ತಡವಾದರೂ ಪರವಾಗಿಲ್ಲ … !

ಕೊನೆಗೂ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’

(ಪಿ.ಎಫ್.ಐ.)ದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಕಾರ್ಯಾಲಯಗಳ ಮೇಲೆ ಇಡೀ ಭಾರತದಲ್ಲಿ ಸೆಪ್ಟೆಂಬರ್ ೨೧ ರಂದು ಮಧ್ಯರಾತ್ರಿ ದಾಳಿಯನ್ನು ಮಾಡಲಾಯಿತು. ೧೨ ರಾಜ್ಯಗಳಲ್ಲಿ ಏಕಕಾಲಕ್ಕೆ ೧೦೬ ಕ್ಕಿಂತ ಹೆಚ್ಚು ಜನರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯವು ಬಂಧಿಸಿ ಲ್ಯಾಪ್‌ಟಾಪ್ ಮತ್ತು ದಾಖಲೆಗಳೊಂದಿಗೆ ಇತರ ಪುರಾವೆಗಳನ್ನು ವಶಪಡಿಸಿಕೊಂಡಿವೆ. ಈ ಕಾರ್ಯಾಚರಣೆ ಎಂದರೆ ಪಿ.ಎಫ್.ಐ. ಮೇಲೆ ನಿರ್ಬಂಧ ತರಬೇಕೆಂಬ ಹಿಂದುತ್ವನಿಷ್ಠರ ಅನೇಕ ವರ್ಷಗಳ ಬೇಡಿಕೆಯ ಆರಂಭವಾಗಿದೆ. ಅನೇಕ ತಿಂಗಳು ‘ಪಿ.ಎಫ್.ಐ.ನ ನಿರ್ಮೂಲನೆಗಾಗಿ, ಹಣದ ಮೂಲ ಮುಂತಾದವುಗಳನ್ನು ತನಿಖಾ ತಂಡಗಳು ಪತ್ತೆ ಹಚ್ಚಲಿವೆ’, ಎಂಬುದು ಬಹಿರಂಗವಾಗಿದೆ; ಆದರೆ ‘ರಾಷ್ಟ್ರ ಮತ್ತು ಹಿಂದೂಗಳ ಸ್ಥಿತಿ ಅತ್ಯಂತ ದಯನೀಯವಾದ ನಂತರ ಕೊನೆಗೆ ಈ ಕಾರ್ಯಾಚರಣೆಯಾಯಿತು’, ಎಂದೇ ಹೇಳಬಹುದು.

ಪಿ.ಎಫ್.ಐ.ನ ದೇಶದ್ರೋಹಿ ಕುಕೃತ್ಯಗಳು !

ಈ ರಾಷ್ಟ್ರದ್ರೋಹಿ ಸಂಘಟನೆಯು ‘೨೦೪೭ ರ ಒಳಗೆ ಭಾರತವನ್ನು ಇಸ್ಲಾಮಿ ದೇಶವನ್ನಾಗಿ ಮಾಡುವ ಧ್ಯೇಯ’ ವನ್ನಿಟ್ಟುಕೊಂಡು ಕಾರ್ಯನಿರತವಾಗಿದೆ. ಅದಕ್ಕಾಗಿ ಹಿಂದೂಗಳನ್ನು ಹತ್ತಿಕ್ಕಲು ಮತ್ತು ದೇಶವಿರೋಧಿ ಎಂದು ಏನೆಲ್ಲ ಮಾಡಲು ಸಾಧ್ಯವೋ, ಆ ಎಲ್ಲ ಕ್ರೂರ ಕೃತ್ಯಗಳನ್ನು ಈ ಸಂಘಟನೆಯು ಮಾಡುತ್ತಿದೆ. ಹಿಂದೂಗಳಲ್ಲಿ ಭಯವನ್ನು ಹುಟ್ಟಿಸುವ ಉದ್ದೇಶದಿಂದ ಸಶಸ್ತ್ರ ಚಟುವಟಿಕೆಗಳ ಮೇಲೆ ಈ ಸಂಘಟನೆಯು ಒತ್ತು ನೀಡುತ್ತಿದೆ. ಕೇರಳದಲ್ಲಿ ಅವರ ‘ಸಮನಾಂತರ ಸೇನೆ’ಯು ಸಿದ್ಧವಾಗಿದ್ದು ಅದರ ಕವಾಯತ್ತ್ತು