ಹಿಂದೂ ಯುವತಿಯನ್ನು ಮದುವೆಯಾಗಿ ಅವಳನ್ನು ಕೊಲ್ಲುವುದಾಗಿ ಬೆದರಿಕೆ ಕೊಟ್ಟ ಮಹಮ್ಮದ ವಿರುದ್ಧ ಅಪರಾಧ ದಾಖಲು !

  • ಬೇಗುಸರಾಯ (ಬಿಹಾರ) ನಲ್ಲಿ ಲವ್ ಜಿಹಾದ್ !

  • ಫೇಸ್ ಬುಕ್ ನಲ್ಲಿ ಸ್ನೇಹ ಬೆಳೆಸಿಕೊಂಡು ಪ್ರೀತಿಯ ಜಾಲಕ್ಕೆ ಸೆಳೆದಿದ್ದನು !

ಬೇಗುಸರಾಯ (ಬಿಹಾರ) – ಇಲ್ಲಿ ಲವ್ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಿಂದೂ ಯುವತಿಯನ್ನು ಪ್ರೇಮಜಾಲಕ್ಕೆ ಸೆಳೆದು ಮದುವೆಯಾಗಿ ಎರಡು ಬಾರಿ ಗರ್ಭಪಾತ ಮಾಡಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿದ ಮೊಹಮ್ಮದ ಅಫ್ತಾಬ ಆಲಂ ಎಂಬ ಮತಾಂಧ ಮುಸಲ್ಮಾನನ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯು ಅವನ ವಿರುದ್ಧ ಕೊಲೆ ಬೆದರಿಕೆ ನೀಡಿದ್ದಾನೆಂದೂ ಆರೋಪಿಸಿದ್ದಾಳೆಂದು ಪೊಲೀಸ ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳೀಯ ಮಾಧ್ಯಮಗಳು ನೀಡಿದ ಮಾಹಿತಿ ಪ್ರಕಾರ, ಯುವತಿ ಸಮಸ್ತಿಪುರ ನಿವಾಸಿಯಾಗಿದ್ದು, ಬೇಗುಸರಾಯಿನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಫೇಸ್ ಬುಕ್ ಮೂಲಕ ಮಹಮ್ಮದನೊಂದಿಗೆ ಸ್ನೇಹವಾಗಿತ್ತು. ಮಹಮ್ಮದನು ಅವಳನ್ನು ಪ್ರೀತಿಯ ಜಾಲಕ್ಕೆ ಸೆಳೆದು ಅವಳೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಿದನು ಅವಳು ೨ ಬಾರಿ ಗರ್ಭಿಣಿಯಾದಾಗಲೂ ಬಲವಂತದಿಂದ ಗರ್ಭಪಾತ ಮಾಡಿಸಿದನು. ನಂತರ ಅವರಿಬ್ಬರೂ ಮದುವೆಯಾದರು. ನಂತರ ಮಹಮ್ಮದನು ಅವಳಿಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದರಿಂದ ಆಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದಳು. ನಂತರ, ಅವಳು ಮತ್ತೆ ಗರ್ಭಿಣಿಯಾದಾಗ ಗರ್ಭಪಾತವನ್ನು ವಿರೋಧಿಸಿದಳು. ಕೆಲ ಕಾಲದ ನಂತರ ಆಕೆಗೆ ಕೊಲೆ ಬೆದರಿಕೆ ಹಾಕಿ ಪರಾರಿಯಾದನು.
ಯುವತಿಯು ಈ ವಿಷಯವನ್ನು ತನ್ನ ತವರಲ್ಲಿ ತಿಳಿಸಿ ಸಹಾಯ ಕೇಳಿದಳು; ಆದರೆ ಅವಳು ಅವರನ್ನು ವಿರೋಧಿಸಿ ಮದುವೆಯಾದುದರಿಂದ ಅವರು ಸಹಾಯ ಮಾಡಲು ನಿರಾಕರಿಸಿದರು. ಕೊನೆಗೆ ಬೇಗುಸರಾಯನಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಆಕೆಯ ದೂರನ್ನು ದಾಖಲಿಸಿದ ನಂತರ, ಪೊಲೀಸ ವರಿಷ್ಠಾಧಿಕಾರಿಯ ಸಹಾಯದಿಂದ ಅಪರಾಧವನ್ನು ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

  • ಬಿಹಾರದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಇಲ್ಲದಿರುವುದರಿಂದ ಈ ಯುವತಿಗೆ ನ್ಯಾಯ ಸಿಗುವುದು ಬಹುತೇಕ ಅಸಾಧ್ಯ. ಇದಕ್ಕಾಗಿ ಕೇಂದ್ರ ಸರಕಾರವೇ ಇಡೀ ದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನನ್ನು ಜಾರಿಗೆ ತಂದು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುವುದು ಅವಶ್ಯಕ !
  • ಹಿಂದೂ ಯುವತಿಯರು ಧರ್ಮಶಿಕ್ಷಣದ ಕೊರತೆಯಿಂದ, ಮತಾಂಧ ಮುಸಲ್ಮಾನರ ಜಾಲಕ್ಕೆ ಸೆಳೆಯಲ್ಪಡುತ್ತಾರೆ ಎಂಬುದನ್ನು ಗಮನಿಸಿ !