ಪಾಕಿಸ್ತಾನದ ಸೆರೆಮನೆಯಲ್ಲಿ ೬ ಭಾರತೀಯ ಬಂಧಿತರ ಸಾವು

ಶಿಕ್ಷೆ ಪೂರ್ಣಗೊಂಡರೂ ಅವರನ್ನು ಬಿಡುಗಡೆ ಮಾಡಿರಲಿಲ್ಲ !

ನವದೆಹಲಿ – ಪಾಕಿಸ್ತಾನದ ಸೆರೆಮನೆಯಲ್ಲಿ ಬಂಧನದಲ್ಲಿರುವ ೬ ಭಾರತೀಯ ಬಂಧಿತರು ಕಳೆದ ೯ ತಿಂಗಳಲ್ಲಿ ಸಾವನ್ನಪ್ಪಿರುವ ಮಾಹಿತಿ ಬೆಳಕಿಗೆ ಬಂದಿದೆ. ಎಲ್ಲರ ಶಿಕ್ಷೆಯ ಅವಧಿ ಪೂರ್ಣವಾಗಿದ್ದರು ಪಾಕಿಸ್ತಾನ ಅವರನ್ನು ಕಾರಾಗೃಹದಲ್ಲಿ ಬಂಧಿಸಿ ಇಟ್ಟಿತ್ತು. ಸಾವನ್ನಪ್ಪಿರುವ ೯ ಬಂಧಿತರ ಪೈಕಿ ೫ ಜನರು ಮೀನುಗಾರರಾಗಿದ್ದರು.

೧. ಈ ಘಟನೆಯ ನಂತರ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ ಬಾಗಚಿ ಇವರು, ಪಾಕಿಸ್ತಾನದಲ್ಲಿನ ಭಾರತೀಯ ಬಂಧಿತರು ಭಾರತಕ್ಕೆ ಕಳುಹಿಸಲು ಆಹ್ವಾನಿಸಿದರು ಕೂಡ ಪಾಕಿಸ್ತಾನ ಅವರನ್ನು ಕಾನೂನು ಬಾಹಿರವಾಗಿ ವಶದಲ್ಲಿ ಇಟ್ಟುಕೊಂಡಿದ್ದಾರೆ. ಈ ಬಂಧಿತರ ಮೃತ್ಯುವಿನ ಘಟನೆಗಳು ಹೆಚ್ಚುತ್ತಿದ್ದು ಇದೊಂದು ಚಿಂತೆಯ ವಿಷಯವಾಗಿದೆ. ಇಸ್ಲಾಮಾಬಾದಿನಲ್ಲಿನ ನಮ್ಮ ಉಚ್ಚಾಯುಕ್ತರು ಭಾರತೀಯ ಬಂಧಿತರ ಸುರಕ್ಷೆಯ ಸೂತ್ರ ಮೇಲಿಂದ ಮೇಲೆ ಉಪಸ್ಥಿತಗೊಳಿಸಿದೆ. ಎಲ್ಲಾ ಭಾರತೀಯ ಬಂಧಿತರನ್ನು ತಕ್ಷಣ ಬಿಡುಗಡೆಗೊಳಿಸಿ ಅವರನ್ನು ಅವರ ಮಾತೃಭೂಮಿಗೆ ಹಿಂತಿರುಗಿ ಕಳುಹಿಸಬೇಕು ಎಂದು ಪಾಕಿಸ್ತಾನ ಸರಕಾರಕ್ಕೆ ಆವಾಹನೆ ನೀಡಿದೆ ಎಂದು ಹೇಳಿದರು.

೨. ಪಾಕಿಸ್ತಾನದ ಕರಾಗೃಹದಲ್ಲಿ ೩೦೦ ಕ್ಕೂ ಹೆಚ್ಚಿನ ಭಾರತೀಯ ಬಂಧಿತರು ಇದ್ದಾರೆ; ಆದರೆ ಪಾಕಿಸ್ತಾನದ ಅಭಿಪ್ರಾಯದ ಪ್ರಕಾರ ಅವರ ಹತ್ತಿರ ಕೇವಲ ೨೬೦ ಬಂಧಿತರಿದ್ದಾರೆ. ಇದರಲ್ಲಿನ ಅನೇಕ ಬಂಧಿತರ ಶಿಕ್ಷೆಯು ಪೂರ್ಣವಾಗಿದೆ, ಆದರೂ ಕೂಡ ಪಾಕಿಸ್ತಾನ ಅವರನ್ನು ಬಿಡುಗಡೆಗೊಳಿಸುತ್ತಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

೧೯೭೧ ರ ಯುದ್ಧದ ಸಮಯದಲ್ಲಿ ಬಂಧಿಸಲ್ಪಟ್ಟ ೫೪ ಭಾರತೀಯ ಸೈನಿಕರಿಗೆ ಕೂಡ ಪಾಕಿಸ್ತಾನ ಬಿಡುಗಡೆ ಮಾಡಿಲ್ಲ. ‘ಇಂತಹ ಸೈನಿಕರು ನಮ್ಮ ಹತ್ತಿರ ಇಲ್ಲ’, ಎಂದು ಪಾಕಿಸ್ತಾನ ಹೇಳುತ್ತಿದೆ ಇನ್ನೊಂದು ಕಡೆಗೆ ಭಾರತ ಶರಣಾಗಿರುವ ಪಾಕಿಸ್ತಾನದ ೯೦ ಸಾವಿರ ಸೈನಿಕರನ್ನು ಬಿಡುಗಡೆಗೊಳಿಸಿತ್ತು. ಈ ಪರಿಸ್ಥಿತಿ ೫೧ ವರ್ಷಗಳ ನಂತರ ಕೂಡ ಹಾಗೆಯೇ ಇದೆ, ಇದು ಭಾರತಕ್ಕೆ ಲಚ್ಚಾಸ್ಪದವಾಗಿದೆ !