ಪಾಕಿಸ್ತಾನಿ ಪತಿಯಿಂದ ಗ್ರೀಕ ಮಹಿಳೆಯ ಹತ್ಯೆ !

ಈಗ ಯುರೋಪನ ದೇಶ ಗ್ರೀಸ್ ನಲ್ಲಿ ಕೂಡ ‘ಲವ್ ಜಿಹಾದ್’ !

ಎಥೆನ್ಸ (ಗ್ರೀಸ್) – ಹಿಂದೂಗಳ ಸರ್ವನಾಶ ಮಾಡುವ ಲವ್ ಜಿಹಾದಿನ ಷಡ್ಯಂತ್ರದ ರೀತಿಯಲ್ಲಿ ಈಗ ಯುರೋಪನ ದೇಶ ಗ್ರೀಸ್ ನಲ್ಲಿಯೂ ನಡೆಯುತ್ತಿರುವುದು ಬೆಳಕಿಗ ಬಂದಿದೆ. ಗ್ರೀಸ್ ನ ಲಾರಿಸಾ ನಗರದಲ್ಲಿ ವಾಸವಾಗಿರುವ ಒಬ್ಬ ಕ್ರೈಸ್ತ ಮಹಿಳೆಯ ಮೃತ ದೇಹ ಇಲ್ಲಿಯ ಒಂದು ಕಟ್ಟಡದ ನೆಲಮಾಳಿಗೆಯಲ್ಲಿ ಕಂಡು ಬಂದಿದೆ. ಪೊಲೀಸರು ನಡೆಸಿರುವ ತನಿಖೆಯಲ್ಲಿ ಆಕೆ ತನ್ನ ಪಾಕಿಸ್ತಾನಿ ಪತಿಯ ಜೊತೆಗೆ ಇಲ್ಲಿ ವಾಸವಾಗಿದ್ದಳು. ಪತಿಯೇ ಆಕೆಯ ಹತ್ಯೆ ನಡೆಸಿ ಪಾಕಿಸ್ತಾನಕ್ಕೆ ಓಡಿ ಹೋಗಿರುವುದು ಪ್ರಾರ್ಥಮಿಕ ವಿಚಾರಣೆಯಲ್ಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಪ್ರಸಾರ ಮಾಧ್ಯಮಗಳ ಮೂಲಕ ನೀಡಿರುವ ಮಾಹಿತಿಯ ಪ್ರಕಾರ ಮೃತ ಮಹಿಳೆಯ ವಯಸ್ಸು ೩೫ ವರ್ಷವಾಗಿತ್ತು. ಸಪ್ಟೆಂಬರ್ ೯ ರಂದು ಆಕೆಯ ಮೃತ ದೇಹ ನಗರದಲ್ಲಿನ ‘ಪಾಪನಾಸ್ತಾಸಿಯೋ ಸ್ಟ್ರೀಟ್’ ನಲ್ಲಿ ಇರುವ ಒಂದು ಕಟ್ಟಡದ ನೆಲ ಮಾಳಿಗೆಯ ಇಂದ ವಶಪಡಿಸಿಕೊಳ್ಳಲಾಗಿದೆ. ಆಕೆಯ ಮೃತ ದೇಹ ಕೊಳೆತು ಹೋಗಿತ್ತು ಮತ್ತು ಅದರಿಂದ ಬರುವ ದುರ್ವಾಸನೆಯಿಂದ ಸ್ಥಳೀಯರಿಗೆ ಈ ವಿಷಯ ತಿಳಿಯಿತು. ಮಹಿಳೆ ಕೆಲವು ದಿನಗಳ ಮೊದಲು ಆಕೆಯ ಪತಿಯ ವಿರುದ್ಧ ಕೌಟುಂಬಿಕ ಹಿಂಸಾಚಾರದ ದೂರು ದಾಖಲಿಸಿದ್ದಳು.

ಕೆಲವು ದಿನಗಳ ಮೊದಲು ಗ್ರೀಸ್ ರಾಜಧಾನಿ ಎಥನ್ಸ್ ಹತ್ತಿರ ಇರುವ ಪೆರಿಸ್ಟಾರಿ ಈ ನಗರದಲ್ಲಿ ಲವ್ ಜಿಹಾದಿನ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ಇದರಲ್ಲಿ ಅಹಸಾನ್ ಎಂಬ ಪಾಕಿಸ್ತಾನಿ ಪ್ರೇಮಿಯು ಅವನ ೧೭ ವರ್ಷದ ಪ್ರೇಯಸಿಯ ಹತ್ಯೆ ಮಾಡಿದ್ದನು.