ತಾರೇಕ ಫತಹರವರ ಪಾಕಿಸ್ತಾನದ ನಿಜರೂಪವನ್ನು ಬಯಲಿಗೆ ತರುವ ಹೇಳಿಕೆ !
ಟೊರಂಟೋ (ಕೆನಡಾ) – ‘ಎಫ್.ಎ.ಟಿ.ಎಫ್’ಯು (‘ಫಾಯನಾನ್ಶಿಯಲ ಎಕ್ಶನ ಟಾಸ್ಕ ಫೊರ್ಸ’) ಪಾಕಿಸ್ತಾನದಿಂದ ‘ನಮಗೆ ಕರಡು ಪ್ರತಿಯಿಂದ ಹೊರಗೆ ತನ್ನಿ’ ಎಂದು ಮಾಡಲಾದ ಮನವಿಗೆ ಮಾನ್ಯತೆಯನ್ನು ನೀಡಬಾರದು, ಎಂದು ಕೆನಡಾದಲ್ಲಿನ ಪಾಕಿಸ್ತಾನಿ ಮೂಲದ ಹಿರಿಯ ಪತ್ರಕರ್ತರು ಹಾಗೂ ಪ್ರಸಿದ್ಧ ಲೇಖಕರಾದ ತಾರೇಕ ಫತಹರವರು ಹೇಳಿಕೆ ನೀಡಿದ್ದಾರೆ. ಅವರು ‘ಎಫ್.ಎ.ಟಿ.ಎಫ್’ಯು ತೆಗೆದುಕೊಂಡಿರುವ ನಿರ್ಣಯದ ಕೆಲವು ಗಂಟೆಗಳ ಮೊದಲು ಅಕ್ಟೋಬರ್ ೨೧ರಂದು ಅನೇಕ ಟ್ವೀಟ್‌ಗಳನ್ನು ಮಾಡಿ ಪಾಕಿಸ್ತಾನದ ಜಿಹಾದಿ ವಾಸ್ತವವನ್ನು ಬಯಲಿಗೆಳೆದಿದ್ದಾರೆ.
೧. ಫತಹರವರು ಟ್ವೀಟ್ ಮಾಡಿ ‘ಎಫ್.ಎ.ಟಿ.ಎಫ್’ಯು ಪಾಕಿಸ್ತಾನದ ಮುಲ್ತಾನಿನಲ್ಲಿರುವ ಒಂದು ಆಸ್ಪತ್ರೆಯ ಮಹಡಿಯ ಮೇಲೆ ಛಿದ್ರಛಿದ್ರವಾದ ಅವಸ್ಥೆಯಲ್ಲಿ ಕಂಡುಬಂದಿರುವ ೫೦೦ ಅಜ್ಞಾತ ಪ್ರೇತಗಳ ಬಗ್ಗೆ ಪಾಕಿಸ್ತಾನದ ಬಳಿ ವಿಚಾರಿಸಬೇಕು. ಮುಲ್ತಾನ ನಗರವು ಪಾಕಿಸ್ತಾನಿ ಸೈನ್ಯದ ಎಲ್ಲಕ್ಕಿಂತ ದೊಡ್ಡ ಕೇಂದ್ರಗಳ ಪೈಕಿ ಒಂದಾಗಿದೆ. ನಾಗರೀಕ ಸಂಘ ಹಾಗೂ ಮಾನವಾಧಿಕಾರ ಸಂಘಟನೆಗಳು ಈ ಎಲ್ಲ ಪ್ರೇತಗಳು ಪಾಕಿಸ್ತಾನ ಸೈನ್ಯವು ಅನೇಕ ವರ್ಷಗಳಿಂದ ಅಪಹರಣ ಮಾಡಿದ್ದ ಜನರದ್ದಾಗಿದೆ ಎಂದು ಆರೋಪಿಸಿವೆ, ಎಂದು ಹೇಳಿದರು.
೨. ಫತಹರವರು ಮಾತನಾಡುತ್ತ, ‘ಆದುದರಿಂದ ‘ಎಫ್.ಎ.ಟಿ.ಎಫ್’ಯು ಪಾಕಿಸ್ತಾನದ ವಿನಂತಿಯನ್ನು ದುರ್ಲಕ್ಷಿಸುವುದು ಆವಶ್ಯಕವಾಗಿದೆ. ‘ಎಫ್.ಎ.ಟಿ.ಎಫ್’ಯು ಮೊದಲು ಮುಲ್ತಾನಿನ ಪ್ರಕರಣದಲ್ಲಿ ತನಿಖೆ ನಡೆಸಲು ಮನವಿ ಮಾಡಬೇಕು. ಪಾಕಿಸ್ತಾನದಲ್ಲಿನ ಅಧೀಕೃತ ತನಿಖಾ ಆಯೋಗವು ೫ ಸಾವಿರ ಜನರು ಕಾಣೆಯಾಗಿರುವ ಬಗ್ಗೆ ಉಲ್ಲೇಖಿಸಿದೆ. ಪ್ರಸಾರ ಮಾಧ್ಯಮಗಳು ಹಾಗೂ ಮಾನವಾಧಿಕಾರ ಸಂಘಟನೆಗಳ ಅನುಸಾರ ಬಲುಚಿಸ್ತಾನ, ಸಿಂಧ, ಪಂಜಾಬ ಹಾಗೂ ಖೈಬರ ಪಖ್ತುನಖ್ವಾ ಪ್ರಾಂತ್ಯಗಳಿಂದ ೪೦ ಸಾವಿರ ಜನರು ಕಾಣೆಯಾಗಿದ್ದಾರೆ’.