ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ್ ಪುತಿನ್ ಇವರು ಉಕ್ರೆನ್‌ನ ಡೊನೆಸ್ಟ್ಕ್, ಲುಹಾನ್ಸಕ್, ಜಪೋರಿಜ್ಜಿಯಾ ಮತ್ತು ಖೆರಸ್ಯಾನ್ ಈ ೪ ಪ್ರದೇಶಗಳನ್ನು ರಷ್ಯಾಕ್ಕೆ ಜೋಡಿಸುವ ಅಧಿಕೃತ ಒಪ್ಪಂದಕ್ಕೆ ಹಸ್ತಾಕ್ಷರ ಮಾಡಿದರು. ಈ ಸಮಯದಲ್ಲಿ ಅವರು ಪಾಶ್ಯಾತ್ಯ ದೇಶ ಮತ್ತು ಅಮೇರಿಕಾವನ್ನು ಕಟುವಾಗಿ ಟೀಕಿಸಿದರು. ಪುತಿನ್ ಇವರು ಮಾತನಾಡುತ್ತಾ, ರಷ್ಯಾ ಜಾಗತಿಕ ನಿಯಮಗಳಿಗನುಸಾರ ವ್ಯವಹರಿಸಬೇಕೆಂದು ಪಾಶ್ಯಾತ್ಯ ದೇಶಗಳು ಅಪೇಕ್ಷಿಸುತ್ತವೆ, ಆದರೆ ಅವರೇ ಇಬ್ಬಗೆಯಿಂದ ವರ್ತಿಸುತ್ತಾರೆ ಮತ್ತು ಜಗತ್ತನ್ನು ಸಂಪೂರ್ಣವಾಗಿ ವಂಚಿಸುತ್ತಾರೆ ಎಂದು ಹೇಳಿದರು. ಈ ಸಮಯದಲ್ಲಿ ಅವರು ಒಂದು ಮಹತ್ವದ ಹೇಳಿಕೆಯನ್ನು ನೀಡಿದರು. ಅವರು, ಪಾಶ್ಚಾತ್ಯರು ಮಧ್ಯಯುಗದಲ್ಲಿ ತಮ್ಮದೇ ಆದ ವಸಾಹತುವಾದದ ಆಳ್ವಿಕೆಯನ್ನು ಆರಂಭಿಸಿದರು. ಅವರು ಭಾರತ ಮತ್ತು ಆಫ್ರಿಕಾವನ್ನು ಲೂಟಿ ಮಾಡಿದರು, ಅಮೇರಿಕಾದ ಜನರನ್ನು ಹತ್ಯೆಗೈದರು. ಪಾಶ್ಚಾತ್ಯರು ಇಡೀ ದೇಶವನ್ನು ಮಾದಕ ದ್ರವ್ಯಗಳ ಮೇಲೆ ಅವಲಂಬಿಸುವ ಮೂಲಕ ಇಡೀ ಗುಂಪುಗಳನ್ನು ಕೊಂದರು. ಪಾಶ್ಚಾತ್ಯರು ರಷ್ಯಾವನ್ನೂ ಸಹ ಇದೇ ಸ್ಥಿತಿಗೆ ತಳ್ಳಲು ಬಯಸಿದ್ದರು ಎಂದು ಹೇಳಿದರು.
ಚಿನ್ನ ಮತ್ತು ಸಂಪತ್ತನ್ನು ಕದ್ದೊಯ್ದರು !
