ರಷ್ಯಾದ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಕ್ಕಳು ಸೇರಿದಂತೆ ೧೩ ಜನರ ಮೃತ್ಯು

  • ಆತ್ಮಹತ್ಯೆ ಮಾಡಿಕೊಂಡ ದಾಳಿಕೋರ
  • ದಾಳಿ ಮಾಡಿದವನ ಶರ್ಟ್‌ನಲ್ಲಿ ನಾಜಿಯಾದ ಚಿಹ್ನೆ !

ಇಜೆವ್ಸ್ಕ್ (ರಷ್ಯಾ) – ಇಲ್ಲಿನ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ೧೩ ಮಂದಿ ಮೃತಪಟ್ಟಿದ್ದು, ೨೧ ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಏಳು ಚಿಕ್ಕ ಮಕ್ಕಳು ಸೇರಿದ್ದಾರೆ. ಗುಂಡಿನ ದಾಳಿಯ ನಂತರ ಗುಂಡು ಹಾರಿಸಿದವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು; ಆದರೆ ಗುಂಡಿನ ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ದಾಳಿ ನಡೆಸಿದವನ ಗುರುತನ್ನು ಸಹ ಖಚಿತಪಡಿಸಲಾಗಿಲ್ಲ. ಅಧಿಕಾರಿಗಳ ಹೇಳಿಕೆಯಂತೆ, ದಾಳಿ ನಡೆಸಿದವನ ನಾಜಿ ಚಿಹ್ನೆ ಹೊಂದಿರುವ ಕಪ್ಪು ಶರ್ಟ್ ಧರಿಸಿದ್ದನು. ಅವರ ಬಳಿ ಯಾವುದೇ ಗುರುತಿನ ಚೀಟಿ ಸಿಕ್ಕಿಲ್ಲ. ಅವನನ್ನು ಗುರುತಿಸಲಾಗುತ್ತಿದೆ.