ರಷ್ಯಾದಿಂದ ಫೇಸ್‌ಬುಕ್ ನ ಮೂಲ ಕಂಪನಿ ‘ಮೇಟಾ’ವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಣೆ !

ಮಾಸ್ಕೋ (ರಷ್ಯಾ) – ಫೇಸ್‌ಬುಕ ನಡೆಸುವ ಅಮೆರಿಕದಲ್ಲಿನ ಕಂಪನಿ ‘ಮೇಟಾ’ದ ವಿರುದ್ಧ ಅಕ್ಟೋಬರ್ ೧೧ ರದ್ದು ರಷ್ಯಾ ದೊಡ್ಡ ಕ್ರಮ ಕೈಗೊಂಡಿದೆ. ರಷ್ಯನ್ ಸರಕಾರದಿಂದ ಮಾರ್ಕ ಝುಗರಬರ್ಗ್ ಇವರ ಮೇಟಾ ಕಂಪನಿಯನ್ನು ಭಯೋತ್ಪಾದಕ ಮತ್ತು ಭಯೋತ್ಪಾದಕ ಸಂಘಟನೆಯ ಪಟ್ಟಿಯಲ್ಲಿ ಸೇರಿಸಿದೆ.

ಮಾರ್ಚ್ ೨೦೨೨ ರಲ್ಲಿ ರಷ್ಯನ್ ಸರಕಾರದಿಂದ ಫೇಸ್‌ಬುಕ, ಇನ್ಟಾಗ್ರಾಂ ಮತ್ತು ಟ್ವಿಟರ್ ಈ ರೀತಿಯ ಸಾಮಾಜಿಕ ಜಾಲತಾಣದ ಮೇಲೆ ರಷ್ಯಾದಲ್ಲಿ ನಿಷೇಧ ಹೇರಬೇಕು. ಮಾಸ್ಕೋದ ಒಂದು ನ್ಯಾಯಾಲಯದಿಂದ ಫೇಸ್‌ಬುಕ ಮೇಲೆ ಭಯೋತ್ಪಾದಕ ಕಾರ್ಯ ಚಟುವಟಿಕೆ ನಡೆಸುತ್ತಿರುವ ಆರೋಪ ಮಾಡಲಾಗಿತ್ತು. ‘ಮೇಟಾ’ ಉಕ್ರೇನಿನ ಫೇಸ್‌ಬುಕ ಉಪಯೋಗಿಸುವವರು ರಷ್ಯನ್ ಜನರ ವಿರುದ್ಧ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುವ ಮಾಹಿತಿ ಪ್ರಸಾರ ಮಾಡಲು ಅನುಮತಿ ನೀಡುತ್ತಿರುವುದರ ಬಗ್ಗೆ ನ್ಯಾಯಾಲಯ ಆರೋಪ ಮಾಡಿದೆ. ಮೇಟಾವು ಮಾತ್ರ ಈ ಆರೋಪ ತಳ್ಳಿ ಹಾಕಿದೆ. ಈ ವರ್ಷದ ಆರಂಭದಲ್ಲಿ ಮಾರ್ಕ್ ಝುಗರಬರ್ಗ ಇವರಿಗೆ ರಷ್ಯಾದಲ್ಲಿ ಪ್ರವೇಶ ನಿಷೇಧಿಸಲಾಗಿರುವ ೯೬೩ ಪ್ರಮುಖ ಅಮೆರಿಕನ್ ವ್ಯಕ್ತಿಗಳ ಪಟ್ಟಿಯಲ್ಲಿ ಸಹ ಸೇರಿಸಲಾಗಿದೆ.

ಸಂಪಾದಕೀಯ ನಿಲುವು

ಎಲ್ಲಿ ದೇಶವಿರೋಧಿ ಕಾರ್ಯಾಚರಣೆ ಮಾಡುತ್ತಿರುವ ಆರೋಪ ಮಾಡಿ ಫೇಸ್‌ಬುಕ ಮೇಲೆ ನಿಷೇಧ ಹೇರುವ ರಷ್ಯಾ ಮತ್ತು ಎಲ್ಲಿ ಮೇಲಿಂದ ಮೇಲೆ ಭಾರತದ ತಪ್ಪು ನಕಾಶೆ ಪ್ರಸಾರ ಮಾಡುವ ಸಾಮಾಜಿಕ ಜಾಲತಾಣ ಮೇಲೆ ನಿಷೇಧ ಹೇರದಿರುವ ಭಾರತ !