ದೆಹಲಿ ಗಲಭೆಯ ಸಮಯದಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿಯ ಹತ್ಯೆ ಮಾಡಿದ ಮುಸಲ್ಮಾನನ ಬಂಧನ

ನವದೆಹಲಿ – ಇಲ್ಲಿ ಎರಡು ವರ್ಷದ ಹಿಂದೆ ನಡೆದಿರುವ ಗಲಭೆಯ ಸಮಯದಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ ಶರ್ಮಾ ಇವರ ಹತ್ಯೆಯ ಪ್ರಕರಣದಲ್ಲಿ ಮುಂತಜೀಮ್ ಅಲಿಯಾಸ್ ಮುಸ ಕುರೇಶಿ ಇವನನ್ನು ತೆಲಂಗಾಣ ರಾಜ್ಯದಿಂದ ಬಂದಿಸಲಾಗಿದೆ. ಅವನ ಮೇಲೆ ಈ ಮೊದಲೇ ಅಪಹರಣ ಮತ್ತು ಅತ್ಯಾಚಾರದ ಆರೋಪವಿದೆ. ಈ ಪ್ರಕರಣದಲ್ಲಿ ಅವನನ್ನು ಈ ಮೊದಲೇ ಬಂಧಿಸಲಾಗಿತ್ತು. (ಎರಡು ಪ್ರಕರಣದಲ್ಲಿ ಮುಸಾ ಕುರೇಶಿ ಇವನಿಗೆ ಕಠಿಣ ಶಿಕ್ಷೆ ಆಗದೆ ಇರುವ ಪರಿಣಾಮ ! – ಸಂಪಾದಕರು)

ಶರ್ಮಾ ಇವರ ಹತ್ಯೆಯ ಪ್ರಕರಣದಲ್ಲಿ ಈ ಮೊದಲೇ ಆಮ್ ಆದ್ಮಿ ಪಕ್ಷದ ನಗರಸೇವಕ ತಾಹಿರ್ ಹುಸೇನ್ ಇವನನ್ನು ಬಂಧಿಸಲಾಗಿದೆ. ಶರ್ಮಾ ಇವರ ಮೇಲೆ ೪೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಚಾಕುಯಿಂದ ಇರಿದಿದ್ದಾನೆ. ಅವರ ಹತ್ಯೆ ಆದ ನಂತರ ಅವರ ಮೃತ ದೇಹ ಒಂದು ಕಾಲುವೆಯಲ್ಲಿ ಎಸೆಯಲಾಗಿತ್ತು.