ಬ್ರೆಂಪ್ಟನ್ (ಕೆನಡಾ) ನಲ್ಲಿನ ಸ್ವಾಮೀನಾರಾಯಣ ಮಂದರದ ಮೇಲೆ ಖಲಿಸ್ತಾನಿ ಭಯೋತ್ಪಾದಕರ ದಾಳಿ !

  • ಮಂದಿರವನ್ನು ಧ್ವಂಸ ಮಾಡಿ ಗೋಡೆಯ ಮೇಲೆ ‘ಖಲಿಸ್ತಾನ ಝಿಂದಾಬಾದ, ಹಿಂದೂಸ್ಥಾನ ಮುರ್ದಾಬಾದ’ ಬರೆಯಲಾಯಿತು !

  • ಭಾರತದಿಂದ ನಿಷೇಧ ವ್ಯಕ್ತ ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವಂತೆ ಬೇಡಿಕೆ !

ಬ್ರಂಪ್ಟನ್ ನಗರದ ಸ್ವಾಮಿನಾರಾಯಣ ಮಂದಿರ

ಟೊರೆಂಟೋ (ಕೆನಡಾ) – ಖಲಿಸ್ತಾನಿ ಭಯೋತ್ಪಾದಕರು ಸಪ್ಟೆಂಬರ ೧೪ ರಂದು ಬ್ರಂಪ್ಟನ್ ನಗರದ ಸ್ವಾಮಿನಾರಾಯಣ ಮಂದಿರದಲ್ಲಿ ದಾಳಿ ಮಾಡಿ ಮಂದಿರದ ಗೋಡೆಯ ಮೇಲೆ ‘ಖಲಿಸ್ತಾನ ಜಿಂದಾಬಾದ, ಹಿಂದೂಸ್ಥಾನ ಮುರ್ದಾಬಾದ’ ಎಂದು ಬರೆದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತಿದೆ. ಭಾರತ ಈ ಘಟನೆಯನ್ನು ‘ಹೇಯ ಕೃತ್ಯ’ ಎಂದು ಹೇಳಿ ಕೆನಡಾ ಬಳಿ ಆರೊಪಿಗಳ ವಿರುದ್ಧ ತಕ್ಷಣ ಕ್ರಮತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ.

೧. ಬ್ರೆಂಪ್ಟನ್‌ನ ಮಹಾಪೌರ ಪೆಟ್ರಿಕ್‌ಬ್ರೌನ್ ಇವರು ಈ ಘಟನೆಗಾಗಿ ಖೇದ ವ್ಯಕ್ತಪಡಿಸುತ್ತಾ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳುವ ಆಶ್ವಾಸನೆ ನೀಡಿದ್ದಾರೆ.

೨. ಇನ್ನೊಂದೆಡೆ ಕೆನಡಾದ ಹಿಂದೂ ಸಂಸದ ಚಂದ್ರ ಆರ್ಯ ಇವರು ಈ ಘಟನೆಯಿಂದ ‘ಕೆನಡಾಯಿ ಹಿಂದೂ’ ಈ ಘಟನೆಯಿಂದ ಚಿಂತಿತರಾಗಿದ್ದಾರೆ ಎಂದು ಹೇಳಿದ್ದಾರೆ. ಈ ಘಟನೆಯನ್ನು ಎಲ್ಲರೂ ಖಂಡಿಸಬೇಕು. ‘ಇದು ಕೇವಲ ಒಂದೇ ಘಟನೆಯಾಗಿರದೆ ಕಳೆದ ಕೆಲವು ಸಮಯದಲ್ಲಿ ಹಿಂದೂ ಮಂದಿರಗಳ ಮೇಲೆ ಇಂತಹ ದಾಳಿ ಮಾಡಿದ ಇತರ ಘಟನೆಗಳೂ ಘಟಿಸಿವೆ.’ ಎಂದು ಕೂಡ ಹೇಳಿದರು.

ಜನವರಿ-ಫೆಬ್ರವರಿ ೨೦೨೨ ರಲ್ಲಿಯೂ ೬ ಮಂದಿರಗಳ ಮೇಲೆ ದಾಳಿಯಾಗಿತ್ತು !

ಈ ಹಿಂದೆ ಜನವರಿ-ಫೆಬ್ರವರಿ ೨೦೨೨ ರಲ್ಲಿಯೂ ಖಲಿಸ್ತಾನಿ ಭಯೋತ್ಪಾದಕರು ಟೊರೆಂಟೋದಲ್ಲಿನ ೬ ಮಂದಿರಗಳ ಮೇಲೆ ದಾಳಿ ಮಾಡಿದ್ದರು. ಇದರಲ್ಲಿ ಮಂದಿರದ ಹುಂಡಿಯಿಂದ ಹಣ ಹಾಗೂ ದೇವರ ಮೂರ್ತಿಯ ಆಭರಣಗಳನ್ನೂ ಕಳ್ಳತನ ಮಾಡಲಾಗಿತ್ತು. ಇದರಲ್ಲಿ ಬ್ರಂಪ್ಟನ್ ನಗರದ ಹನುಮಾನ ಮಂದಿರ ಹಾಗೂ ಮಾಂ ಚಿಂತಾಪೂರ್ಣಿ ಮಂದಿರವೂ ಸಮಾವೇಶವಿತ್ತು.(ಕೆನಡಾದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮಂದಿರಗಳಿಗೆ ದಾಳಿಯಾಗುತ್ತಿರುವಾಗ ಅದನ್ನು ತಡೆಯಲು ಅಲ್ಲಿನ ಸರಕಾರ ಏನು ಮಾಡಿತು ? – ಸಂಪಾದಕರು)

 

ಸಂಪಾದಕೀಯ ನಿಲುವು

ಕೆನಡಾ ಖಲಿಸ್ತಾನವಾದಿ ಭಯೋತ್ಪಾದಕರ ನೆಲೆಯಾಗಿರುವುದರಿಂದ ಅಲ್ಲಿ ಇಂತಹ ಘಟನೆ ನಡೆದರೆ ಆಶ್ಚರ್ಯಪಡುವಂತಹ ವಿಷಯವೇನೂ ಇಲ್ಲ; ಆದರೆ ಈಗ ಭಾರತ ಕೆನಡಾದ ಕಡೆಗೆ ಕೇವಲ ತೀವ್ರ ಶಬ್ದದಲ್ಲಿ ನಿಷೇಧವನ್ನು ನೊಂದಾಯಿಸಿ ಸುಮ್ಮನಿರದೆ ಅದಕ್ಕೆ ತಿಳಿಯುವ ಭಾಷೆಯಲ್ಲಿ ಕ್ರಮತೆಗೆದುಕೊಳ್ಳುವ ಅಪೇಕ್ಷೆಯಿದೆ !