ಪಾಕಿಸ್ತಾನದ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರನ್ನು ಮಸೀದಿಯ ಹೊರಗೆ ಗುಂಡು ಹಾರಿಸಿ ಹತ್ಯೆ

ಪಾಕಿಸ್ತಾನದ ಬಲೂಚಿಸ್ತಾನ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರಾದ ಮಹಮ್ಮದ್ ನೂರ್ ಮೆಸ್ಕನಜಯಿ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಬಲೂಚಿಸ್ತಾನ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರಾದ ಮಹಮ್ಮದ್ ನೂರ್ ಮೆಸ್ಕನಜಯಿ ಇವರನ್ನು ಮಸೀದಿಯ ಹೊರಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಅವರು ನಮಾಜ್ ಮಾಡಿ ಹೊರಗೆ ಬರುವಾಗ ಈ ಘಟನೆ ನಡೆದಿದೆ. ಇಲ್ಲಿಯವರೆಗೆ ಈ ಹತ್ಯೆಯ ಹಿಂದಿನ ಕಾರಣತಿಳಿದು ಬಂದಿಲ್ಲ.