ಆಫ್ರಿಕಾದ ನಾಮಿಬಿಯನ್ ಚಿರತೆಗಳನ್ನು ಇಂದು ಭಾರತಕ್ಕೆ ತರಲಾಗುವುದು !

ಪ್ರಧಾನಮಂತ್ರಿಯರಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗುವುದು !

ನವ ದೆಹಲಿ – ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ೮ ಚಿರತೆಗಳನ್ನು ತರಲು ನಾಮಿಬಿಯಾದ ರಾಜಧಾನಿ ವಿಂಡಹೋಕಗೆ ವಿಶೇಷ ವಿಮಾನ ಹೋಗಿದ್ದು ಅವುಗಳನ್ನು ಸಪ್ಟೆಂಬರ ೧೭ ರಂದು ಭಾರತಕ್ಕೆ ತರಲಾಗುತ್ತದೆ. ಕೇಂದ್ರ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಉದ್ಘಾಟನೆ ಮಾಡಲಾಗುವುದು.

ಪ್ರಧಾನಮಂತ್ರಿಯವರ ಹುಟ್ಟುಹಬ್ಬದ ದಿನ ಅವರಿಂದಲೇ ಚಿರತೆಗಳನ್ನು ಉದ್ಯಾನದಲ್ಲಿ ಬಿಡಲಾಗುವುದು. ಈ ಚಿರತೆಗಳಲ್ಲಿ ೫ ಗಂಡು ಮತ್ತು ೩ ಹೆಣ್ಣುಗಳಿವೆ. ಈ ಚಿರತೆಗಳನ್ನು ಆರಂಭದಲ್ಲಿ ತೆರೆದಿಟ್ಟ ಗೂಡಿನಲ್ಲಿಡಲಾಗುವುದು. ಸ್ಥಳೀಯ ವಾತಾವರಣಕ್ಕೆ ಹೊಂದಾಣಿಕೆಯಾದನಂತರ ಹಾಗೂ ತಜ್ಞರ ಮಾರ್ಗದರ್ಶನದಡಿಯಲ್ಲಿ ಮೊದಲು ಗಂಡು ಚಿರತೆಯನ್ನು ಅರಣ್ಯದಲ್ಲಿ ಬಿಡಲಾಗುವುದು. ದಕ್ಷಿಣ ಆಫ್ರಿಕಾದ ಚಿರತೆಗಳನ್ನು ಇತರ ದೇಶಗಳಿಗೂ ಸ್ಥಾನಾಂತರ ಮಾಡಿದೆ; ಆದರೆ ಭಾರತಕ್ಕೆ ಈ ಪ್ರಾಣಿಗಳನ್ನು ಮೊತ್ತಮೊದಲಬಾರಿಗೆ ಕಳುಹಿಸಲಾಗುತ್ತಿದೆ.