ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ಮಂಡಿಸಿದ ಭಾರತ !
ನವದೆಹಲಿ – ತನ್ನ ಹಿತಾಸಕ್ತಿ ಮತ್ತು ಉದಾಸೀನತೆಯಿಂದಾಗಿ ಯಾವ ದೇಶಗಳು ಭಯೋತ್ಪಾದನೆಯ ಅಪಾಯಗಳನ್ನು ಗುರುತಿಸುವುದಿಲ್ಲವೋ ಅವು ಭಯೋತ್ಪಾದಗೆ ಬಲಿಯಾಗಿರುವರ ಸಂದರ್ಭದಲ್ಲಿ ‘ಘೋರ ಅನ್ಯಾಯ’ ಮಾಡುತ್ತಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯವು ಅಕ್ಟೋಬರ್ ೮ ರಂದು ಒಂದು ಹೇಳಿಕೆಯಲ್ಲಿ ತನ್ನ ನಿಲುವು ತಿಳಿಸಿದೆ. ವಿಶ್ವ ಸಮುದಾಯದ ಎಲ್ಲಾ ಗಂಭೀರ ಮತ್ತು ಕರ್ತವ್ಯನಿಷ್ಠ ಸದಸ್ಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಭಯೋತ್ಪಾದನೆಯ ವಿಶೇಷವಾಗಿ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ನಿಲುವು ಹೊಂದಿರಬೇಕು ಮತ್ತು ಅವರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ ಬಾಗಚಿ ಅವರು ಹೇಳಿದರು.
ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೊ ಜರದಾರಿ ಅವರು ಇತ್ತೀಚೆಗೆ ತೆಗೆದುಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಶ್ಮೀರದ ಪ್ರಶ್ನೆಯನ್ನು ಪ್ರಸ್ತುತಪಡಿಸಿ ಕಾಶ್ಮೀರ ಕಣಿವೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ಜರ್ಮನಿಯ ವಿದೇಶಾಂಗ ಸಚಿವೆ ಅನಾಲೆನಾ ಬೆರಬಾಕ್ ಕೂಡ ಉಪಸ್ಥಿತರಿದ್ದರು. ಈ ಕುರಿತು ಅರಿಂದಮ ಬಾಗಚಿ ಈ ಹೇಳಿಕೆಯನ್ನು ಖಂಡಿಸುತ್ತಾ ಭಾರತದ ನಿಲುವನ್ನು ಮಂಡಿಸಿದರು.
ಬಾಗಚಿ ತಮ್ಮ ಮಾತನ್ನು ಮುಂದುವರೆಸುತ್ತಾ …,
೧. ಭಾರತೀಯ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರ ಹಲವಾರು ದಶಕಗಳಿಂದ ಭಯೋತ್ಪಾದಕ ಕಾರ್ಯಾಚರಣೆಗಳನ್ನು ಎದುರಿಸುತ್ತಿದೆ. ಇಂದಿಗೂ ಭಯೋತ್ಪಾದನಾ ಚಟುವಟಿಕೆಗಳು ನಿಂತಿಲ್ಲ.
೨. ಭಾರತದ ಇತರ ರಾಜ್ಯಗಳಂತೆಯೇ ಜಮ್ಮು-ಕಾಶ್ಮೀರದಲ್ಲಿಯೂ ವಿದೇಶಿ ನಾಗರಿಕರು ಭಯೋತ್ಪಾದನೆಗೆ ಬಲಿಯಾಗಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಜಾಗತಿಕ ಸಂಘಟನೆಯಾದ ‘ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್’ ಇಂದಿಗೂ ೨೬/೧೧ರ ಭೀಕರ ದಾಳಿಗೆ ಕಾರಣವಾದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರನ್ನು ಶೋಧಿಸುತ್ತಿವೆ.
೩. ಯಾವಾಗ ದೇಶಗಳು ಭಯೋತ್ಪಾದನೆಯ ಅಪಾಯಗಳನ್ನು ಗುರುತಿಸುವುದಿಲ್ಲವೋ ಆಗ ಅವು ಶಾಂತಿಯನ್ನು ಸ್ಥಾಪಿಸುವ ಉದ್ದೇಶದ ಪೂರ್ತಿಗೆ ಪ್ರೋತ್ಸಾಹ ನೀಡುವ ಬದಲು ಅದನ್ನು ನಿಷ್ಪ್ರಭಾವಿಗೊಳಿಸುತ್ತವೆ. ಇದು, ಭಯೋತ್ಪಾದನೆಗೆ ಬಲಿಯಾಗುತ್ತಿರುವವರ ಸಂದರ್ಭದಲ್ಲಿ ಘೋರ ಅನ್ಯಾಯವಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಭಯೋತ್ಪಾದನೆಯ ಸೂತ್ರವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವುದರಿಂದ ಭಾರತಕ್ಕೆ ವಿಶೇಷ ಪ್ರಯೋಜನವಿವಾಗಿಲ್ಲ; ಏಕೆಂದರೆ ಯಾವ ರಾಷ್ಟ್ರವೂ ಈ ವಿಷಯದಲ್ಲಿ ಭಾರತಕ್ಕೆ ನಿಜವಾದ ಸಹಾಯವನ್ನು ನೀಡಲು ಬಯಸುವುದಿಲ್ಲ. ಈ ವಾಸ್ತವವನ್ನು ಒಪ್ಪಿಕೊಂಡು ಭಾರತವು ಈಗ ಜಿಹಾದಿ ಭಯೋತ್ಪಾದನೆಗೆ ಪೂರಕವಾಗಿರುವ ಪಾಕಿಸ್ತಾನವನ್ನು ತೊಡೆದುಹಾಕುವುದು ಭಾರತಕ್ಕೆ ಉಳಿದಿರುವ ಏಕೈಕ ಪರ್ಯಾಯ ಎಂಬುದನ್ನು ಭಾರತೀಯ ಆಡಳಿತಗಾರರು ಗಮನಿಸುವರೇ ? |