ಕರ್ನಾಟಕ ರಾಜ್ಯದಲ್ಲಿ ಹಲಾಲ್ ವಿರುದ್ಧ ಹೋರಾಡಲು ಸಮಿತಿಯ ಸ್ಥಾಪನೆ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನಲ್ಲಿ ಪತ್ರಕರ್ತರ ಸಭೆ

ಮಂಗಳೂರು (ಕರ್ನಾಟಕ)– ಹಿಂದೂ ಜನ ಜಾಗೃತಿ ಸಮಿತಿಯ ದ್ವಿದಶಕ ಪೂರ್ಣ ಆಗಿರುವ ಪ್ರಯುಕ್ತ ಸಮಿತಿಯ ವತಿಯಿಂದ ಸಂಪೂರ್ಣ ದೇಶದಲ್ಲಿ ಹಿಂದೂ ಸಮಾಜದ ಮನಸ್ಸಿನಲ್ಲಿ ಹಿಂದೂ ರಾಷ್ಟ್ರ ಸಂಕಲ್ಪನೆ ಧೃಡ ಗೊಳಿಸಲು ಮತ್ತು ಹಿಂದೂ ಸಮಾಜವನ್ನು ಹಿಂದೂ ರಾಷ್ಟ್ರಕ್ಕಾಗಿ ಸಕ್ರಿಯ ಮಾಡುವ ದೃಷ್ಟಿಯಿಂದ ‘ಹಿಂದೂರಾಷ್ಟ್ರ ಸಂಕಲ್ಪ ಅಭಿಯಾನ’ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಸಮಿತಿಯಿಂದ ಇಲ್ಲಿ ಪತ್ರಕರ್ತರ ಸಭೆ ನಡೆಸಿ ಇದರ ಮಾಹಿತಿ ನೀಡಲಾಯಿತು. ಆ ಸಮಯದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ ರಮೇಶ ಶಿಂದೆ, ಭಾಜಪದ ವಾಣಿಜ್ಯ ಮತ್ತು ವ್ಯಾಪಾರ ಶಾಖೆಯ ದಕ್ಷಿಣ ಕನ್ನಡ ಜಿಲ್ಲೆಯ ಸಹ ಸಂಚಾಲಕರಾದ ಶ್ರೀ ದಿನೇಶಕುಮಾರ ಜೈನ ಮತ್ತು ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ ಗೌಡ ಇವರು ಉಪಸ್ಥಿತರಿದ್ದರು. ಆ ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಹಲಾಲ ವಿರುದ್ಧ ಹೋರಾಡಲು ಸಮಿತಿಯ ಸ್ಥಾಪಿಸಲಾಗಿದೆ ಎಂಬ ಮಾಹಿತಿ ನೀಡಲಾಯಿತು.”ಭಾರತವು ಜಾತ್ಯಾತೀತ ದೇಶ ಇರುವುದು; ಆದಕಾರಣ ಸರಕಾರದಿಂದ ಕಾನೂನು ಬಹಿರ ಇರುವ ‘ಹಲಾಲ ಪ್ರಮಾಣ ಪತ್ರವನ್ನು ‘ಆದಷ್ಟು ಬೇಗನೆ ರದ್ದುಪಡಿಸಬೇಕು”, ಎಂದು ಶ್ರೀ ರಮೇಶ ಶಿಂದೆ ಇವರು ಈ ಸಮಯದಲ್ಲಿ ಒತ್ತಾಯಿಸಿದರು.

ಶ್ರೀ ರಮೇಶ ಶಿಂದೆ, ಹಿಂದೂ ಜನಜಾಗೃತಿ ಸಮಿತಿ

ಕಳೆದ ೨೦ ವರ್ಷಗಳಿಂದ ಸತತವಾಗಿ ಮಾಡಲಾಗಿರುವ ಜಾಗೃತಿಯಿಂದ ರಾಜ್ಯದಲ್ಲಿ ಅಷ್ಟೇ ಅಲ್ಲದೆ ಸಂಪೂರ್ಣ ಭಾರತದಲ್ಲಿ ಹಿಂದೂಗಳ ಶ್ರದ್ಧಾ ಸ್ಥಾನದ ವಿಡಂಬನೆ ತಡೆಯುವುದಕ್ಕಾಗಿ ಹಿಂದೂಗಳು ಸಕ್ರಿಯ ರಾಗಿರುವುದು ಕಂಡುಬರುತ್ತಿದೆ. ಧರ್ಮ ಶಿಕ್ಷಣ, ಧರ್ಮಜಾಗೃತಿ, ಹಿಂದೂ ಸಂಘಟನೆ, ರಾಷ್ಟ್ರ ರಕ್ಷಣೆ ಮತ್ತು ಧರ್ಮರಕ್ಷಣೆ ಈ ಐದು ಸೂತ್ರಗಳ ಆಧಾರದಲ್ಲಿ ಸಮಿತಿಯಿಂದ ವರ್ಷ ಪೂರ್ತಿ ವಿವಿಧ ಉಪಕ್ರಮಗಳನ್ನು ನಡೆಸಲಾಗುತ್ತದೆ. ಇದೆಲ್ಲವೂ ಈಶ್ವರನ ಕೃಪೆ, ಸಂತರ ಆಶೀರ್ವಾದ ಮತ್ತು ಹಿಂದುತ್ವ ನಿಷ್ಠರ ಸಕ್ರಿಯ ಸಹವಭಾಗಿತ್ವದಿಂದಾಗಿ ಆಗುತ್ತಿದೆ.