ರಾಷ್ಟ್ರಾಧ್ಯಕ್ಷ ಪುತಿನ್ ಇವರು ಮಹತ್ವದ ಸಮಯದಲ್ಲಿ ಜಗತ್ತಿನೆದುರು ಸತ್ಯವನ್ನು ಮಂಡಿಸಿದ್ದಾರೆ. ಇತಿಹಾಸವನ್ನು ಅವಲೋಕಿಸಿದರೆ, ಆಂಗ್ಲರು, ಪೋರ್ತುಗೀಸ, ಡಚ್‌ರು ಭಾರತಕ್ಕೆ ವ್ಯಾಪಾರ ಮಾಡುವ ಉದ್ದೇಶದಿಂದ ಬಂದರು ಎಂದು ಮೇಲ್ನೋಟಕ್ಕೆ ಅನಿಸಿದರೂ ಅವರಿಗೆ ಇಲ್ಲಿನ ಅಧಿಕಾರವೇ ಬೇಕಿತ್ತು. ಅವರಿಗೆ ಭಾರತದ ಮೇಲೆ ಸಾರ್ವಭೌಮತೆ ಸ್ಥಾಪಿಸುತ್ತಾ ಭಾರತವನ್ನು ಲೂಟಿ ಮಾಡಿ ತಮ್ಮ ದೇಶವನ್ನು ಸಮೃದ್ಧಗೊಳಿಸುವುದಿತ್ತು. ಇದರಲ್ಲಿ ಅವರು ಯಶಸ್ವಿಯೂ ಆದರು. ಕೆಲವು ದಿನಗಳ ಹಿಂದೆ ಬ್ರಿಟನ್‌ನ ಮಹಾರಾಣಿ ಎಲಿಝಾಬೆಥ್ ದ್ವಿತೀಯ ಇವರು ನಿಧನರಾದರು. ಅವರ ಮೃತ್ಯುವಿನ ನಂತರ ಅವರ ಬಳಿಯಿರುವ ಚಿನ್ನ, ಮುತ್ತುಗಳ ಆಭರಣಗಳ ಬಗ್ಗೆ ಬಹಳ ಚರ್ಚೆಯಾಯಿತು. ಆಗ ಅವರ ಬಳಿಗೆ ಯಾವ ಅತ್ಯಂತ ಅಮೂಲ್ಯವಾದ ಆಭರಣಗಳಿದ್ದವೋ, ಅವುಗಳಲ್ಲಿ ಹೆಚ್ಚಿನ ಆಭರಣಗಳು ಭಾರತದ್ದು ಮತ್ತು ಉಳಿದದ್ದು ಆಫ್ರಿಕಾ ದೇಶಗಳದ್ದಾಗಿವೆ ಎಂದು ಗಮನಕ್ಕೆ ಬಂದಿತು, ಈ ಆಭರಣಗಳು ಆಂಗ್ಲರು ಭಾರತವನ್ನು ಆಳಿದ ಸಮಯದಲ್ಲಿನ ಲೂಟಿಯ ಪುರಾವೆಯಾಗಿದೆ. ಎಲ್ಲ ವಜ್ರಗಳಲ್ಲಿ ಎಲ್ಲಕ್ಕಿಂತ ಅಮೂಲ್ಯವಾದ ವಜ್ರವೆಂದರೆ ಭಾರತದ ಕೊಹಿನೂರ ವಜ್ರ ! ಈ ವಜ್ರವನ್ನು ರಾಣಿ ಸ್ವತಃ ಕಿರೀಟದಲ್ಲಿ ಧರಿಸುತ್ತಿದ್ದಳು.
ಬ್ರಿಟಿಶರು ತಯಾರಿಸಿದ (?) ಕೆಲವು ಬೆರಳೆಣಿಕೆಯಷ್ಟು ಆಭರಣಗಳಲ್ಲಿ ಕಂಡುಬರುವ ವಜ್ರಗಳು ಮತ್ತು ಮಾಣಿಕ್ಯಗಳು ಸಹ ಭಾರತದ್ದೇ ಆಗಿವೆ; ಏಕೆಂದರೆ ಆ ರೀತಿಯ ಮುತ್ತು, ವಜ್ರ ಮಾಣಿಕ್ಯಗಳ ಉತ್ಪಾದನೆ ಭಾರತದಲ್ಲಿಯೇ ಆಗುತ್ತಿತ್ತು. ಕೆಲವು ಇತಿಹಾಸಕಾರರ ಉಲ್ಲೇಖಗಳಿಗನುಸಾರ ಛತ್ರಪತಿ ಶಿವಾಜಿ ಮಹಾರಾಜರ ೩೨ ಮಣ ಚಿನ್ನದ ಸಿಂಹಾಸನ, ಛತ್ರಪತಿಗಳ ಭವಾನಿ ಖಡ್ಗ, ಅನೇಕ ರಾಜ-ಮಹಾರಾಜರ ಅಮೂಲ್ಯವಾದ ವಸ್ತುಗಳನ್ನು ಬ್ರಿಟಿಷರೇ ಕದ್ದೊಯ್ದರು. ಅದರಲ್ಲಿನ ಕೆಲವೊಂದು ವಸ್ತುಗಳು ಬ್ರಿಟಿಷರ ಸಂಗ್ರಹಾಲಯದಲ್ಲಿ ಕಂಡು ಬರುತ್ತವೆ. ರಾಜೀವ ದೀಕ್ಷಿತ ಇವರು ತಮ್ಮ ಹಳೆಯ ಭಾಷಣಗಳಲ್ಲಿ, ಆಂಗ್ಲರು, ಪೋರ್ತುಗೀಸ್, ಡಚ್‌ರು ಭಾರತದಿಂದ ಸಮುದ್ರಮಾರ್ಗದಿಂದ ಯಾವ ಹಡಗುಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದರೋ ಅದರಲ್ಲಿ ಅನೇಕ ಟನ್ ಚಿನ್ನ-ನಾಣ್ಯಗಳಿದ್ದವು. ಕೆಲವೊಮ್ಮೆ ಈ ಹಡಗುಗಳು ಸಮುದ್ರದಲ್ಲಿ ಮುಳುಗುತ್ತಿದ್ದವು, ಕೆಲವೊಮ್ಮೆ ಕಡಲ್ಗಳ್ಳರು ಹಡಗುಗಳ ಮೇಲೆ ದಾಳಿ ಮಾಡಿ ಚಿನ್ನವನ್ನು ಕದ್ದು ಪಲಾಯನಗೈಯ್ಯುತ್ತಿದ್ದರು, ಬ್ರಿಟಿಷರಿಗೆ ಮಾತ್ರ ಅಷ್ಟು ಚಿನ್ನ ಸಿಗುತ್ತಿರಲಿಲ್ಲ. ಉಳಿದ ಎಲ್ಲ ಚಿನ್ನವನ್ನು ಅವರು ಭಾರತದಿಂದ ಲೂಟಿ ಮಾಡಿದರು ಮತ್ತು ಅನಂತರ ಆ ದೇಶವು ಸಂಪನ್ನ ಮತ್ತು ಸಮೃದ್ಧವಾಯಿತು. ಭಾರತದ ಅತ್ಯುತ್ತಮ ಬಟ್ಟೆಗಳು, ಮಸಾಲೆ ಪದಾರ್ಥಗಳು, ವನಸ್ಪತಿ, ತೈಲವನ್ನು ಬ್ರಿಟಿಷರು ಕದ್ದೊಯ್ದರು ಮತ್ತು ಭಾರತೀಯರಿಗೆ ದಪ್ಪನೆಯ ಸಾಹಿತ್ಯಗಳನ್ನು ಬಳಸಲು ಇಟ್ಟರು. ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ, ಶ್ರೀಮಂತ ಮತ್ತು ಸಮೃದ್ಧ ಭಾರತವನ್ನು ಆಂಗ್ಲರು ಅಕ್ಷರಶಃ ಬಡಮಾಡಿದರು. ಇದು ಕಡಿಮೆಯೆಂಬಂತೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡ ಲಕ್ಷಾವಧಿ ಅಮಾಯಕ ಭಾರತಿಯರನ್ನು ಆಂಗ್ಲರು ಕೊಂದರು, ಅವರ ಪರಿವಾರವನ್ನು ನಾಶ ಮಾಡಿದರು, ಅಲ್ಲಿನ ಗುರುಕುಲವ್ಯವಸ್ಥೆ, ಕಾನೂನು ವ್ಯವಸ್ಥೆ, ರಾಜ್ಯವ್ಯವಸ್ಥೆಯನ್ನು ನಾಶ ಮಾಡಿದರು ಮತ್ತು ಭಾರತವನ್ನು ಬಡತನದ ಕಂದಕಕ್ಕೆ ತಳ್ಳಿದರು. ಇವೆಲ್ಲವುಗಳ ಕಡೆಗೆ ದುರ್ಲಕ್ಷಿಸುತ್ತಾ ಕೆಲವು ಆಧುನಿಕ ಬುದ್ಧಿವಂತರು, ಬ್ರಿಟಿಷರಿಂದ ಭಾರತಕ್ಕೆ ರೇಲ್ವೆ ಬಂದಿತು, ಕಾರಖಾನೆಗಳು ನಿರ್ಮಾಣವಾದವು ಎಂದು ಹೇಳಿದ್ದಾರೆ. ಯಾವುದೇ ದಾಳಿಕೋರರು ಎಂದಾದರೂ ದಾಳಿ ಮಾಡಿದ ದೇಶದ, ಅಲ್ಲಿನ ಜನತೆಯ ಹಿತದ ವಿಚಾರವನ್ನು ಮಾಡುತ್ತಾರೇನು ?
