ಜಯಪುರ (ರಾಜಸ್ಥಾನ) – ಹಿಂದೂ ಸಂಘಟಿತರಾಗದೆ ಇದ್ದರೆ ಅವರು ತಮ್ಮ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಹಿಂದೂಗಳು ಸಂಘಟಿತರಾಗುವುದು ಅವಶ್ಯಕವಾಗಿದೆ, ಎಂದು ಪುರಿಯ ಪೂರ್ವಾನ್ಮಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಪ್ರತಿಪಾದಿಸಿದರು. ಅವರು ಗೋವಿಂದ ದೇವಜಿ ದೇವಸ್ಥಾನದಲ್ಲಿ ಎಲ್ಲಾ ಸಮಾಜವು ಹಿಂದೂ ಮಹಾ ಸಭೆಯು ಆಯೋಜಿಸಿರುವ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ‘ನೂಪುರ ಶರ್ಮಾ ಏನು ಮಾತನಾಡಿದ್ದಾರೆ ಅದು ಯೋಗ್ಯವೇ ಆಗಿದೆ. ಅದರ ಬಗ್ಗೆ ಇಷ್ಟೊಂದು ಗಲಾಟೆ ಏಕೆ ಮಾಡಲಾಗುತ್ತಿದೆ ?’, ಹೀಗೂ ಸಹ ಅವರು ಈ ಸಮಯದಲ್ಲಿ ಹೇಳಿದರು. ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಹಿಂದೂ ರಾಷ್ಟ್ರ ಸಂವಾದದ ಸಮಯದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಆ ಸಮಯದಲ್ಲಿ ಅವರು ಮಂಡಿಸಿದ ಸೂತ್ರಗಳು ಈ ಮುಂದಿನಂತಿವೆ.
शंकराचार्य स्वामी निश्चलानंद सरस्वती ने कहा कि बाइबिल में से यदि गीता के अंश को निकाल दिया जाए तो बाइबिल ही खत्म हो जाएगी #Rajasthan https://t.co/cMPkCxqn7F
— Dainik Bhaskar (@DainikBhaskar) September 21, 2022
ಏಸುಕ್ರಿಸ್ತ ಮತ್ತು ಮಹಮ್ಮದ್ ಪೈಗಂಬರ್ ಇವರ ಪೂರ್ವಜರು ಸನಾತನಿ ವೈದಿಕ ಹಿಂದೂಗಳಾಗಿದ್ದರು !
ಜಗತ್ತಿನಾದ್ಯಂತ ಜನರ ಪೂರ್ವಜರು ಸನಾತನಿ ವೈದಿಕ ಹಿಂದೂಗಳಾಗಿದ್ದರು. ಏಸುಕ್ರಿಸ್ತ ಮತ್ತು ಮಹಮ್ಮದ್ ಪೈಗಂಬರ್ ಇವರ ಪೂರ್ವಜರು ಕೂಡ ಹಿಂದೂಗಳಾಗಿದ್ದರು. ಅವರು ಸನಾತನಿ ವೈದಿಕ ಆರ್ಯರಾಗಿದ್ದರು.
ನಾನು ಸಹಿ ಮಾಡಿದ್ದರೆ, ಅಯೋಧ್ಯೆಯ ಶ್ರೀರಾಮ ಮಂದಿರದ ಪಕ್ಕದಲ್ಲಿ ಮಸೀದಿ ಕಟ್ಟಲಾಗುತ್ತಿತ್ತು !
ನನ್ನನ್ನು ಬಿಟ್ಟು ಎಲ್ಲಾ ಶಂಕರಾಚಾರ್ಯರು ಆಗಿನ ಪ್ರಧಾನಿ ನರಸಿಂಹರಾವ್ ಇವರ ಹೇಳಿಕೆಯ ಮೇರೆಗೆ ‘ರಾಮಾಲಯ ಟ್ರಸ್ಟ್’ ಮೇಲೆ ಸಹಿ ಮಾಡಿದ್ದರು. ಅಯೋಧ್ಯೆಯಲ್ಲಿನ ದೇವಸ್ಥಾನ ಮತ್ತು ಮಸೀದಿ ಎರಡನ್ನು ಕಟ್ಟುವ ಧೇಯ್ಯ ಅವರದಾಗಿತ್ತು. ನಾನು ಸಹಿ ಮಾಡಿದ್ದರೆ, ಶ್ರೀರಾಮ ದೇವಸ್ಥಾನಕ್ಕೆ ಅಂಟಿಕೊಂಡು ಅದೇ ಸಮಯಕ್ಕೆ ಮಸೀದಿ ಕಟ್ಟಲಾಗುತ್ತಿತ್ತು. ಯೋಗಿ ಆದಿತ್ಯನಾಥ್ ಮತ್ತು ಸರ್ವೋಚ್ಚ ನ್ಯಾಯಾಲಯದಿಂದ ಬಾಬರಿ ಮಸೀದಿಯ ಬದಲು ಮುಸಲ್ಮಾನರಿಗೆ ೫ ಎಕರೆ ಭೂಮಿ ನೀಡಿದೆ.
ಉತ್ತರ ಪ್ರದೇಶದಲ್ಲಿ ೩ ಹೊಸ ಪಾಕಿಸ್ತಾನ ನಿರ್ಮಾಣ ಮಾಡುವ ಪ್ರಸ್ತಾವ ಸ್ವೀಕರಿಸಲಾಗಿದೆ ?
ಅಯೋಧ್ಯೆಯಲ್ಲಿನ ರಾಮ ಜನ್ಮ ಭೂಮಿಯ ಮೇಲೆ ಶ್ರೀರಾಮ ದೇವಸ್ಥಾನ ಕಟ್ಟುವ ಅಭಿಯಾನ ನಡೆಸಲಾಯಿತು. ಮುಸಲ್ಮಾನ ಪಕ್ಷಕ್ಕೆ ಕಾನೂನರೀತ್ಯ ೫ ಎಕರೆ ಭೂಮಿ ನೀಡಲಾಯಿತು. ಕಾಶಿ ಮತ್ತು ಮಥುರಾ ಇಲ್ಲಿಯೂ ಅದರ ನಕಲು ನಡೆಯುವುದು. ಒಂದೇ ಉತ್ತರ ಪ್ರದೇಶದಲ್ಲಿ ೩ ಹೊಸ ಪಾಕಿಸ್ತಾನ ನಿರ್ಮಾಣ ಮಾಡುವ ಪ್ರಸ್ತಾವ ಸ್ವೀಕರಿಸಲಾಗಿದೆ.
ಸರಕಾರ ಸಮಾನ ನಾಗರೀಕ ಕಾನೂನಿನ ಸ್ವರೂಪ ಸ್ಪಷ್ಟಪಡಿಸಬೇಕು !
ಎಲ್ಲಕ್ಕೂ ಮೊದಲು ಸರಕಾರಿ ಪ್ರಣಾಳಿಯಿಂದ ಸಮಾನ ನಾಗರೀಕ ಕಾನೂನಿನ ಸ್ವರೂಪ ಸ್ಪಷ್ಟಪಡಿಸಬೇಕು. ನಂತರ ಅದರ ಯೋಚನೆ ಮಾಡುವ ಅವಶ್ಯಕವಾಗಿದೆ. ಯಾವಾಗ ನಾವು ಇತರರಿಂದ ಒಳ್ಳೆಯವರ್ತನೆಯ ಅಪೇಕ್ಷೆ ಪಡುತ್ತೇವೆ, ಆಗ ನಾವು ಕೂಡ ಇತರರ ಜೊತೆಗೆ ಹಾಗೆ ವರ್ತಿಸಬೇಕಾಗುತ್ತದೆ. ‘ವಸೂಧೈವ ಕುಟುಂಬಕಂ, (ಸಂಪೂರ್ಣ ಪೃಥ್ವಿಯೇ ಕುಟುಂಬವಾಗಿದೆ) ಮತ್ತು ‘ಸರ್ವೆ ಭವಂತು ಸುಖಿನಃ (ಎಲ್ಲರೂ ಸುಖವಾಗಿ ಇರಬೇಕು) ಇದು ಸಮಾನ ನಾಗರಿಕತ್ವದ ಸೂತ್ರ ಇರಬಹುದು.
ದಲಿತ ಶಬ್ದದ ಮೂಲಕ ಹಿಂದೂಗಳಲ್ಲಿ ಬಿರುಕು ಮೂಡಿಸಲಾಗಿದೆ !
‘ದಲಿತ’ ಈ ಶಬ್ದ ಉಪಯೋಗಿಸಿ ಸಮಾಜ ಒಡೆಯುವ ಪ್ರಯತ್ನ ಯಾರು ಮಾಡಿದರು ? ಶರೀರದಲ್ಲಿ ತಲೆ, ಕೈ ಮತ್ತು ಕಾಲು ಉಪಯೋಗಿಸಲಾಗುತ್ತದೆ ಅಲ್ಲವೇ ? ಇದರಲ್ಲಿ ಸಂಘರ್ಷವಾದರೆ ಆಗ ಜೀವನ ನಡೆಯುವುದೇ ? ಕಣ್ಣು ಕಣ್ಣಿನ ಕೆಲಸ ಮಾಡುತ್ತದೆ, ಕಿವಿ ಕಿವಿಯ ಕೆಲಸ ಮಾಡುತ್ತದೆ, ಈ ಎಲ್ಲದಕ್ಕೂ ಉಪಯುಕ್ತತೆ ಮತ್ತು ಸಂವಾದ ಇದೆ, ಆಗಲೇ ಜೀವನ ನಡೆಯುತ್ತದೆ. ಸಮಾಜಕ್ಕಾಗಿ ಶಿಕ್ಷಣ, ಸಂರಕ್ಷಣ, ಸೇವೆ, ಮತ್ತು ಸ್ವಚ್ಛತೆ ಇದೆಲ್ಲವೂ ಉಪಲಬ್ಧವಿದೆ. ಇದಕ್ಕಾಗಿ ಧರ್ಮದಲ್ಲಿ ವರ್ಣ ವ್ಯವಸ್ಥೆ ಅವಶ್ಯಕವಾಗಿದೆ ಅಲ್ಲವೇ ? ಈ ವ್ಯವಸ್ಥೆ ಜನಪರವಾಗಿದೆ, ಅದು ಸನಾತನದ ಪರಂಪರೆಯಾಗಿದೆ. ಪ್ರತಿಯೊಂದು ವ್ಯಕ್ತಿಯ ಜೀವನೋಪಾಯ ಜನ್ಮದಿಂದಲೆ ಸುರಕ್ಷಿತವಾಗಿರಬೇಕು, ಈ ಸತ್ಯ ಸನಾತನ ಧರ್ಮದಲ್ಲಿ ಹೇಳಲಾಗಿದೆ.
