ಪ.ಪೂ. ದಾಸ ಮಹಾರಾಜರು ಅನುಭವಿಸಿದ ಪ.ಪ. ಶ್ರೀಧರ ಸ್ವಾಮೀಯವರ ಸಂನ್ಯಾಸಿ ಜೀವನ ಮತ್ತು ಅವರ ಕೃಪಾಪ್ರಸಾದ !

ಪ.ಪ. ಭಗವಾನ ಶ್ರೀಧರಸ್ವಾಮಿ

‘ಪ.ಪೂ. ಶ್ರೀಧರಸ್ವಾಮಿಯವರ ಶಿಷ್ಯರಲ್ಲಿ ಅವರ ಬಗೆಗಿರುವ ಸೇವಾಭಾವ ಹೇಗಿತ್ತು ?’, ಈ ಕುರಿತು ಪ.ಪೂ. ದಾಸ ಮಹಾರಾಜರು ತಮ್ಮ ಸೇವೆಯನ್ನು ಮಾಡುವ ಸಾಧಕರಿಗೆ ತಮ್ಮ ಅನುಭವವನ್ನು ಹೇಳಿದರು. ಭಗವಾನ ಶ್ರೀಧರಸ್ವಾಮಿಯವರಲ್ಲಿನ ಚೈತನ್ಯ ಮತ್ತು ಚೈತನ್ಯಮಯ ಸೇವೆಯ ಸ್ವರೂಪ ಕೃಪಾ ಪ್ರಸಾದದಿಂದ ಸ್ವಾಮಿಯವರ ಶಿಷ್ಯರು ಮತ್ತು ಭಕ್ತರು ಮಾಡಿಕೊಂಡ ಲಾಭದ ಅನುಭವವನ್ನು ಇಲ್ಲಿ ಕೊಡಲಾಗಿದೆ.

ಅನುಭವಜನ್ಯ ಜ್ಞಾನವಾಗಿರುವ ಪ.ಪೂ. ದಾಸ ಮಹಾರಾಜರ ಬರವಣಿಗೆ !

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ’ಪ.ಪೂ. ದಾಸ ಮಹಾರಾಜರ ಅನುಭವ ಮತ್ತು ಅವರ ಅನುಭೂತಿಯ ಬರವಣಿಗೆಯು ತುಂಬಾ ವೈಶಿಷ್ಟ್ಯಪೂರ್ಣವಾಗಿದೆ; ಏಕೆಂದರೆ ಪ.ಪೂ. ದಾಸ ಮಹಾರಾಜರು ಅದೆಲ್ಲವನ್ನು ಅನುಭವಿಸಿದ್ದಾರೆ ಮತ್ತು ಪ್ರತಿಕೂಲ ಸ್ಥಿತಿಯಲ್ಲಿ ಅವರು ಸಾಧನೆಗಾಗಿ ಕಠಿಣ ಪ್ರಯತ್ನಗಳನ್ನು ಮಾಡಿದ್ದಾರೆ ಮತ್ತು ಇನ್ನೂ ಮಾಡುತ್ತಿದ್ದಾರೆ. ನಮಗೆ ಇಂತಹ ಸಂತರ ಸಾನಿಧ್ಯವು ಲಭಿಸಿದೆ. ‘ಅವರಿಗೆ ಕೇವಲ ತಾತ್ತ್ವಿಕ ಜ್ಞಾನ ಗೊತ್ತಿದ್ದು ಅವರು ಹೇಳುತ್ತಿದ್ದಾರೆ’, ಎಂದಲ್ಲ ಅವರು ಸ್ವತಃ ಕೃತಿ ಮಾಡಿರುವುದರಿಂದ ಇದು ಅವರ ಅನುಭವದಲ್ಲಿನ ಜ್ಞಾನವಾಗಿದೆ. ಅಧ್ಯಾತ್ಮದಲ್ಲಿ ಕೃತಿಗೆ ಶೇ. ೯೮ ರಷ್ಟು ಮಹತ್ವವಿದೆ. ಈ ಬರವಣಿಗೆ ಮತ್ತು ಇಂತಹ ಸಂತರು ನಮಗೆ ಎಲ್ಲಿಯೂ ಸಿಗುವುದಿಲ್ಲ. ಎಲ್ಲರಿಗೂ ಈ ಜ್ಞಾನದ ಲಾಭವಾಗಬೇಕು. ಇದರಿಂದ ಸಮಷ್ಟಿಗೆ ಕಲಿಯಲು ಸಾಧ್ಯವಾಗುವುದು.’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.

ಪ.ಪೂ. ದಾಸ ಮಹಾರಾಜರು ಮತ್ತು ಪೂ. (ಸೌ.) ಲಕ್ಷ್ಮಿ ನಾಯಿಕ್

೧. ಭಗವಾನ ಶ್ರೀಧರಸ್ವಾಮಿಯವರ ಸಂನ್ಯಾಸಿ ಜೀವನ !

೧ ಅ. ಭಗವಾನ ಶ್ರೀಧರಸ್ವಾಮಿಯವರು ಸಂನ್ಯಾಸಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದು : ‘ಭಗವಾನ ಶ್ರೀಧರಸ್ವಾಮಿಯವರು ಯಾವಾಗಲೂ ತ್ರಿಕಾಲ ಸ್ನಾನಸಂಧ್ಯಾ ಮಾಡುತ್ತಿದ್ದರು. ಸ್ವಾಮಿಯವರು ಸಂನ್ಯಾಸಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಸ್ವಾಮಿಯವರು, ”ನಾವು ಸಂನ್ಯಾಸಿಗಳಾಗಿದ್ದೇವೆ, ಆದ್ದರಿಂದ ನಾವು ಸಂನ್ಯಾಸಿಧರ್ಮವನ್ನು ಪಾಲಿಸಲೇಬೇಕು” ಎಂದು ಹೇಳುತ್ತಿದ್ದರು.

೧ ಆ. ಸ್ವಾಮೀಯವರು ಸಾಬೂನು ಉಪಯೋಗಿಸದೇ ಮಣ್ಣು ಅಥವಾ ಗೋಮೂತ್ರವನ್ನು ಉಪಯೋಗಿಸುವುದು : ಸ್ವಾಮಿಯ ವರುಸ್ನಾನಕ್ಕಾಗಿ, ಕೈ ಕಾಲುಗಳನ್ನು ತೊಳೆಯಲು ಅಥವಾ ಇನ್ನಿತರ ಸಮಯದಲ್ಲಿ ಸಾಬೂನನ್ನು ಉಪಯೋಗಿಸಲಿಲ್ಲ. ಅವರು ಯಾವಾಗಲೂ ಮಣ್ಣು ಅಥವಾ ಗೋಮೂತ್ರವನ್ನು ಉಪಯೋಗಿಸುತ್ತಿದ್ದರು.

೧ ಇ. ಸ್ವಾಮಿಯವರು ನದಿ, ಕೆರೆ, ಝರಿ ಮತ್ತು ಬಾವಿ ಇಂತಹ ಸ್ಥಳಗಳಲ್ಲಿ ಸ್ನಾನ ಮಾಡುವುದು : ಸ್ವಾಮಿಯವರು ಸ್ನಾನಕ್ಕಾಗಿ ಯಾವಾಗಲೂ ತಣ್ಣನೆಯ ಮತ್ತು ಹರಿಯುವ ನೀರನ್ನು ಉಪಯೋಗಿಸುತ್ತಿದ್ದರು. ಅನಾರೋಗ್ಯದಲ್ಲಿದ್ದಾಗಲೂ ಅವರು ಸ್ನಾನಕ್ಕಾಗಿ ಬಿಸಿ ನೀರನ್ನು ಉಪಯೋಗಿಸಲಿಲ್ಲ. ಯಾತ್ರೆಯ ಸಮಯದಲ್ಲಿ ಅವರು ಯಾವಾಗಲೂ ನದಿ, ಕೆರೆ, ಝರಿ, ಬಾವಿ ಇಂತಹ ಸ್ಥಳಗಳಲ್ಲಿ ಉಳಿದುಕೊಂಡು ಸ್ನಾನವನ್ನು ಮಾಡುತ್ತಿದ್ದರು. ಸ್ವಾಮಿಯವರು ಬಾವಿಯೊಳಗಿಂದ ನೀರು ತೆಗೆಯಲು ಉಪಯೋಗಿಸಲಾಗುವ ತೊಗಟೆಯಿಂದ ತಯಾರಿಸಿದ ದೊಡ್ಡ ಚೀಲದಿಂದ ತೆಗೆದ ನೀರನ್ನು ಸ್ನಾನಕ್ಕಾಗಿ ಉಪಯೋಗಿಸುತ್ತಿರಲಿಲ್ಲ. ಅವರು ಬಾವಿಯಲ್ಲಿ ಇಳಿದು ಸ್ನಾನವನ್ನು ಮಾಡುತ್ತಿದ್ದರು.

