ಕೇರಳದಲ್ಲಿನ ಬಂದ ಆಚರಿಸಿರುವುದು ಕಾನೂನ ಬಾಹಿರ ! – ಕೇರಳ ಉಚ್ಚ ನ್ಯಾಯಾಲಯ

ತಿರುವನಂತಪುರಂ (ಕೇರಳ) – ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಸೆಪ್ಟೆಂಬರ್ ೨೩ ರಂದು ಬಂದಗೆ ಕರೆ ನೀಡಲಾಗಿತ್ತು. ಆ ಸಮಯದಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಕೇರಳ ಉಚ್ಚ ನ್ಯಾಯಾಲಯ ಸ್ವತಃ ಮಧ್ಯಪ್ರವೇಶಿಸಿ ‘ಸಾರ್ವಜನಿಕ ಆಸ್ತಿಯ ಹಾನಿ ಮಾಡುವುದು ಸಹಿಸಲಾಗುವುದಿಲ್ಲ’, ಎಂದು ಹೇಳಿದೆ. ‘ಈ ರೀತಿಯಲ್ಲಿ ಯಾರೇ ಯಾವಾಗ ಬೇಕಿದ್ದರೂ ಬಂದ ಕರೆ ನೀಡಲು ಸಾಧ್ಯವಿಲ್ಲ. ಈ ಬಂದ್ ಕಾನೂನು ಬಾಹಿರವಾಗಿದೆ’, ಎಂದು ಉಚ್ಚ ನ್ಯಾಯಾಲಯ ಹೇಳಿದೆ. ಹಾಗೂ ನ್ಯಾಯಾಲಯದ ಆದೇಶದ ಉಲ್ಲಂಘನೆ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂಬ ಆದೇಶ ನ್ಯಾಯಾಲಯ ಸರಕಾರಕ್ಕೆ ನೀಡಿದೆ. ‘ಯಾವುದೇ ರೀತಿಯ ಹಿಂಸಾಚಾರ ತಡೆಯುವುದಕ್ಕಾಗಿ ಎಷ್ಟು ಸಾಧ್ಯವೋ ಅಷ್ಟು ಉಪಾಯ ಯೋಜನೆಗಳು ಮಾಡಬೇಕೆಂದು’, ಸರಕಾರಕ್ಕೆ ನ್ಯಾಯಾಲಯ ಹೇಳಿದೆ.