ಹಿಂದೂ ರಾಷ್ಟ್ರದ ಧೈಯ್ಶ !
ಸುಶಿಕ್ಷಿತ, ಸುಸಂಸ್ಕೃತ, ಸುರಕ್ಷಿತ, ಸಮೃದ್ಧ, ಸೇವಾಭಿಮುಖ, ಆರೋಗ್ಯವಂತ, ಸರ್ವ ಉಪಯೋಗಿ ವ್ಯಕ್ತಿ ಮತ್ತು ಸಮಾಜದ ರಚನೆ ಇದು ಹಿಂದೂ ರಾಷ್ಟ್ರದ ಧ್ಯೇಯವಾಗಿದೆ.
ಗೋರಕ್ಷಕರನ್ನು ‘ಗೂಂಡಾ’ಗಳೆಂದು ಹೇಳುತ್ತಿದ್ದರೆ, ಗೋ ಹತ್ಯೆ ನಡೆಯುವುದು !
ಗೋ ವಂಶದ ರಕ್ಷಣೆ ಆಗಬೇಕು, ಆದರೆ ಒಬ್ಬ ಪ್ರತಿಷ್ಠಿತವ್ಯಕ್ತಿ, ‘ಗೋರಕ್ಷಕರು ಗೂಂಡಾಗಳಾಗಿದ್ದಾರೆ.’ ಸರ್ವೋಚ್ಚ ನ್ಯಾಯಾಲಯವು ಕೂಡ ಹೇಳಿದೆ, ‘ಗೋರಕ್ಷಕರು ಗೂಂಡಾಗಳಾಗಿದ್ದಾರೆ.’ ದೇಶದ ಸರ್ವೋಚ್ಚ ನಾಯಕರು ಮತ್ತು ನ್ಯಾಯಾಲಯ ಈ ರೀತಿ ಹೇಳಿದರೆ ಆಗ ಗೋ ಹತ್ಯೆಯ ಮಾರ್ಗ ಸುಲಭವಾಗುತ್ತದೆ. ಆದ್ದರಿಂದ ಗೋವುಗಳ ಹತ್ಯೆ ನಡೆಯುವುದು.
ಶ್ರೀಮದ್ ಭಗವದ್ಗೀತಾ ಮತ್ತು ಬೈಬಲ್
ಶ್ರೀಮದ್ ಭಗವದ್ಗೀತೆಯ ಭಾಗ ಬೈಬಲ್ ನಿಂದ ತೆಗೆದು ಹಾಕಿದರೆ ಬೈಬಲ್ ನಲ್ಲಿ ಏನು ಉಳಿಯುವುದಿಲ್ಲ. ಸ್ವತಃ ಅಮೇರಿಕಾದ ಮಾಜಿ ರಾಷ್ಟ್ರ ಅಧ್ಯಕ್ಷ ಇದರ ಮೇಲೆ ವಿಶ್ವಾಸವಿಟ್ಟಿದ್ದರು.
ಸನಾತನದ ಮಹತ್ವ !
ಸಂಚಾರ ವಾಣಿ, ಸಂಗಣಕ ಮತ್ತು ಉಪಗ್ರಹ ಇದರ ಯುಗದಲ್ಲಿಯೂ ಕೂಡ ಸನಾತನ ಧರ್ಮ ಎಲ್ಲದರಲ್ಲಿ ಮಹತ್ವದ್ದಾಗಿದೆ; ಕಾರಣ ಅಲ್ಲಿ ಕೇವಲ ಸನಾತನ ಇರುವುದು ಅದು ಶಾಶ್ವತವಾಗಿದೆ.
ಸಂಪಾದಕೀಯ ನಿಲುವುಹಿಂದೂಗಳು ಸಂತರ ಮಾತು ಕೇಳುವುದಿಲ್ಲ. ಆದ್ದರಿಂದ ಪ್ರಸ್ತುತ ಅವರನ್ನು ಅನೇಕ ಸ್ಥಳಗಳಲ್ಲಿ ಕೊಲ್ಲಲಾಗುತ್ತಿದೆ, ಇದು ವಸ್ತು ಸ್ಥಿತಿ ಇದೆ ಮತ್ತು ಮುಂದೆಯೂ ಸಹ ಈಗ ವರ್ತಿಸುವ ರೀತಿಯಲ್ಲಿಯೇ ವರ್ತಿಸಿದರೆ ಇದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ ! |