೧ ಈ. ಭಗವಾನ ಶ್ರೀಧರಸ್ವಾಮಿಯವರ ಅಸ್ತಿತ್ವ ಮತ್ತು ಚೈತನ್ಯದಿಂದ ಅವರು ಸ್ನಾನ-ಸಂಧ್ಯಾ ಮಾಡಿದ ಸ್ಥಾನಗಳು ಶುದ್ಧವಾಗುವುದು : ಸ್ವಾಮಿಯವರು ಯಾತ್ರೆಯ ಸಮಯದಲ್ಲಿ ಎಲ್ಲಿ ಸ್ನಾನ-ಸಂಧ್ಯಾಗಳನ್ನು ಮಾಡುತ್ತಿದ್ದರೋ, ಆ ಸ್ಥಳಗಳು ಅವರ ಅಸ್ತಿತ್ವ ಮತ್ತು ಚೈತನ್ಯದಿಂದ ಶುದ್ಧವಾಗುತ್ತಿದ್ದವು. ‘ಜನರು ಸ್ವಾಮಿಯವರಿಗೆ ಅನಿಷ್ಟ ಶಕ್ತಿಗಳ ತೊಂದರೆಯಿರುವ ಕೆಲವು ಬಾವಿಗಳು ಮತ್ತು ನದಿಗಳಿಗೆ ‘ಹೋಗಬೇಡಿ’, ಎಂದು ಹೇಳುತ್ತಿದ್ದರು; ಆದರೆ ಸ್ವಾಮಿಯವರು ಆ ಸ್ಥಳಗಳಿಗೆ ಹೋಗಿ ಅಲ್ಲಿ ಸ್ನಾನವನ್ನು ಮಾಡಿ ಶುದ್ಧಗೊಳಿಸುತ್ತಿದ್ದರು. ಅಲ್ಲಿನ ಅನಿಷ್ಟ ಶಕ್ತಿಗಳು ನಾಶಗೊಂಡಿರುವುದರಿಂದ ಶುದ್ಧವಾಗಿರುವ ನೀರು ಸಮಾಜಕ್ಕೆ ಉಪಯೋಗಿಸಲು ಯೋಗ್ಯವಾಗಿರುತ್ತಿತ್ತು.

೨. ಭಗವಾನ ಶ್ರೀಧರಸ್ವಾಮಿಯವರಲ್ಲಿನ ಚೈತನ್ಯ ಮತ್ತು ಕೃಪಾಪ್ರಸಾದದಿಂದ ಭಕ್ತರಿಗಾದ ಲಾಭ

೨ ಅ. ಭಗವಾನ ಶ್ರೀಧರಸ್ವಾಮಿಯವರು ಕೈಗಳನ್ನು ತೊಳೆಯಲು ಉಪಯೋಗಿಸಿದ ನೀರನ್ನು ಭಕ್ತರು ತೀರ್ಥವೆಂದು ಕುಡಿಯುವುದು ಮತ್ತು ಸ್ವಾಮಿಯವರು ಉಪಯೋಗಿಸಿದ ಮಣ್ಣನ್ನು ಮೈಗೆ ಹಚ್ಚಿದ ನಂತರ ಕೆಲವು ಭಕ್ತರಿಗೆ ಚರ್ಮರೋಗಗಳು ಕಡಿಮೆಯಾದ ಅನುಭೂತಿ ಬರುವುದು : ಸ್ವಾಮಿಯವರು ಕೈಗಳನ್ನು ತೊಳೆಯಲು ಉಪಯೋಗಿಸಿದ ನೀರನ್ನು ಅವರ ಭಕ್ತರು ತೀರ್ಥವೆಂದು ಕುಡಿಯುತ್ತಿದ್ದರು. ಸ್ವಾಮೀಯವರ ಶಿಷ್ಯರು ಅವರ ಕೈಗಳನ್ನು ತೊಳೆಯಲು ಸ್ವಚ್ಛ ನೀರು, ನುಣ್ಣಗೆ ಜರಡಿ ಹಿಡಿದ ಮಣ್ಣು ಮತ್ತು ನೀರು ಕೆಳಗೆ ಬೀಳಬಾರದೆಂದು ಸ್ವಚ್ಛವಾಗಿರುವ ಬಟ್ಟೆಯಲ್ಲಿ ಕಟ್ಟಿದ ಪಾತ್ರೆಯನ್ನು ಹಿಡಿದು ನಿಲ್ಲುತ್ತಿದ್ದರು. ಸ್ವಾಮಿಯವರು ಕೈಗಳಿಗೆ ಮಣ್ಣು ಹಚ್ಚಿ ಆ ಪಾತ್ರೆಯಲ್ಲಿ ಕೈಗಳನ್ನು ತೊಳೆಯುತ್ತಿದ್ದರು. ಆ ಸಮಯದಲ್ಲಿ ಕೈಗಳನ್ನು ತೊಳೆದ ನೀರನ್ನು ಬಟ್ಟೆಯಿಂದ ಸೋಸಿ ಪಾತ್ರೆಯಲ್ಲಿ ಸಂಗ್ರಹವಾಗುತ್ತಿತ್ತು ಮತ್ತು ಮಣ್ಣು ಬಟ್ಟೆಯ ಮೇಲೆ ಇರುತ್ತಿತ್ತು. ಸ್ವಾಮಿಯವರ ಶಿಷ್ಯರು ಆ ಚೈತನ್ಯಮಯ ನೀರನ್ನು ತೀರ್ಥವೆಂದು ಕುಡಿಯುತ್ತಿದ್ದರು, ಹಾಗೆಯೇ ಚರ್ಮರೋಗವಾದವರಿಗೆ ಆ ಮಣ್ಣನ್ನು ಮೈಗೆ ಹಚ್ಚಲು ಒಯ್ಯುತ್ತಿದ್ದರು. ಈ ಉಪಾಯಗಳಿಂದ ಅನೇಕ ಭಕ್ತರಿಗೆ ಚರ್ಮರೋಗಗಳಿಂದ ಗುಣಮುಖರಾದ ಮತ್ತು ಕಾಯಿಲೆ ಕಡಿಮೆಯಾದ ಅನುಭೂತಿಗಳು ಬಂದಿವೆ. (ಸ್ವಾಮಿಯವರ ಬಗ್ಗೆ ಭಕ್ತರಲ್ಲಿ ಭಾವವಿರುವುದರಿಂದ ಇಂತಹ ಅನುಭೂತಿಗಳು ಬರುತ್ತವೆ. ಅವು ಎಲ್ಲರಿಗೂ ಬರುತ್ತವೆ ಎಂದೆನಿಲ್ಲ. – ಸಂಕಲನಕಾರರು)

೩. ಭಗವಾನ ಶ್ರೀಧರಸ್ವಾಮಿ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೃತಜ್ಞತೆ ಮತ್ತು ಪ್ರಾರ್ಥನೆ

ಭಗವಾನ ಶ್ರೀಧರಸ್ವಾಮಿಯವರು ಅವತಾರೀ ಪುರುಷರಾಗಿದ್ದರು. ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರ ಏಕೀಕೃತ ತತ್ತ್ವಗಳೆಂದರೆ ದತ್ತ ! ಭಗವಾನ ಶ್ರೀಧರಸ್ವಾಮಿಯವರು ದತ್ತನ ಅವತಾರವಾಗಿದ್ದಾರೆ. ಭಗವಾನ ಶ್ರೀಧರಸ್ವಾಮಿಯವರ ಈಗಿನ ಇನ್ನೊಂದು ಅವತಾರವೇ ವಿಷ್ಣುರೂಪಿ, ಪರಬ್ರಹ್ಮಸ್ವರೂಪಿ, ಸಚ್ಚಿದಾನಂದರೂಪಿ, ಪರಾತ್ಪರ ಗುರುದೇವರು (ಪರಾತ್ಪರ ಗುರು ಡಾ. ಆಠವಲೆಯವರು ಇವರು) ನಮ್ಮಂತಹ ಸಾಮಾನ್ಯ ಜೀವಗಳನ್ನು ತಮ್ಮ ಹತ್ತಿರ ಕರೆದುಕೊಂಡಿದ್ದಾರೆ. ಅವರು ನಮ್ಮಂತಹ ಜೀವಗಳ ಉದ್ಧಾರಕ್ಕಾಗಿ ಸೇವೆ ಮತ್ತು ಸಾಧನೆಯ ಅವಕಾಶವನ್ನು ನೀಡುತ್ತಿದ್ದಾರೆ. ಅವರ ಈ ಅನಂತ ಕೃಪೆಗಾಗಿ ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು. ‘ಈ ಅಮೃತತುಲ್ಯ ಅವಕಾಶದ ಲಾಭವನ್ನು ಪಡೆಯಲು ಸಾಧ್ಯವಾಗಲಿ’ ಎಂದು ಸದ್ಗುರು ಗುರುದೇವರೇ ತಮ್ಮ ಚರಣಗಳಲ್ಲಿ ಕಳಕಳಿಯ ಪ್ರಾರ್ಥನೆ’

– ತಮ್ಮ ಚರಣಸೇವಕ ದಾಸ, – ಪ.ಪೂ. ದಾಸ ಮಹಾರಾಜ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೮.೩.೨೦೨೨)