ಚಲನಚಿತ್ರಗಳಿಂದ ಹಿಂದೂಗಳ ದೇವತೆ ಚಿತ್ರಗುಪ್ತನ ವಿಡಂಬನೆ ಮಾಡಿದ ಪ್ರಕರಣ
ಜೌನಪುರ (ಉತ್ತರಪ್ರದೇಶ) – ‘ಥ್ಯಾಂಕ್ ಗಾಡ್’ ಚಲನಚಿತ್ರದ ಪ್ರಸಾರವಾಗಿರುವ ‘ಟ್ರೇಲರ್’ನಲ್ಲಿ (ಚಲನಚಿತ್ರವನ್ನು ಪ್ರದರ್ಶಿಸುವ ಮೊದಲು ಅದರಲ್ಲಿನ ಸಾರಾಂಶವನ್ನು ತೋರಿಸುವ ವಿಡಿಯೋ) ಹಿಂದೂಗಳ ದೇವತೆ ಚಿತ್ರಗುಪ್ತನ ವಿಡಂಬನೆ ಮಾಡಲಾಗಿರುವುದರಿಂದ ಹಿಮಾಂಶು ಶ್ರೀವಾತ್ಸವ ಎಂಬ ಧರ್ಮಪ್ರೇಮಿ ಹಿಂದೂ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ. ಪೊಲೀಸರು ಚಲನಚಿತ್ರದ ನಟ ಅಜಯ ದೇವಗಣ, ಸಿದ್ಧಾರ್ಥ ಮಲ್ಹೋತ್ರಾ ಮತ್ತು ನಿರ್ದೇಶಕ ಇಂದರ ಕುಮಾರ ಇವರ ವಿರುದ್ಧ ಅಪರಾಧವನ್ನು ದಾಖಲಿಸಿದಾಗ ಜೌನಪುರದ ದಿವಾಣಿ ನ್ಯಾಯಾಲಯವು ಅರ್ಜಿಯನ್ನು ನವಂಬರ ೧೮ ರಂದು ಆಲಿಕೆ ಮಾಡುವೆವು ಎಂದು ಹೇಳಿದೆ. ‘ಚಲನಚಿತ್ರ ಅಕ್ಟೋಬರ ೨೫ ರಂದು ಪ್ರಸಾರವಾಗಲಿಕ್ಕಿರುವುದರಿಂದ ಆಲಿಕೆಯ ದಿನಾಂಕವನ್ನು ಅಷ್ಟು ಮುಂದೆ ಇಡುವ ಕಾರಣವೇನು ?’, ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಶ್ನಿಸಲಾಗುತ್ತಿದೆ.
#AjayDevgn–#SidharthMalhotra‘s #ThankGod has courted controversy. A case has been filed against the actors and the filmmakers in UP. Know all details of the legal suit here.https://t.co/gv9AEy0pMK
— India TV (@indiatvnews) September 14, 2022
ಏನಿದು ಪ್ರಕರಣ ?
‘ಟ್ರೇಲರ್’ನಲ್ಲಿ ತೋರಿಸಿರುವ ಒಂದು ಪ್ರಸಂಗದಲ್ಲಿ ನಟ ಅಜಯ ದೇವಗಣ ತನ್ನನ್ನು ‘ಚಿತ್ರಗುಪ್ತ’ ನೆಂದು ಹೇಳುತ್ತಾ ನಟ ಸಿದ್ಧಾರ್ಥ ಮಲ್ಹೋತ್ರ ಇವರ ಕರ್ಮದ ಲೆಕ್ಕಾಚಾರದ ಚರ್ಚೆ ಮಾಡುತ್ತಾರೆ. ಇದರಲ್ಲಿ ದೇವಗಣ ಇವರ ಸಂವಾದ ದೇವತೆಗೆ ಅಪಹಾಸ್ಯ ಮಾಡುವಂತಿದೆ. ಈ ಪ್ರಸಂಗದಲ್ಲಿ ದೇವಗಣ ಅಂದರೆ ಚಿತ್ರಗುಪ್ತನ ಪಕ್ಕದಲ್ಲಿ ಅರೆನಗ್ನಾವಸ್ಥೆಯಲ್ಲಿ ಹುಡುಗಿ ನಿಂತಿರುವುದು ಕಾಣಿಸುತ್ತದೆ.
ದೂರು ನೀಡಿದ ಹಿಮಾಂಶು ಶ್ರೀವಾತ್ಸವ ಇವರು, ಭಗವಾನ ಚಿತ್ರಗುಪ್ತ ನ್ಯಾಯದೇವತೆಯಾಗಿದ್ದಾರೆ. ಅವರು ಕರ್ಮದ ಲೆಕ್ಕಾಚಾರವನ್ನು ಮಾಡಿ ಪಾಪ ಪುಣ್ಯಗಳ ಪಟ್ಟಿಯನ್ನಿಡುತ್ತಾರೆ. ಅದಕ್ಕನುಸಾರ ‘ಮನುಷ್ಯನಿಗೆ ದಂಡ ಅಥವಾ ಪುರಸ್ಕಾರವನ್ನು ನೀಡುವುದು’, ಇದನ್ನು ನಿರ್ಧರಿಸಲಾಗುತ್ತದೆ. ಚಲನಚಿತ್ರದಲ್ಲಿ ಚಿತ್ರಗುಪ್ತನ ಅವಮಾನ ಮಾಡಿರುವುದರಿಂದ ನಮ್ಮ ಧಾರ್ಮಿಕ ಭಾವನೆಗೆ ನೋವಾಗಿದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳ ದೇವತೆಗಳ ವಿಡಂಬನೆಯಾದಾಗ ದೂರನ್ನು ದಾಖಲಿಸಬೇಕಾಗುತ್ತದೆ ? ‘ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಸರಕಾರವೇ ಇದರ ವಿರುದ್ಧ ಕ್ರಮತೆಗೆದುಕೊಳ್ಳಬೇಕು’, ಎಂದು ಎಲ್ಲ ಹಿಂದೂ ಜನತೆಗೆ ಅನಿಸುತ್ತದೆ. ‘ಹಿಂದೂಗಳ ದೇವತೆಗಳ ಸರಾಗವಾಗಿ ನಡೆಯುವ ವಿಡಂಬನೆಯ ವಿರುದ್ಧ ಕಾರ್ಯಾಚರಣೆಯಾಗುವುದಿಲ್ಲ. ಹಿಂದೂಗಳ ಸಹನಶೀಲತೆಯ ಅಂತ್ಯವನ್ನು ನೋಡಲಾಗುತ್ತದೆ’, ಎಂದು ಅನಿಸಿ ಯಾರಾದರೂ ಹಿಂದೂ ಕಾನೂನನ್ನು ಕೈಗೆತ್ತಿಕೊಂಡರೆ ಏನಾಗಬಹುದು, ಎಂಬುದನ್ನು ಸರಕಾರ ಮೊದಲೇ ವಿಚಾರ ಮಾಡಿ ಇನ್ನಾದರೂ ಧರ್ಮನಿಂದನೆ ಕಾನೂನನ್ನು ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ ! |