ಆಂಗ್ಲರು ಈ ವ್ಯವಸ್ಥೆಯನ್ನು ನಿರ್ಮಿಸಿದ್ದು ಭಾರತೀಯರಿಗಾಗಿ ಅಲ್ಲ, ಆದರೆ ತಮ್ಮ ಲಾಭಕ್ಕಾಗಿ. ಆಂಗ್ಲರು ಭಾರತವನ್ನು ಎಷ್ಟು ಲೂಟಿ ಮಾಡಿದ್ದಾರೆ ? ಎಂಬ ಬಗ್ಗೆ ಪ್ರತಿಯೊಬ್ಬ ತಜ್ಞರು ಬೇರೆ ಬೇರೆ ಅಂಕಿಅಂಶಗಳನ್ನು ಮಂಡಿಸುತ್ತಿದ್ದರೂ ಈ ಲೂಟಿಗೆ ‘ಅಗಣಿತ’ ಎಂಬ ವಿಶೇಷಣವು ಎಲ್ಲಕ್ಕಿಂತ ಚೆನ್ನಾಗಿ ಅನ್ವಯಿಸುತ್ತದೆ.
ಭಾರತೀಯರು ಇತಿಹಾಸವನ್ನು ಮರೆತಿದ್ದಾರೆ !
ರಾಷ್ಟ್ರಾಧ್ಯಕ್ಷ ಪುತಿನ್ ಇವರು ಎಷ್ಟು ಅಧ್ಯಯನಪೂರ್ವಕ ಹೇಳಿಕೆಯನ್ನು ನೀಡಿದ್ದಾರೆ ಎಂಬುದು ಈ ವಿವೇಚನೆಯಿಂದ ಗಮನಕ್ಕೆ ಬಂದಿರಬಹುದು. ಆಂಗ್ಲರು ಮತ್ತು ಇತರ ಪಾಶ್ಚಾತ್ಯ ದೇಶಗಳು ಭಾರತ ಮತ್ತು ಇತರ ಗುಲಾಮ ದೇಶಗಳನ್ನು ಎಷ್ಟು ಲೂಟಿ ಮಾಡಿದ್ದಾರೆ ? ಎಂಬುದನ್ನು ವಿಶೇಷವಾಗಿ ಭಾರತೀಯ ಮತ್ತು ವಿದೇಶಿ ಪ್ರಸಾರಮಾಧ್ಯಮಗಳಲ್ಲಿ ಚರ್ಚಿಸಲಾಗಿಲ್ಲ. ಅವರಿಗೆ ಅದರಲ್ಲಿ ಆಸಕ್ತಿ ಇಲ್ಲ. ‘ಕೇವಲ ಆಂಗ್ಲರು ಭಾರತಕ್ಕಾಗಿ ಏನು ಮಾಡಿದರು ?’, ಎಂಬ ಬಗ್ಗೆಯೇ ಕಂಠಪಾಠ ಮಾಡಲಾಗುತ್ತದೆ. ಆಂಗ್ಲರು ವ್ಯಾಪಾರಕ್ಕಾಗಿ ಭಾರತಕ್ಕೆ ಬರುವ ಮೊದಲು ಆಗಿನ ಓರ್ವ ಪ್ರವಾಸಿಗನು ಮಾಡಿದ ಪ್ರವಾಸದ ವರ್ಣನೆಯಲ್ಲಿ, ”ನಾನು ಸಂಪೂರ್ಣ ಭಾರತದಲ್ಲಿ ತಿರುಗಾಡಿದೆನು; ಆದರೆ ನನಗೆ ಇಲ್ಲಿ ಒಬ್ಬ ಭಿಕ್ಷುಕನೂ ಕಂಡು ಬರಲಿಲ್ಲ. ಇಲ್ಲಿ ಸಂಪನ್ನತೆ ಇದೆ. ಜನರು ಸುಸಂಸ್ಕೃತರಿದ್ದಾರೆ’’ ಎಂದು ಬರೆದಿಟ್ಟಿದ್ದಾನೆ. ‘ಭಾರತದಲ್ಲಿ ಚಿನ್ನದ ಹೊಗೆ ಹೊರಡುತ್ತಿತ್ತು’ ಇದು ಕೇವಲ ಲೋಕಾಪವಾದವಾಗಿರದೇ ವಸ್ತುಸ್ಥಿತಿಯೇ ಆಗಿದೆ. ಅದರ ಕಾರಣ ಭಾರತದಲ್ಲಿ ಮೊದಲಿನಿಂದಲೂ ಧರ್ಮಾಚರಣೆಯನ್ನು ಮಾಡಲಾಗುತ್ತಿತ್ತು, ಗುರುಕುಲ ಶಿಕ್ಷಣಪದ್ಧತಿಯಿಂದ ವಿದ್ಯಾರ್ಥಿಗಳನ್ನು ಸುಸಂಸ್ಕೃತ, ನೈತಿಕ ಮತ್ತು ವಿದ್ವಾಂಸರನ್ನಾಗಿ ಮಾಡಿತು. ನ್ಯಾಯದಾನದ ಒಳ್ಳೆಯ ಪದ್ಧತಿ ಇತ್ತು. ಅಪರಾಧಗಳ ಪ್ರಮಾಣ ಕಡಿಮೆ ಇತ್ತು. ಜನರು ಪರಿಶ್ರಮ ಪಡುವವರಾಗಿದ್ದರು ಮತ್ತು ಈಶ್ವರಪ್ರಾಪ್ತಿಗಾಗಿ ಕೆಲಸವನ್ನು ಪರಿಪೂರ್ಣ ಮಾಡುತ್ತಿದ್ದರು, ಕಲೆಗಳ ಅಭಿವೃದ್ಧಿ ಇತ್ತು. ಭಾರತದ ಈ ವೈಭವ ಬ್ರಿಟಿಷರ ಕಣ್ಣುಗಳನ್ನು ಕುಕ್ಕಿತು ಮತ್ತು ಅವರು ಭಾರತವನ್ನು ಲೂಟಿ ಮಾಡುವಲ್ಲಿ ಸಮಾಧಾನ ಪಟ್ಟುಕೊಳ್ಳದೇ, ಭಾರತದ ಸಂಪತ್ತನ್ನು ನಾಶ ಮಾಡಿದರು. ಇದಕ್ಕಾಗಿ ಅವರು ಇಲ್ಲಿನ ವ್ಯವಸ್ಥೆಯನ್ನು ನಾಶ ಮಾಡುವ ಪಾಪ ಮಾಡಿದರು ಮತ್ತು ಅದರ ಭೀಕರ ದುಷ್ಪರಿಣಾಮವನ್ನು ಇಂದಿಗೂ ಭಾರತಿಯರು ಭೋಗಿಸುತ್ತಿದ್ದಾರೆ. ಯಾವ ರಾಷ್ಟ್ರವು ತನ್ನ ಇತಿಹಾಸವನ್ನು ಮರೆಯುತ್ತದೆಯೋ, ಅದು ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂಬ ಒಂದು ವಚನವಿದೆ. ಸಾಮ್ಯವಾದಿ ಇತಿಹಾಸಕಾರರು ಭಾರತದ ತಪ್ಪು ಇತಿಹಾಸವನ್ನು ಬರೆದು ಭಾರತೀಯರಿಗೆ ಅವರ ಮೇಲಾದ ಅನ್ಯಾಯ, ಅತ್ಯಾಚಾರಗಳನ್ನು ಮರೆಸಿದರು. ಪರಿಣಾಮಸ್ವರೂಪ ಸ್ವಾತಂತ್ರ್ಯದ ನಂತರ ಆಂಗ್ಲೀಕರಣಗೊಂಡ ಪೀಳಿಗೆಗಳಿಗೆ ಆಂಗ್ಲರು ದೇವತೆಯ ರೂಪವೆಂದೇ ಅನಿಸತೊಡಗಿತು. ಭಾರತೀಯರ ಕಣ್ಣುಗಳನ್ನು ತೆರೆಯಿಸುವ ಕೆಲಸವನ್ನು ಮತ್ತೊಮ್ಮೆ ಸಾಮ್ಯವಾದಿಗಳೇ ಮಾಡಿದ್ದಾರೆ ಇದು ವಿಶೇಷ ! ಈಗ ಇಷ್ಟಕ್ಕೇ ನಿಲ್ಲದೇ ಬ್ರಿಟಿಷರು ಲೂಟಿ ಮಾಡಿದ ಭಾರತದ ಎಲ್ಲ ಸಂಪತ್ತಿನ ಲೆಕ್ಕಾಚಾರ ಮಾಡಿ ಅದನ್ನು ಬಡ್ಡಿ ಸಹಿತ ವಸೂಲಿ ಮಾಡಿ, ಈ ದೊಡ್ಡ ರಾಷ್ಟ್ರಕಾರ್ಯವನ್ನು ಆಡಳಿತಗಾರರು ಮಾಡಿ ಭಾರತದ ಗೌರವವನ್ನು ಹೆಚ್ಚಿಸಬೇಕು, ಎಂಬ ಅಪೇಕ್ಷೆ !