ದುಬೈ (ಸಂಯುಕ್ತ ಅರಬ್ ಅಮಿರಾತ್) – ನಾಳೆ ದಸರೆಯ ಮುಹೂರ್ತದಲ್ಲಿ ಇಲ್ಲಿಯ ಮೊಟ್ಟಮೊದಲ ಹಿಂದೂ ದೇವಸ್ಥಾನದಲ್ಲಿ ಹಿಂದೂಗಳಿಗೆ ಪ್ರವೇಶ ನೀಡಲಾಗುವುದು. ಈ ದೇವಸ್ಥಾನದ ಉದ್ಘಾಟನೆ ಅಕ್ಟೋಬರ್ ೪ ರಂದು ಮಾಡಲಾಗುವುದು. ಇಲ್ಲಿ ಜೇಬೆಲ್ ಅಲಿ ಪ್ರದೇಶದಲ್ಲಿ ಈ ದೇವಸ್ಥಾನ ಕಟ್ಟಲಾಗಿದೆ. ದರ್ಶನಕ್ಕಾಗಿ ‘ಕ್ಯೂಆರ್ ಕೋಡ್’ ಮೂಲಕ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ದೇವಸ್ಥಾನದ ಸುರಕ್ಷೆ ಮತ್ತು ಅಲ್ಲಿಯ ಗದ್ದಲ ತಡೆಯಲಾಗುವುದು. ಈ ದೇವಸ್ಥಾನ ಬೆಳಿಗ್ಗೆ ಆರೂವರೆಗೆ ತೆರೇವುದು ಮತ್ತು ರಾತ್ರಿ ೮ ರವರೆಗೆ ತೆರದಿರುವುದು. ಇಲ್ಲಿ ಪ್ರತಿದಿನ ೧ ಸಾವಿರ ದಿಂದ ೧ ಸಾವಿರ ೨೦೦ ಭಕ್ತರು ದರ್ಶನ ಪಡೆಯಬಹುದು. ಈ ದೇವಸ್ಥಾನದಲ್ಲಿ ೧೬ ದೇವರ ಮೂರ್ತಿಗಳು ಇರುವುದು ಹಾಗೂ ಶಿಖರ ಪವಿತ್ರ ಧರ್ಮಗ್ರಂಥ ‘ಗುರುಗ್ರಂಥ ಸಾಹೀಬ’ ಇಡಲಾಗುವುದು.
Pics: Grand And Majestic Hindu Temple Opens In Dubai On Dussehra https://t.co/4fdzwYRdMv pic.twitter.com/xDntNi63mE
— NDTV News feed (@ndtvfeed) October 5, 2022