ಮುಂಬಯಿನಲ್ಲಿ ಮತಾಂಧನಿಂದ ಹಿಂದೂ-ಪತ್ನಿಯನ್ನು ಕತ್ತು ಕೊಯ್ದು ಕೊಲೆ ಮಾಡಿದ ಪ್ರಕರಣ
ಭಾಜಪದ ಉಪ ಪ್ರದೇಶಾಧ್ಯಕ್ಷ ಸೌ. ಚಿತ್ರಾ ವಾಘ ಇವರು ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಿದರು
ಮುಂಬಯಿ – ವಿವಾಹವಾದ ನಂತರ ಹಿಂದೂ ಧರ್ಮದ ಪತ್ನಿ ಇಸ್ಲಾಂನಂತೆ ಆಚರಣೆ ಮಾಡದೇ ಇರುವುದರಿಂದ ಚೇಂಬೂರ್ ನಲ್ಲಿಯ ಇಕ್ಬಾಲ್ ಮಹಮ್ಮದ್ ಶೇಖ ಈ ಮುಸಲ್ಮಾನ ಯುವಕನು ರಸ್ತೆ ಮಧ್ಯದಲ್ಲಿ ಆಕೆಯ ಕತ್ತು ಕೊಯ್ದು ಕೊಲೆಮಾಡಿದ್ದಾನೆ. ಭಾಜಪದ ಉಪ ಪ್ರದೇಶಾಧ್ಯಕ್ಷ ಸೌ. ಚಿತ್ರ ವಾಘ ಇವರು ಸಪ್ಟೆಂಬರ್ ೩೦ ರಂದು ಚೇಂಬುರದಲ್ಲಿನ ಕೊಲೆಯಾಗಿರುವ ವಿವಾಹಿತೆಯ ಕುಟುಂಬದವರನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿದ್ದಾರೆ. ಆ ಸಮಯದಲ್ಲಿ ‘ಒಳ್ಳೆಯ ಸರಕಾರಿ ನ್ಯಾಯವಾದಿ ಈ ಮೊಕದ್ದಮೆ ನಡೆಸುವರು. ಆದ್ದರಿಂದ ಹುಡುಗಿಯ ಕುಟುಂಬದವರಿಗೆ ನ್ಯಾಯ ದೊರಕುವುದು, ಇದೇ ರಾಜ್ಯ ಸರಕಾರದ ಉದ್ದೇಶವಾಗಿದೆ’, ಎಂದು ಹೇಳಿ ಅವರು ಸಂತ್ರಸ್ತೇ ಕುಟುಂಬದವರಿಗೆ ಸಮಾಧಾನ ಮಾಡಿದರು.
ಉತ್ತರಪ್ರದೇಶದಂತೆ ಮಹಾರಾಷ್ಟ್ರದಲ್ಲಿ ಕೂಡ ‘ಲವ್ ಜಿಹಾದ್ ’ವಿರುದ್ಧ ಕಾನೂನು ಮಾಡುವುದು ಅವಶ್ಯಕವಾಗಿದೆ. ಉಪಮುಖ್ಯಮಂತ್ರಿ ದೇವೇಂದ್ರ ಪಡಣವಿಸ ಇವರು ಈ ಪ್ರಕರಣ ಗಂಭೀರವಾಗಿದೆ ಪರಿಗಣಿಸಿದ್ದಾರೆ. ಪೊಲೀಸರಿಗೆ ಕ್ರಮ ಕೈಗೊಳ್ಳುವ ಸೂಚನೆ ನೀಡಿರುವದರ ಬಗ್ಗೆ ಸೌ ಚಿತ್ರ ವಾಘ ಇವರು ಹೇಳಿದರು.
ಈ ಸಮಯದಲ್ಲಿ ನಗರ ಸೇವಕಿ ಆಶಾ ಮರಾಠೆ ಇವರು ಕೂಡ ಉಪಸ್ಥಿತರಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಇಕ್ಬಾಲ್ ಮಹಮ್ಮದ್ ಶೇಖ ಇವನನ್ನು ಬಂಧಿಸಿದ್ದಾರೆ. ಪ್ರಸ್ತುತ ಅವನು ಕಾರಾಗೃಹದಲ್ಲಿದ್ದಾನೆ. (ಲವ್ ಜಿಹಾದಿಗೆ ಕಡಿವಾಣಾ ಹಾಕಲು ಮಹಾರಾಷ್ಟ್ರ ಸರಕಾರ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿ ಮಾಡಬೇಕು ! – ಸಂಪಾದಕರು)