ವಿಶ್ವಸಂಸ್ತೆಯಲ್ಲಿ ಪಾಕಿಸ್ತಾನ ಪುನಃ ಕಾಶ್ಮೀರ ವಿಷಯವನ್ನು ಮಂಡಿಸಿತು : ಭಾರತವು ತಕ್ಕ ಪ್ರತ್ಯುತ್ತರ ನೀಡಿತು

ವಿಶ್ವಸಂಸ್ಥೆಯ ಭಾರತದ ಸ್ಥಾಯಿ ಪ್ರತಿನಿಧಿ ರುಚಿರಾ ಕಂಬೋಜ

ನ್ಯೂಯಾರ್ಕ – ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಭಾರತದ್ವೇಷಿ ಕೃತ್ಯ ಮತ್ತೊಮ್ಮೆ ಬಹಿರಂಗವಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ-ರಶಿಯಾ ಯುದ್ಧದ ವಿಷಯದ ಮೇಲೆ ಚರ್ಚೆ ನಡೆಯುತ್ತಿತ್ತು ಮತ್ತು ಪಾಕಿಸ್ತಾನದ ಪ್ರತಿನಿಧಿ ಮುನೀರ ಅಕ್ರಮ ಇವರು ಕಾಶ್ಮೀರ ವಿಷಯವನ್ನು ಎತ್ತಿ ಅದನ್ನು ರಶಿಯಾ-ಉಕ್ರೇನ ಯುದ್ಧದೊಂದಿಗೆ ತುಲನೆ ಮಾಡುತ್ತಿದ್ದರು. ತದನಂತರ ವಿಶ್ವಸಂಸ್ಥೆಯ ಭಾರತದ ಸ್ಥಾಯಿ ಪ್ರತಿನಿಧಿ ರುಚಿರಾ ಕಂಬೋಜ ಇವರು ಮಾತನಾಡುತ್ತಾ, “ಉಕ್ರೇನ-ರಶಿಯಾ ಯುದ್ಧದಂತಹ ಗಂಭೀರ ವಿಷಯದ ಮೇಲೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿರುವಾಗ; ಈ ಸಭೆಯನ್ನು ಪುನಃ ಒಂದು ದೇಶ ದುರುಪಯೋಗಪಡಿಸಿಕೊಳ್ಳುತ್ತಿರುವುದು ನಮಗೆ ಆಶ್ಚರ್ಯವೆನಿಸುತ್ತದೆ. ನನ್ನ ದೇಶದ ವಿರುದ್ಧ ಕ್ಷುಲ್ಲಕ ಮತ್ತು ನಿರರ್ಥಕ ಹೇಳಿಕೆಯನ್ನು ನೀಡಲಾಗುತ್ತಿದೆ” ಎಂದು ಛಡಿ ಏಟು ನೀಡಿದರು.

ಪಾಕಿಸ್ತಾನವು ಸಾಮೂಹಿಕ ತಿರಸ್ಕಾರಕ್ಕೆ ಪಾತ್ರ ! – ರುಚಿರಾ ಕಂಬೋಜ

‘ಮೇಲಿಂದ ಮೇಲೆ ಸುಳ್ಳು ಮಾತನಾಡುವ ಮಾನಸಿಕತೆಯಿರುವ ದೇಶ ಪ್ರತಿದಿನ ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದೆ; ಆದರೆ ಅದರಿಂದ ಯಾವುದೇ ಉಪಯೋಗವಾಗುತ್ತಿಲ್ಲ. ಇಂತಹ ಹೇಳಿಕೆಯ ಬಳಿಕ ಪಾಕಿಸ್ತಾನ ಸಾಮೂಹಿಕ ತಿರಸ್ಕಾರಕ್ಕೆ ಪಾತ್ರವಾಗಿದೆ. ಪಾಕಿಸ್ತಾನದ ಪ್ರತಿನಿಧಿ ವಿಶ್ವಾಸವಿಡಲಿ ಅಥವಾ ಇಡದೇ ಇರಲಿ, ಆದರೂ ಜಮ್ಮೂ-ಕಾಶ್ಮೀರದ ಸಂಪೂರ್ಣ ಪ್ರದೇಶವು ಭಾರತದ ಅವಿಭಾಜ್ಯ ಭಾಗವಾಗಿದೆ ಮತ್ತು ಮುಂದೆಯೂ ಇರಲಿದೆ’. ಎಂದು ರುಚಿರಾ ಕಂಬೋಜ ಇವರು ಹೇಳಿದರು. ‘ನಾವು ಪಾಕಿಸ್ತಾನವನ್ನು ಭಯೋತ್ಪಾದನೆ ನಿಲ್ಲಿಸುವಂತೆ ಹೇಳುತ್ತಿದ್ದೇವೆ, ಇದರಿಂದ ನಮ್ಮ ನಾಗರಿಕರಿಗೆ ಅವರ ಜೀವನದ ಮತ್ತು ಸ್ವಾತಂತ್ರ್ಯದ ಅಧಿಕಾರ ಸಿಗುವುದು’, ಎಂದು ಕಂಬೋಜ ಮುಂದೆ ಹೇಳಿದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ-ರಶಿಯಾ ಯುದ್ಧದ ಕುರಿತು ಮತದಾನ – ಭಾರತದ ತಟಸ್ಥ ನಿಲುವು

ಈ ಸಾಮಾನ್ಯ ಸಭೆಯಲ್ಲಿ ಉಕ್ರೇನಿನ ೪ ಪ್ರದೇಶಗಳನ್ನು ರಶಿಯಾ ವಶಕ್ಕೆ ಪಡೆದಿರುವುದನ್ನು ನಿಷೇಧ ವ್ಯಕ್ತಪಡಿಸುವ ಠರಾವನ್ನು ಸಮ್ಮತಿಸಲಾಯಿತು. ೧೪೩ ದೇಶಗಳು ಠರಾವಿನ ಪರವಾಗಿ, ೫ ದೇಶಗಳು ವಿರೋಧದಲ್ಲಿ ಮತದಾನ ಮಾಡಿದವು. ಭಾರತಸಹಿತ ೩೫ ದೇಶಗಳು ಮತದಾನದಲ್ಲಿ ಭಾಗವಹಿಸಲಿಲ್ಲ.