ನಡೆಯುತ್ತಿರುತ್ತದೆ. ಇಷ್ಟೇ ಅಲ್ಲದೇ ಪಾಟಲೀಪುತ್ರ (ಬಿಹಾರ) ಮತ್ತು ನಿಝಾಮಾಬಾದ (ತೆಲಂಗಾಣಾ)ದಲ್ಲಿ ಅವರ ಭಯೋತ್ಪಾದನಾ ತರಬೇತಿ ಕೇಂದ್ರಗಳಿರುವುದು ಬಹಿರಂಗವಾಗಿದೆ. ದೇಶದಾದ್ಯಂತ ಈ ಪ್ರಶಿಕ್ಷಣದ ಶಿಬಿರಗಳು ನಡೆಯುತ್ತಿದ್ದವು. ವಿಶೇಷವೆಂದರೆ ಸಾಮ್ಯವಾದಿ ಕೇರಳ ಸರಕಾರದ ಪೊಲೀಸರಿಂದ ಈ ಸಂಘಟನೆಯ ಓರ್ವ ಮುಖಂಡನಿಗೆ ಅಗ್ನಿಶಾಮಕ ಪ್ರಶಿಕ್ಷಣವನ್ನು ನೀಡಲಾಗಿತ್ತು. ಕೇವಲ ಕಾನೂನಿನ ಚೌಕಟ್ಟಿನಲ್ಲಿರಲು ತೋರಿಕೆಗಾಗಿ ಸಮಾಜಕಾರ್ಯದ ಮುಖವಾಡ ಧರಿಸಿರುವ ಸಂಘಟನೆಯ ಕಾಣಿಸುವ ಹಲ್ಲುಗಳೂ ಭಿನ್ನವಾಗಿಲ್ಲ, ಆದರೆ ಅವು ಬಹಿರಂಗವಾಗಿ ರಾಷ್ಟ್ರ ಮತ್ತು ಹಿಂದೂ ಧರ್ಮದ ವಿರುದ್ಧ ಕಾರ್ಯಾಚರಣೆಯನ್ನು ಮಾಡುತ್ತಿವೆ. ಭಾರತವಿರೋಧಿ ಪುಸ್ತಕಗಳನ್ನು ಹಂಚುತ್ತಿವೆ. ಭಾರತದ ಶಾಂತ ಮುಸಲ್ಮಾನರನ್ನು ನಮಾಜ್‌ನ ನಂತರ ರೊಚ್ಚಿಗೆಬ್ಬಿಸುವ ಕೆಲಸಗಳನ್ನು ಇವರ ಮುಖಂಡರು ಮಾಡುತ್ತಾರೆ. ಈ ಪ್ರಕರಣದಲ್ಲಿ ಮುಂಬ್ರಾ (ಮಹಾರಾಷ್ಟ್ರ) ದಲ್ಲಿ ಪೊಲೀಸರು ದೂರನ್ನು ದಾಖಲಿಸಿದ್ದಾರೆ. ‘ಶಾಹಿನಬಾಗ’, ‘ಹಿಜಾಬ್’ ಇವುಗಳಂತಹ ತಥಾಕಥಿತ ಆಂದೋಲನಗಳನ್ನು ನಡೆಸುವುದು, ‘ಲವ್ ಜಿಹಾದ್’ನ ಪ್ರಶಿಕ್ಷಣ ಮತ್ತು ಅದಕ್ಕಾಗಿ ಮತಾಂಧರನ್ನು ಪುಸಲಾಯಿಸುವುದು ಮತ್ತು ಅವರಿಗೆ ಹಣವನ್ನು ಪೂರೈಸುವುದು ಇವುಗಳ ಹಿಂದೆ ಈ ಸಂಘಟನೆಯ ಕೈವಾಡವಿತ್ತು. ದೆಹಲಿಯ ಗಲಭೆ ಸಹಿತ ಅನೇಕ ಗಲಭೆಗಳಲ್ಲಿ ಪಿ.ಎಫ್.ಐ.ನ ಕೈವಾಡವಿರುವುದಾಗಿ ಬೆಳಕಿಗೆ ಬಂದಿದೆ. ಶಾಲೆಗಳಲ್ಲಿ ಇಸ್ಲಾಂನ ಪ್ರಾರ್ಥನೆಗಳನ್ನು ಕಲಿಸುವುದು, ಶಾಲೆಗಳಿಗೆ ಶುಕ್ರವಾರದಂದು ರಜೆ ನೀಡುವುದು ಈ ಮಾಧ್ಯಮಗಳಿಂದ ಶಾಲೆಗಳ ಇಸ್ಲಾಮೀಕರಣ ಮಾಡುವ ಘಟನೆಗಳಲ್ಲಿಯೂ ಈ ಸಂಘಟನೆಯ ಸಂಬಂಧ ಇರುವುದಾಗಿ ಚರ್ಚೆ ಇದೆ. ಪಾಕಿಸ್ತಾನದಲ್ಲಿನ ಭಯೋತ್ಪಾದನಾ ಸಂಘಟನೆಯು ‘ತಹರಿಕ್-ಎ-ಲಬ್ಬೈಕ್ ಪಾಕಿಸ್ತಾನ’ದ ಜೊತೆಗಿರುವ ಅವರ ಸಂಬಂಧವೂ ಬೆಳಕಿಗೆ ಬಂದಿತು. ‘ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರ ನಕಲಿ ಆಧಾರಕಾರ್ಡ್‌ಗಳನ್ನು ಈ ಸಂಘಟನೆಯು ತಯಾರಿಸುತ್ತಿದೆ’, ಎಂಬ ಮಾಹಿತಿಯು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು. ಜುಲೈ ೨೦೧೦ ರಲ್ಲಿ ಅಸ್ಸಾಂನ ಪ್ರಾ. ಟಿ.ಜೆ. ಜೊಸೆಫ್ ಇವರು ಪ್ರಶ್ನೆಪತ್ರಿಕೆಯ ಮೇಲೆ ‘ಮಹಮ್ಮದ’ ಎಂದು ಬರೆದುದರಿಂದ ಈ ಸಂಘಟನೆಯ ಭಯೋತ್ಪಾದಕರು ತಮ್ಮ ಧಾರ್ಮಿಕ ಭಾವನೆಯನ್ನು ನೋಯಿಸಿದರೆಂದು ಅವರ ಕೈಯನ್ನು ಕತ್ತರಿಸಿದರು ಮತ್ತು ಇದರಿಂದ ಇವರ ಕ್ರೂರತನವು ಮುಖ್ಯವಾಗಿ ಬೆಳಕಿಗೆ ಬರತೊಡಗಿತು. ಪಿ.ಎಫ್.ಐ.ಯು ಭಾಜಪ ಮತ್ತು ಸಂಘದ ಕಾರ್ಯಕರ್ತರ ಹತ್ಯೆಯನ್ನು ಮಾಡಲು ೧೦೦ ಜನರ ಪಟ್ಟಿಯನ್ನು ತಯಾರಿಸಿದೆ. ಇಲ್ಲಿಯವರೆಗೆ ದೇಶದಾದ್ಯಂತ ೪೫೦ ಕ್ಕಿಂತ ಹೆಚ್ಚು ಹಿಂದುತ್ವನಿಷ್ಠರ ಹತ್ಯೆಯಾಗಿದೆ; ಅವುಗಳಲ್ಲಿನ ಹೆಚ್ಚಿನ ಹತ್ಯೆಗಳಲ್ಲಿ ಈ ಸಂಘಟನೆಯ ಹೆಸರು ಮುಂದೆ ಬಂದಿತು. ನೂಪುರ ಶರ್ಮಾ ಇವರ ವಿರುದ್ಧದ ಆಂದೋಲನದಲ್ಲಿ ಈ ಸಂಘಟನೆಗೆ ಹಣವನ್ನು ಪೂರೈಸುವ ತುರ್ಕಿಯೇ ದೇಶದ ಧ್ವಜಗಳನ್ನು ಹಾರಿಸಲಾಯಿತು. ಆದುದರಿಂದ ‘ಸರ ತನ್ ಸೆ ಜುದಾ’ ಈ ಅಭಿಯಾನದ ಹಿಂದೆ ಪಿ.ಎಫ್.ಐ.ನ ಕೈವಾಡವಿರುವ ಬಲವಾದ ಸಾಧ್ಯತೆಯಿದೆ. ೧೯೨೧ ರಲ್ಲಿ ನಡೆದ ಹಿಂದೂಗಳ ನರಮೇಧ ಮತ್ತು ೧೦೦ ದೇವಸ್ಥಾನಗಳನ್ನು ವಿನಾಶ ಮಾಡಿದುದರ ‘ಶತಾಬ್ದಿ’ ವರ್ಷವನ್ನು ಪಿ.ಎಫ್.ಐ.ವು ೨೦೨೧ ನೇ ಇಸ್ವಿಯಲ್ಲಿ ಆಚರಿಸಿತು. ಆ ಸಮಯದಲ್ಲಿ ಭಯೋತ್ಪಾದನೆಯನ್ನು ಹರಡಲು ಮೆರವಣಿಗೆ ಮಾಡುವ ಪಿ.ಎಫ್.ಐ. ನ ಭಯೋತ್ಪಾದಕರಿಗೆ ಈ ದಾಳಿಗಳ ನಿಮಿತ್ತ ಕನಿಷ್ಠ ಪಕ್ಷ ಈಗ ಒಂದಾದರೂ ಹೊಡೆತ ಬಿದ್ದಿದೆ.

‘ತಡವಾದರೂ ಪರವಾಗಿಲ್ಲ ಸುಧಾರಣೆ ಮಾಡಬಹುದು …’

ದುರ್ದೈವದಿಂದ ಹಿಂದೆ ಕೆಲವು ಪೊಲೀಸರು ಪಿ.ಎಫ್.ಐ.ಅನ್ನು ‘ಸಾಂಸ್ಕೃತಿಕ ಸಂಘಟನೆ’ಯೆಂದು ಹೇಳಿದ್ದರೂ ಸಂಘಟನೆಯು ವಾಸ್ತವದಲ್ಲಿ ಏನು ಮಾಡುತ್ತದೆ ? ಎಂಬುದು ಸರಕಾರ ಮತ್ತು ಆಡಳಿತಕ್ಕೆ ಗೊತ್ತಿರಲಿಲ್ಲ, ಎಂಬುದನ್ನು ಯಾರಾದರೂ ನಂಬುವರೇ ? ‘ಸಂಪೂರ್ಣ ಭಾರತದಾದ್ಯಂತ ಅನೇಕ ಬಾಂಬ್‌ಸ್ಫೋಟ್‌ಗಳನ್ನು ಮಾಡುವ ‘ಇಂಡಿಯನ್ ಮುಜಾಹಿದಿನ’ ಸಂಘಟನೆಯೊಂದಿಗೆ ನಿಕಟವಾಗಿರುವ ಪಿ.ಎಫ್.ಐ.ನ ಮೇಲೆ ಕಾರ್ಯಾಚರಣೆಯ ಸಿದ್ಧತೆಯನ್ನು ಮಾಡಲು ಮಾತ್ರ ಹಿಂದೂಗಳ ಅಂತ್ಯವಾಗುವುದನ್ನು ನೋಡಬೇಕಾಯಿತು’, ಎಂದು ಹಿಂದೂಗಳಿಗೆ ಅನಿಸಿದರೆ ತಪ್ಪೇನಿಲ್ಲ ! ಈ ಸಿದ್ದತೆಯನ್ನು ತಡವಾಗಿ ಏಕೆ ಆರಂಭಿಸಿದರು ? ಈ ಭಯೋತ್ಪಾದನಾ ಸಂಘಟನೆಗೆ ಬೆಳೆಯಲು ಏಕೆ ಅವಕಾಶ ನೀಡಲಾಯಿತು ? ರಾ.ಸ್ವ. ಸಂಘದ ಎಷ್ಟೋ ಕಾರ್ಯಕರ್ತರನ್ನು ಅತ್ಯಂತ ಬರ್ಬರವಾಗಿ ಹತ್ಯೆಗೈದುದರ ಹಿಂದೆ ಈ ಸಂಘಟನೆಯ ಕೈವಾಡ ಇರುವುದಾಗಿ ಎಷ್ಟೋ ಬಾರಿ ಬಹಿರಂಗವಾಗಿದ್ದರೂ ಈ ಸಂಘಟನೆಯ ಮೇಲೆ ಮೂಲದಿಂದಲೇ ಕಾರ್ಯಾಚರಣೆಯಾಗುತ್ತಿರಲಿಲ್ಲ, ಎಂಬುದು ಅತ್ಯಂತ ದುರದೃಷ್ಟಕರವಾಗಿದೆ. ಪದೇಪದೇ ಹಿಂದುತ್ವನಿಷ್ಠರ ಹತ್ಯೆ ಯಾದಾಗ ಈ ಅಂಶವು ಅಷ್ಟೇ ಗಾಂಭೀರ್ಯದಿಂದ ಬರುತ್ತಿತ್ತು. ಅವರ ಅತ್ಯಾಚಾರಗಳು ಎಷ್ಟು ಹೆಚ್ಚಾಗಿದ್ದವೆಂದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸಂಸದರೂ ಈ ಸಂಘಟನೆಯ ಮೇಲೆ ನಿರ್ಬಂಧ ತರಬೇಕೆಂದು ಮನವಿ ಸಲ್ಲಿಸಿದರು. ಹಿಂದೂ-ಮಸ್ಲಿಂ ಐಕ್ಯತೆಯ ತಥಾಕಥಿತ ಘೋಷಣೆಯನ್ನು ನೀಡುವ ಮುಖಂಡರು ಮತ್ತು ನಟರು ಎಂದಿಗೂ ಪಿ.ಎಫ್.ಐ.ನ ಕ್ರೂರ ಚಟುವಟಿಕೆಗಳ ಬಗ್ಗೆ ಮಾತನಾಡುವುದು ಕಂಡು ಬರುವುದಿಲ್ಲ. ಈ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದಾಗ ‘ತುರ್ಕಿಯೇದಂತಹ ದೇಶಗಳಿಂದ ಇವರಿಗೆ ಹಣ ಪೂರೈಕೆಯಾಗುತ್ತದೆ’, ಎಂದು ಅವರು ಒಪ್ಪಿದ್ದಾರೆ. ಚೀನಾದಂತಹ ದೇಶವು ಮತಾಂಧರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುತ್ತದೆ. ಭಾರತದಲ್ಲಿ ಮಾತ್ರ ಅವರಿಗೆ ಸ್ವಚ್ಛಂದವಾಗಿ ಸುತ್ತಾಡಬಹುದಾಗಿದೆ. ಈ ದಾಳಿಯ ನಂತರವೂ ಸಂಘಟನೆಯ ಕಾರ್ಯಕರ್ತರು ವಿರೋಧವನ್ನು ಮುಂದುವರಿಸಿ ‘ಅಲ್ಲಾ ಹೂ ಅಕಬರ’ನ ಘೋಷಣೆಯನ್ನು ನೀಡಿ ಗಲಭೆಯ ವಾತಾವರಣವನ್ನು ಸೃಷ್ಟಿಸಲು ಆರಂಭಿಸಿದ್ದಾರೆ. ಆದುದರಿಂದ ಈಗ ಪೊಲೀಸರ ಬಲವು ವ್ಯಯವಾಗಲಿದೆ.

ಹತ್ಯೆ, ಗಲಭೆ ಮತ್ತು ಲವ್ ಜಿಹಾದ್ ಮಾಡಿ ಹಿಂದೂಗಳ ವಂಶವಿಚ್ಛೇದವನ್ನು ಮಾಡುವ ಪಿ.ಎಫ್.ಐ.ವು ಸಮೂಲ ನಾಶವಾಗುವವರೆಗೆ ಈ ತನಿಖೆಯು ಮುಂದುವರಿಯಬೇಕು. ಹಿಂದೂ ಜನಜಾಗೃತಿ ಸಮಿತಿಯು ಪಿ.ಎಫ್.ಐ.ಅನ್ನು ನಿಷೇಧಿಸ ಬೇಕೆಂಬ ಮನವಿಯನ್ನು ನೀಡುತ್ತಾ ಆಂದೋಲಗಳನ್ನು ಮಾಡಿತು, ಸರಕಾರಕ್ಕೆ ಮನವಿಗಳನ್ನು ಸಲ್ಲಿಸಿತು. ‘ಸಿಮಿ’ ಸಂಘಟನೆಯ ಮೇಲೆ ನಿರ್ಬಂಧ ಹೇರಿದ ನಂತರ ಇದು ಅಭಿವೃದ್ಧಿಗೊಂಡಿತ್ತು. ಆ ರೀತಿ ಪುನಃ ಆಗದಿರಲು ಮತ್ತು ‘ಇಸ್ಲಾಮಿ ರಾಷ್ಟ್ರ’ದ ಸ್ಥಾಪನೆಯನ್ನು ತಪ್ಪಿಸಲು ‘ಹಿಂದೂ ರಾಷ್ಟ್ರದ ಸ್ಥಾಪನೆಯೇ ಇದರ ಮೂಲಕ್ಕೆ ಹಾಕುವ ಪೆಟ್ಟಾಗಿದೆ.