ನ್ಯೂಯಾರ್ಕ್‌ನಲ್ಲಿ ಭಾರತೀಯ ಮೂಲದ ಅಮೆರಿಕಾದ ನಾಗರಿಕನ ಮೇಲೆ ಚಾಕುವಿನಿಂದ ದಾಳಿ

ಎಡಬದಿಗೆ ಭರತ ಭಾಯಿ ಪಟೇಲ್

ನ್ಯೂಯಾರ್ಕ್ (ಅಮೇರಿಕಾ) – ಇಲ್ಲಿ ಓರ್ವ ಭಾರತೀಯ ಮೂಲದ ಅಮೆರಿಕಾದ ನಾಗರಿಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಭರತ ಭಾಯಿ ಪಟೇಲ್ ಎಂದು ಅವರ ಹೆಸರಾಗಿದ್ದು ಅವರು ಅಲ್ಲಿ ವಸ್ತು ವಿತರಣೆಯ ಕೆಲಸ ಮಾಡುತ್ತಾರೆ. ಈ ಪ್ರಕರಣದಲ್ಲಿ ಪೊಲೀಸರು ಶಾನ್ ಕಪೂರ ಅಲಿಯಾಸ್ ‘ಸೂಪರ್ ಪರ್ಪ್’ ನನ್ನು ಬಂಧಿಸಿದ್ದಾರೆ. ಶಾನ್ ಇವನು ನಿಪುಣ ಅಪರಾಧಿ ಆಗಿದ್ದಾನೆ. ಇವನ ವಿರುದ್ಧ ಅನೇಕ ಅಪರಾಧ ದಾಖಲಾಗಿವೆ. ಅವನು ಯಾವುದೇ ಕಾರಣ ಇಲ್ಲದೆ ಪಟೇಲ್ ಇವರ ಮೇಲೆ ದಾಳಿ ನಡೆಸಿದ್ದಾನೆ.