ಪಾಕಿಸ್ತಾನದಲ್ಲಿನ ಹಿಂದೂ ಮಹಿಳೆಯ ಸಾಮೂಹಿಕ ಅತ್ಯಾಚಾರ ಮತ್ತು ಥಳಿತ

ಆಸ್ಪತ್ರೆಯಲ್ಲಿನ ವೈದ್ಯರಿಂದ ಮಹಿಳೆಗೆ ಚಿಕಿತ್ಸೆ ನೀಡಲು ನಿರಾಕರಣೆ !

ಬಹಾವಲಪುರ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ ರಾಜ್ಯದಲ್ಲಿನ ಬಹಾವಲಪುರದಲ್ಲಿ ಕೂಲಿ ಮಾಡುವ ಗಂಗಾರಾಮ್ ಇವರ ಪತ್ನಿ ಇಲ್ಲಿಯ ಮುಸಲ್ಮಾನ ಜಮೀನ್ದಾರ ಮಹಮ್ಮದ್ ಅಕ್ರಂ ಇವನ ಹತ್ತಿರ ಕೆಲಸ ಕೇಳುವುದಕ್ಕೆ ಹೋಗಿದ್ದಳು. ಅವನು ಆಕೆಗೆ ಬೆದರಿಸಿ ಹಿಂತಿರುಗಿ ಕಳುಹಿಸಿದ್ದನು. ನಂತರ ಅಕ್ರಂ ಶಸ್ತ್ರ ತೆಗೆದುಕೊಂಡು ಆಕೆಯ ಮನೆಗೆ ಹೋಗಿ ಆಕೆಯ ಅಪಹರಣ ಮಾಡಿದನು. ಆಕೆಯ ಮೇಲೆ ೬ ಜನರು ಸಾಮೂಹಿಕ ಅತ್ಯಾಚಾರ ಮಾಡಿದರು. ಅದರ ನಂತರ ಆಕೆಯನ್ನು ಥಳಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ ನಂತರ ಪೊಲೀಸರು ೩ ಜನರನ್ನು ಬಂಧಿಸಿದ್ದಾರೆ.

ಈ ಮಹಿಳೆಗೆ ಪೊಲೀಸರಿಂದ ಆಸ್ಪತ್ರೆಗೆ ಕರೆದು ಕೊಂಡುಹೋದ ನಂತರ ಅಲ್ಲಿಯ ವೈದ್ಯರು ಆಕೆಗೆ ಚಿಕಿತ್ಸೆ ನೀಡಲು ಮತ್ತು ವೈದ್ಯಕೀಯ ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದಾರೆ. ಈ ಘಟನೆಯ ಬಗ್ಗೆ ಸ್ಥಳೀಯ ಹಿಂದೂಗಳು ರಸ್ತೆಗಿಳಿದು ಆಂದೋಲನ ನಡೆಸುತ್ತಿದ್ದಾರೆ. ಆರೋಪಿ ಮತ್ತು ವೈದ್ಯರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿನ ಹಿಂದೂಗಳ ಮೇಲೆ ಅತ್ಯಾಚಾರ ನಡೆಯುವುದು, ಅವರ ನರಸಂಹಾರ ನಡೆಯುವುದು ಇದೆಲ್ಲ ಈಗ ಹೊಸದೇನಲ್ಲ. ಕೆಲವು ವರ್ಷಗಳಲ್ಲಿ ಅಲ್ಲಿ ಹಿಂದೂಗಳು ಬೆರಳೆಣಿಕೆಯಷ್ಟೂ ಕೂಡ ಉಳಿಯುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ. ಈ ವಿಷಯವಾಗಿ ಜಗತ್ತಿನಾದ್ಯಂತ ಇರುವ ಹಿಂದೂಗಳಿಗೆ ಅದರ ಬಗ್ಗೆ ಯಾವುದೇ ಸಂಬಂಧವಿಲ್ಲ, ಇದು ಕೂಡ ವಸ್ತುಸ್ಥಿತಿಯಾಗಿದೆ !