ಮುಸಲ್ಮಾನರಿಗೆ ಗರಬಾದಲ್ಲಿ ಭಾಗವಹಿಸುವುದಿದ್ದರೇ ಮೂರ್ತಿ ಪೂಜೆಯನ್ನು ಒಪ್ಪಿಕೊಳ್ಳಿ !

ಮಧ್ಯಪ್ರದೇಶದ ಸಾಂಸ್ಕೃತಿಕ ಸಚಿವೆ ಉಷಾ ಠಾಕೂರ್ ಇವರ ಶರತ್ತು !

ಭೋಪಾಳ (ಮಧ್ಯಪ್ರದೇಶ) – ಯಾವ ಮುಸಲ್ಮಾನರಿಗೆ ತಮ್ಮ ಧರ್ಮದ ಬಗ್ಗೆ ಬೇಸರ ಬಂದಿದೆಯೊ, ಯಾರು ಮೂರ್ತಿ ಪೂಜೆಯನ್ನು ಒಪ್ಪಿಕೊಳ್ಳುವರೋ ಹಾಗೂ ಯಾರಿಗೆ ನವರಾತ್ರ್ಯುತ್ಸವದಲ್ಲಿ ಗರಬಾ ಮತ್ತು ದಾಂಡಿಯಾ ಆಡುವುದಿದೆ, ಅವರಿಗೆ ಗರಬಾ ಕಾರ್ಯಕ್ರಮದಲ್ಲಿ ಪ್ರವೇಶ ನೀಡಲಾಗುವುದು. ಬರುವಾಗ ಗುರುತಿನ ಚೀಟಿಯ ಜೊತೆಗೆ ತಾಯಿ, ಹೆಂಡತಿ, ಮಗಳನ್ನು ಜೊತೆಗೆ ಕರೆದುಕೋಂಡುಬರಬೇಕು ಎಂದು ಸಾಂಸ್ಕೃತಿಕ ಸಚಿವೆ ಉಷಾ ಠಾಕೂರ್ ಇವರು ಶರತ್ತು ಹಾಕಿದ್ದಾರೆ. ಮಧ್ಯಪ್ರದೇಶದ ಎಲ್ಲ ಜಿಲ್ಲಾಧಿಕಾರಿಗಳಿಗೆ ಈ ವಿಷಯದಲ್ಲಿ ಪತ್ರವನ್ನೂ ಕಳುಹಿಸಿದ್ದಾರೆ. ಹಿಂದೂಗಳ ಸಂಘಟನೆಗಳು ಈ ನಿರ್ಣಯವನ್ನು ಸ್ವಾಗತಿಸಿದ್ದಾರೆ ಹಾಗೂ ಅನೇಕ ಜನರು ಇದು ಧಾರ್ಮಿಕ ದ್ವೇಷವನ್ನು ಹರಡಿಸುವ ಕಾರಸ್ಥಾನವಾಗಿದೆಯೆಂದು ಹೇಳಿದ್ದಾರೆ. ಮಧ್ಯಪ್ರದೇಶದ ಭೋಪಾಳ, ಇಂದೂರ್, ಜಬಲಪುರ, ಗ್ವಾಲಿಯರ್ ಇತ್ಯಾದಿ ನಗರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಗರಬಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಮುಸಲ್ಮಾನ ಯುವಕರು ಗುರುತನ್ನು ಅಡಗಿಸಿ ಪ್ರವೇಶ ಮಾಡುತ್ತಾರೆ ಹಾಗೂ ಹಿಂದೂ ಹುಡುಗಿಯರನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸುತ್ತಾರೆ, ಎಂಬುದು ಬೆಳಕಿಗೆ ಬಂದಿರುವುದರಿಂದಲೆ ಠಾಕೂರ್ ಇವರು ಈ ನಿರ್ಣಯವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಕೆಲವು ದಿನಗಳ ಹಿಂದೆ ಅವರು ‘ಗರಬಾ ಮಂಟಪ’ವು ಲವ್ ಜಿಹಾದ್‌ನ ಮಾಧ್ಯಮವಾಗಿದೆ’, ಎಂದು ಹೇಳಿಕೆ ನೀಡಿದ್ದರು.

ಕುರಾನ್ ಅನುಮತಿ ಕೊಡುತ್ತಿದ್ದರೆ ಅವರು ಭಾಗವಹಿಸಬಹುದು ! – ಉಮಾಭಾರತಿ

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಇವರು, ಯಾರು ‘ಜಯಮಾತಾಜಿ’ ಎಂದು ಹೇಳುವುದಿಲ್ಲ, ಅವರಿಗೆ ಗರಬಾದ ಸ್ಥಳಕ್ಕೆ ಪ್ರವೇಶವನ್ನು ನೀಡಬಾರದು. ನವರಾತ್ರಿಯಲ್ಲಿ ಶಕ್ತಿಯ ದೇವಿಯ ಪೂಜೆ ಮಾಡಲಾಗುತ್ತದೆ. ಮುಸಲ್ಮಾನರಿಗೆ ಮೂರ್ತಿ ಪೂಜೆಯ ಮೇಲೆ ಶ್ರದ್ಧೆಯಿದ್ದರೆ ಅವರಿಗೆ ಈ ಕಾರ್ಯಕ್ರಮದಲ್ಲಿ ಸ್ವಾಗತವಿದೆ. ಕುರಾನ್ ಮತ್ತು ಇತರ ಯಾವುದೇ ಧರ್ಮಶಾಸ್ತ್ರದಲ್ಲಿ ಅವರಿಗೆ ಅನುಮತಿ ನೀಡಿದ್ದರೆ, ಅವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಕೇವಲ ಮನೋರಂಜನೆಗಾಗಿ ಬರಬಾರದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಸರಕಾರ ಇಂತಹ ಶರತ್ತನ್ನು ಸಂಪೂರ್ಣ ದೇಶದಲ್ಲಿ ಹೇರಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !