ಆಶ್ವಯುಜ ಕೃಷ್ಣ ಚತುರ್ಥಿಯಂದು (ಅಕ್ಟೋಬರ್ ೧೩ ರಂದು) ಸನಾತನದ ೨೩ ನೇ ಸಂತರಾದ ಪೂ. ವಿನಾಯಕ ಕರ್ವೆ ಇವರ ೮೦ ನೇ ಹುಟ್ಟುಹಬ್ಬ ಇದೆ. ಪೂ. ವಿನಾಯಕ ಕರ್ವೆಮಾಮಾ ಇವರಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಮುಂದೆ ನೀಡುತ್ತಿದ್ದೇನೆ.
೧. ಪೂ. ವಿನಾಯಕ ಕರ್ವೆಮಾಮಾ ಇವರ ಗುಣವೈಶಿಷ್ಟ್ಯಗಳು
೧ ಅ. ಸಮಯಪಾಲನೆ : `ಪೂ. ವಿನಾಯಕ ಕರ್ವೆಮಾಮಾನವರು ಸೇವೆ, ಊಟ ಇತ್ಯಾದಿ ಪ್ರತಿಯೊಂದು ಕೃತಿಯನ್ನು ಸಮಯಕ್ಕೆ ಸರಿಯಾಗಿ ಮಾಡುತ್ತಾರೆ. ಪ್ರತಿದಿನ ಬೆಳಿಗ್ಗೆ ಗುರುಪಾದುಕೆಗಳ ಪೂಜೆ ಮಾಡುತ್ತಾರೆ. ಆಗ ೫ ನಿಮಿಷ ಮೊದಲೇ ಬಂದು ಸಮಯಕ್ಕೆ ಪೂಜೆಯನ್ನು ಪ್ರಾರಂಭಿಸುತ್ತಾರೆ.
೧ ಆ. ಸ್ವಾವಲಂಬಿ :
೧. ಪೂ. ಮಾಮಾರವರಿಗೆ ಈಗ ೮೦ ವರ್ಷ ವಯಸ್ಸಾಗಿದ್ದರೂ ತಮ್ಮ ಬಟ್ಟೆಗಳನ್ನು ತೊಳೆಯುವುದು ಇತ್ಯಾದಿ ವೈಯಕ್ತಿಕ ಕೃತಿಗಳನ್ನು ಸ್ವತಃ ಮಾಡುತ್ತಾರೆ. ಅವರು ಮಹಾಪ್ರಸಾದಕ್ಕಾಗಿ ಒಂದು ಮಹಡಿಯಿಂದ ಕೆಳಗಿಳಿದು ಬರುತ್ತಾರೆ.
೨. ನಾನು ಪೂ. ಮಾಮಾನವರು ವಾಸವಿರುವ ಕೋಣೆಯ ಸ್ವಚ್ಛತೆ ಸೇವೆಗೆಂದು ಹೋದಾಗ `ನಿಮ್ಮ ಬಟ್ಟೆಯನ್ನು ತೊಳೆಯಲು ಇದ್ದರೆ ಕೊಡಿ’, ಎಂದು ಕೇಳಿದಾಗ ಪೂ. ಮಾಮಾನವರು, `ನಾನು ನನ್ನ ಬಟ್ಟೆ ತೊಳೆಯುತ್ತೇನೆ’, ಎನ್ನುತ್ತಾರೆ.
೧ ಇ. ಪೂ ಮಾಮಾನವರನ್ನು ನೋಡಿದಾಗ ಚಿಕ್ಕ ಮಗುವಿನಂತೆ ಮುಗ್ಧ ಹಾಗೂ ಸತತ ಆನಂದಾವಸ್ಥೆಯಲ್ಲಿರುತ್ತಾರೆ.
