕೊಂಡು ನನ್ನ ಹಿಂದೆ ಅಡಗಿಕೊಳ್ಳುತ್ತಿದ್ದರು, ಮತ್ತು ಕೆಲವೊಮ್ಮೆ ಒಮ್ಮೆಲೆ ಸ್ಥಿರವಾಗಿ ನಿಲ್ಲುತ್ತಿದ್ದರು. ಹೀಗೆಲ್ಲ ಮಾಡಿ ಅವರು ತಮ್ಮ ಸುಂದರ ಲೀಲೆಗಳಿಂದ ನನಗೆ ಆನಂದವನ್ನು ಕೊಡುತ್ತಿದ್ದರು. ಸ್ವಲ್ಪದರಲ್ಲಿ ಮೇಲಿನಿಂದ ಅವರು ತುಂಟರ ಹಾಗೆ ಕಾಣಿಸಿದರೂ, `ಪ್ರತ್ಯಕ್ಷದಲ್ಲಿ ಇವೆಲ್ಲವೂ ಅವರ ಸಿಹಿ `ಕೃಷ್ಣ ಲೀಲೆ’ಗಳೇ ಆಗಿವೆ ಮತ್ತು ಅವುಗಳಿಂದ ಅವರು ಸಮಷ್ಟಿಗೆ ಆನಂದವನ್ನೇ ಕೊಡುತ್ತಾರೆ’, ಎಂದು ನನಗೆ ಅನಿಸಿತು.

೧೨. `ಪ್ರತಿಯೊಂದು ಒಳ್ಳೆಯ ಸಂಗತಿಯಿಂದ ಸಮಷ್ಟಿಗೆ ಲಾಭವಾಗಬೇಕು’, ಎಂದು ವಿಚಾರ ಮಾಡುವುದು

ಅವರು ಪ್ರತಿದಿನ ತಮ್ಮ ಪವಿತ್ರ ಕೈಗಳಿಂದ ನಮಗೆ (ಹಣ್ಣುಗಳ ರಸದ) ಶರಬತ್‌ನ್ನು ತಯಾರಿಸಿ ಕೊಡುತ್ತಿದ್ದರು. ಶರಬತ್ತನ್ನು ತಯಾರಿಸಿದ ಮೇಲೆ ಅವರು ಸ್ವತಃ ಅದರ ರುಚಿಯನ್ನು ನೋಡುತ್ತಿದ್ದರು. `ಅದರಲ್ಲಿ ಇನ್ನಷ್ಟು ರಸವನ್ನು ಹಾಕಬೇಕೋ, ಅಥವಾ ನೀರನ್ನು ಹಾಕಬೇಕು ?’, ಇದನ್ನು ಅವರು ನಮಗೂ ಕೇಳುತ್ತಿದ್ದರು. ಅನಂತರವೇ ಅವರು ಎಲ್ಲರಿಗೂ ಶರಬತ್ತನ್ನು ಕೊಡುತ್ತಿದ್ದರು. ನಂತರ ನಾವು ಅವರಿಗೆ `ಶರಬತ್ತು ತುಂಬಾ ಚೆನ್ನಾಗಿದೆ’, ಎಂದು ಹೇಳಿದ ಮೇಲೆ ಅವರು ತಕ್ಷಣ ನಮಗೆ `ಎಷ್ಟು ಹಣ್ಣಿನರಸ ಮತ್ತು ಎಷ್ಟು ನೀರನ್ನು ಹಾಕಿ ಅವರು ಆ ಶರಬತ್ತನ್ನು ತಯಾರಿಸಿದ್ದಾರೆ’, ಎಂಬುದನ್ನು ಹೇಳುತ್ತಿದ್ದರು.

ಸಾಮಾನ್ಯವಾಗಿ ನಾವು ಏನಾದರೂ ಒಳ್ಳೆಯದನ್ನು ಮಾಡಿದರೆ ಆಥವಾ ಈಶ್ವರನು ನಮಗೆ ಏನಾದರೂ ಸೂಚಿಸಿದರೆ, ಅದನ್ನು ನಾವು ನಮಗಾಗಿಯೇ ಇಟ್ಟುಕೊಳ್ಳುತ್ತೇವೆ ಇತರರಿಗೆ ಹೇಳುವುದಿಲ್ಲ; ಆದರೆ ಪೂ. ಭಾರ್ಗವರಾಮರವರು ಮಾತ್ರ `ಸಮಷ್ಟಿಗೂ ಅದರ ಲಾಭವಾಗಬೇಕು’, ಎಂದು ವಿಚಾರ ಮಾಡುತ್ತಾರೆ.

೧೩. ರಾಷ್ಟ್ರದ ಬಗೆಗಿನ ಪ್ರೇಮ

ಅ. ಪೂ. ಭಾರ್ಗವರಾಮರವರು ಅವರಲ್ಲಿನ ಆಟದ ಸಾಮನುಗಳ ಬಗ್ಗೆ ವರ್ಣಿಸುವಾಗ, ಅವರು ಎಲ್ಲಕ್ಕಿಂತ ದೊಡ್ಡ ಆಟದ ಸಾಮಾನುಗಳ ಬಗ್ಗೆ ಹೇಳುವಾಗ, “ಈ ಆಟಿಕೆಗಳು ಭಾರತದಲ್ಲಿ ತಯಾರಾಗಿವೆ (`ಮೇಡ ಇನ್ ಇಂಡಿಯಾ’) ಎಂದು ಹೇಳುತ್ತಿದ್ದರು.

ಆ. ಒಂದು ಸಲ ಎರಡು ವಾಹನಗಳ ಸ್ಪರ್ಧೆಯನ್ನು ಮಾಡುವಾಗ ಅವರು “ಇದು ಭಾರತದ ವಾಹನವಾಗಿದೆ, ಇದುವೇ ಗೆಲ್ಲುವುದು !’’ ಎಂದರು. ಅವರ ಈ ವಾಕ್ಯ ಕೇಳಿ ನನಗೆ ರೊಮಾಂಚನವಾಯಿತು.

ಇ. ಅವರ ಮನಸ್ಸಿನಲ್ಲಿ ನಮ್ಮ ದೇಶದ ಪ್ರಧಾನಿಗಳ ಬಗ್ಗೆ ತುಂಬಾ ಗೌರವವಿದೆ. ಇದು ಅವರ ಮಾತುಗಳಿಂದ ಗಮನಕ್ಕೆ ಬರುತ್ತದೆ.

– ಕು. ಕುಹು ಪಾಂಡೆಯ ಸನಾತನ ಆಶ್ರಮ, ರಾಮನಾಥಿ, ಗೊವಾ. (೪.೬.೨೦೨೨)