೨೦೧೪ ರ ಲೋಕಸಭಾ ಚುನಾವಣೆಗಿಂತ ಮೊದಲು ಅಂದಿನ ಕಾಂಗ್ರೆಸ್ ಸರಕಾರ ಮಾಡಿದ ಪಾಪ !
ನವದೆಹಲಿ– ೨೦೧೪ ರ ಲೋಕಸಭಾ ಚುನಾವಣೆಯ ಮೊದಲು ಕಾಂಗ್ರೆಸ್‌ನ ನೇತೃತ್ವದಡಿಯಲ್ಲಿನ ಸಂಯುಕ್ತ ಪುರೋಗಾಮಿ ಮುಂದಾಳತ್ವದ ಸರಕಾರವು ರಾಜಧಾನಿಯಲ್ಲಿನ ೧೨೩ ಪ್ರಮುಖ ಆಸ್ತಿಗಳನ್ನು ದೆಹಲಿ ವಕ್ಫ್ ಬೊರ್ಡ್‌ಗೆ ಉಡುಗೊರೆಯೆಂದು ನೀಡಿತು. ಟೈಮ್ಸ್ ನೌ’ ಇದರ ವಾರ್ತೆಗನುಸಾರ ೨೦೧೪ ರ ಸಾರ್ವಜನಿಕ ಚುನಾವಣೆಯ ಕೆಲವೇ ದಿನಗಳ ಮೊದಲು ಮಂತ್ರಿಮಂಡಳವು ಈ ನಿರ್ಣಯವನ್ನು ತೆಗೆದುಕೊಂಡಿತ್ತು. ಈ ಆಸ್ತಿ ಕನಾಟ್ ಪ್ಲೇಸ್, ಅಶೋಕ ರೋಡ್, ಮಥುರಾ ರೋಡ್ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿವೆ.
ಅ. ಸರಕಾರದ ನಿರ್ಣಯದ ನಂತರ ಹೆಚ್ಚುವರಿ ಸಚಿವ ಜೆ.ಪಿ. ಪ್ರಕಾಶ ಇವರ ಸಹಿ ಇರುವ ಒಂದು ಪತ್ರವನ್ನು ಕಳುಹಿಸಲಾಯಿತು.
ಆ. ಈ ಪತ್ರದಲ್ಲಿ ‘ಭೂಮಿ ಮತ್ತು ವಿಕಾಸ ಕಾರ್ಯಾಲಯ (ಎಲ್.ಎನ್.ಡಿ.ಒ.) ಮತ್ತು ದೆಹಲಿ ವಿಕಾಸ ಪ್ರಾಧಿಕರಣ (ಡಿಡಿಎ) ಇವರ ನಿಯಂತ್ರಣದಲ್ಲಿನ ದೆಹಲಿಯಲ್ಲಿನ ೧೨೩ ಆಸ್ತಿಗಳನ್ನು ದೆಹಲಿ ವಕ್ಫ್ ಬೋರ್ಡ್‌ಗೆ ಒಪ್ಪಿಸಲು ಅನುಮತಿಯನ್ನು ಕೊಡಲಾಗಿದೆ’, ಎಂದು ಬರೆದಿತ್ತು. (ಭಾಜಪ ಸರಕಾರವು ಈ ಸರಕಾರಿ ಆಸ್ತಿಯನ್ನು ಜಪ್ತಿ ಮಾಡಬೇಕು ಎಂಬುದೇ ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ ! – ಸಂಪಾದಕರು)
ಇ. ೨೭ ಫೆಬ್ರವರಿ ೨೦೧೪ ರಂದು ದೆಹಲಿ ವಕ್ಫ್ ಬೋರ್ಡ್ ಭಾರತ ಸರಕಾರಕ್ಕೆ ಒಂದು ಪತ್ರ ಬರೆದು ರಾಜಧಾನಿಯಲ್ಲಿನ ೧೨೩ ಪ್ರಮುಖ ಆಸ್ತಿಗಳ ಮೇಲೆ ದಾವೆ ಹೂಡಿತ್ತು. ವಿಶೇಷವೆಂದರೆ, ಈ ಪ್ರಸ್ತಾಪ ಸಿಕ್ಕಿದನಂತರ ಮಂತ್ರಿಮಂಡಳ ತಕ್ಷಣ ಒಂದು ರಹಸ್ಯ ಪತ್ರವನ್ನು ಕಳುಹಿಸಿ ಅದಕ್ಕೆ ಅನುಮತಿ ನೀಡಿತ್ತು. ಈ ಆಸ್ತಿ ಬ್ರಿಟಿಷ ಸರಕಾರದಿಂದ ಭಾರತ ಸರಕಾರಕ್ಕೆ ಬಳುವಳಿಯಾಗಿ ಸಿಕ್ಕಿತ್ತು.
#WaqfLandSecretNote#EXCLUSIVE | Days before the 2014 elections, the UPA govt ‘gifts’ 123 prime properties in Delhi to Waqf.
“Please refer to the telephonic request”, @RShivshankar takes us through the details of the ‘secret note’. pic.twitter.com/TfcDOShyPJ
— TIMES NOW (@TimesNow) September 16, 2022
ಸಂಪಾದಕೀಯ ನಿಲುವು
|