೧ ಈ. ಕಲಿಯುವ ವೃತ್ತಿ : ಒಮ್ಮೆ ಪೂ. ಮಾಮಾನವರು ರೇಶ್ಮೆಯ ಜುಬ್ಬ ಹಾಕಿಕೊಂಡಿದ್ದರು. ಆ ಜುಬ್ಬವನ್ನು ಕೈಯಿಂದ ತೊಳೆಯದೇ `ಡ್ರೈ ಕ್ಲೀನಿಂಗ್ ’ಗಾಗಿ (ಕೃತಕ ದ್ರವ್ಯಗಳಿಂದ, ಉದಾ. ಪೆಟ್ರೋಲ್ ಇತ್ಯಾದಿಗಳಿಂದ ರೇಶ್ಮೆ ವಸ್ತ್ರಗಳನ್ನು ತೊಳೆಯುವ ಕ್ರಿಯೆ ಮಾಡಲು) ಹೊರಗೆ ಕೊಡಬೇಕಾಗಿತ್ತು. ಅದಕ್ಕೆ ಅವರು, `ಜುಬ್ಬವನ್ನು `ಡ್ರೈ ಕ್ಲೀನಿಂಗ್’ ಗಾಗಿ ಹೊರಗೆ ಹಣ ಕೊಡುವುದಕ್ಕಿಂತ `ಡ್ರೈ ಕ್ಲೀನಿಂಗ್ ಹೇಗೆ ಮಾಡುತ್ತಾರೆ ?’, ಇದನ್ನು ನಾವು `ಗೂಗಲ್’ನಲ್ಲಿ ನೋಡೋಣ ಹಾಗೂ ಅದೇ ರೀತಿ ಮಾಡಲು ನಮಗೆ ಸಾಧ್ಯವಾಗುತ್ತಿದ್ದರೆ ನಾವೇ ಮಾಡೋಣ’’, ಎಂದರು. ಇದರಿಂದ ಅವರಲ್ಲಿ ಹೊಸ ವಿಷಯ ಕಲಿಯುವ ಜಿಜ್ಞಾಸೆ ಇರುವುದು ನನ್ನ ಗಮನಕ್ಕೆ ಬಂದಿತು.
೧ ಉ. ಧ್ಯೇಯವಿಟ್ಟು ಸಮಯಮಿತಿಯೊಳಗೆ ಸೇವೆ ಮಾಡಲು ಪ್ರಯತ್ನಿಸುವುದು : ಪೂ. ಮಾಮಾಮನವರು ಡಬ್ಬಿಗೆ ಕುಂಕುಮ ತುಂಬಿಸುವ ಸೇವೆ ಮಾಡುತ್ತಾರೆ. ಆಗ ಅವರು ‘೧೫ ನಿಮಿಷಗಳಲ್ಲಿ ೩೬ ಕುಂಕುಮದ ಡಬ್ಬಿ ತುಂಬುವುದು’, ಈ ರೀತಿ ಸಮಯಮಿತಿ ಹಾಕಿ ಧ್ಯೇಯವಿಟ್ಟುಕೊಂಡು ಸೇವೆ ಮಾಡುತ್ತಾರೆ. ಯಾವಾಗಾದರೂ ಅವರಿಂದ ಕಡಿಮೆ ಡಬ್ಬಿ ತುಂಬಿಸಲ್ಪಟ್ಟರೆ ಅವರು `ನನ್ನಿಂದ ಸೇವೆ ಏಕೆ ಕಡಿಮೆ ಆಯಿತು ? ನನಗೆ ಸೇವೆ ಮಾಡುವಾಗ ನಿದ್ರೆ ಬರುತ್ತಿತ್ತೇ ? ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಬರುತ್ತಿತ್ತೇ ?’, ಇದರ ಅಭ್ಯಾಸ ಮಾಡುತ್ತಾರೆ. ಅವರು ನಮ್ಮೆಲ್ಲ ಸಾಧಕರಿಗೂ ಸಮಯಮಿತಿ ಹಾಕಿ ಧ್ಯೆಯವಿಟ್ಟು ಸೇವೆ ಮಾಡಲು ಹೇಳುತ್ತಾರೆ ಮತ್ತು ಸೇವೆಯಾದ ನಂತರ ಸೇವೆಯ ಫಲನಿಷ್ಪತ್ತಿ ತೆಗೆಯಲು ಹೇಳುತ್ತಾರೆ.
೧ ಊ. ಪ್ರೇಮಭಾವ : ನಾನು ಪೂ. ಮಾಮಾನವರ ಕೋಣೆಯ ಸ್ವಚ್ಛತೆಯ ಸೇವೆ ಮುಗಿದ ನಂತರ ಅವರು ನನಗೆ ಯಾವಾಗಲೂ ‘ನಿನಗೆ ಯಾವ ತಿನಿಸನ್ನು ನೀಡಲಿ ? ನಿನಗೆ ಸಿಹಿ ಇಷ್ಟವಾಗುತ್ತದೆಯೇ ?’ ಎಂದು ಕೇಳಿ ನನಗೆ ಇಷ್ಟವಿರುವ ತಿಂಡಿ ನೀಡುತ್ತಾರೆ.
೧ ಎ. ಸತತ ನಾಮಜಪ ಮಾಡುವುದು : ಪೂ. ಮಾಮಾನವರು ಅಖಂಡ ನಾಮಜಪಿಸುತ್ತಾರೆ. ಅವರು ಸಾಧಕರ ಮೇಲೆ ನಾಮ ಜಪಾದಿ ಉಪಾಯ ಮಾಡಿದ ನಂತರ ತಮ್ಮ ಕೋಣೆಗೆ ಹೋಗಿ ಜಪಮಾಲೆ ಹಿಡಿದು ಪುನಃ ನಾಮಜಪಿಸಲು ಕುಳಿತುಕೊಳ್ಳುತ್ತಾರೆ.
೨. ಪೂ. ಕರ್ವೆ ಮಾಮಾನವರ ಅಮೂಲ್ಯ ಮಾರ್ಗದರ್ಶನ
೨ ಅ. ಆಧ್ಯಾತ್ಮಿಕ ಮಟ್ಟದ ವಿಚಾರ ಮಾಡದೆ ಕೇವಲ ಈಶ್ವರಪ್ರಾಪ್ತಿಗಾಗಿ ಪ್ರಯತ್ನ ಮಾಡಬೇಕು ! : ಆಧ್ಯಾತ್ಮಿಕ ಮಟ್ಟದ ಬಗ್ಗೆ ಅವರು ಹೇಳುತ್ತಾ, “ನಮಗೆ ಮಟ್ಟ ಬೇಕೋ ಈಶ್ವರನು ಬೇಕೋ? ನಮಗೆ ಈಶ್ವರನೇ ಬೇಕು. ಆದ್ದರಿಂದ ಮಟ್ಟದ ವಿಚಾರ ಮಾಡದೆ ಕೇವಲ ಈಶ್ವರಪ್ರಾಪ್ತಿಗಾಗಿ ಪ್ರಯತ್ನಿಸಿದರೆ ಮಟ್ಟ ತನ್ನಿಂದ ತಾನೇ ಹೆಚ್ಚುತ್ತದೆ. `ಈಶ್ವರಪ್ರಾಪ್ತಿ’ ಇದು ಮುಖ್ಯ ಉತ್ಪಾದನೆ (ಮೇನ್ ಪ್ರಾಡಕ್ಟ್) ಆಗಿದ್ದು ಆಧ್ಯಾತ್ಮಿಕ ಮಟ್ಟವು ಅದರ ಉಪ ಉತ್ಪಾದನೆ (ಅದರ ಪೂರಕ ಪರಿಣಾಮ ಇರುವ) (`ಬೈಪ್ರಾಡಕ್ಟ್’) ಇರುವುದು. ಮುಖ್ಯ ವಿಷಯ ಸರಿಯಾಗಿ ಅಂಗೀಕರಿಸಿದರೆ ಅದರ ಉಪ-ವಿಷಯ ತನ್ನಿಂದತಾನೇ ಸಾಧ್ಯವಾಗುತ್ತದೆ. ಆದ್ದರಿಂದ ನಾವು ನಮ್ಮ ಮಟ್ಟದ್ದಲ್ಲ ಕೇವಲ ಸಾಧನೆಯ ಪ್ರಯತ್ನವನ್ನು ಹೆಚ್ಚಿಸಬೇಕು’’, ಎಂದರು.
೨ ಆ. ಸಾಧಕರು ಈಶ್ವರನ ಅಖಂಡ ಸ್ಮರಣೆ ಮಾಡಬೇಕು ! : ನಾವು ದಿನವಿಡೀ `ನಾನು, ನನ್ನದು’ ಹೇಳುತ್ತಿರುತ್ತೇವೆ. ಅದರ ಬದಲು `ಈಶ್ವರ, ಈಶ್ವರನದು’ ಎಂದು ಹೇಳಿದರೆ ನಮ್ಮಿಂದ ಈಶ್ವರನ ಎಷ್ಟೋ ಸ್ಮರಣೆಯಾಗುತ್ತದೆ ! ನಾವು ಈಶ್ವರನ ಅಖಂಡ ಸ್ಮರಣೆ ಮಾಡಬೇಕು.
೩. ಕೃತಜ್ಞತೆ ಮತ್ತು ಪ್ರಾರ್ಥನೆ : `ಹೇ ಗುರುದೇವ, ಸಂತರಿಂದ ಕಲಿಯುವ ಅವಕಾಶ ನೀಡಿದ್ದಕ್ಕಾಗಿ ಕೋಟಿ ಕೋಟಿ ಕೃತಜ್ಞತೆಗಳು !
– ಕು. ರೇವತಿ ಮೊಗೇರ (ಆಧ್ಯಾತ್ಮಿಕ ಮಟ್ಟ ಶೇ. ೬೦), ಮಂಗಳೂರು (೩೦.೮.೨೦೨೧)