ಪಾಕಿಸ್ತಾನದಲ್ಲಿ ಪೊಲಿಯೋ ವಿರುದ್ಧ ಲಸಿಕೆಗಳನ್ನು ನೀಡುವ ತಂಡದ ಮೇಲೆ ನಡೆದ ಹಲ್ಲೆಯಲ್ಲಿ ೪ ಪೊಲೀಸರ ಸಾವು

ಖೈಬರ ಪಖ್ತುನ್ಖ್ವಾ (ಪಾಕಿಸ್ತಾನ) – ಈ ಪ್ರಾಂತದಲ್ಲಿ ಸಪ್ಟಂಬರ ೯ ರಂದು ಪೊಲಿಯೋ ವಿರೋಧಿ ಲಸಿಕೆ ನೀಡುವ ತಂಡಕ್ಕೆ ಭದ್ರತೆ ನೀಡುವ ಪೊಲೀಸ್ ಪಡೆಯ ಮೇಲೆ ಅಜ್ಞಾತರು ದಾಳಿ ಮಾಡಿದರು. ಇದರಲ್ಲಿ ೪ ಪೊಲೀಸರು ಮೃತರಾದರು. ಹಾಗೂ ಇಬ್ಬರು ಗಾಯಗೊಂಡಿದ್ದಾರೆ. ಇಲ್ಲಿನ ಟ್ಯಂಕ್ ಜಿಲ್ಲೆಯ ಗುಲ ಇಮಾನ ಭಾಗದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಮತ್ತು ದಾಳಿಕೋರರ ನಡುವೆ ದೀರ್ಘಕಾಲ ಗುಂಡು ಹಾರಾಟ ನಡೆಯುತ್ತಿತ್ತು. ಇಲ್ಲಿಯವರೆಗೆ ಯಾವುದೇ ಭಯೋತ್ಪಾದಕ ಸಂಘಟನೆಯು ಈ ದಾಳಿಯ ಹೊಣೆಯನ್ನು ಸ್ವೀಕರಿಸಿಲ್ಲ.
ಈ ಹಿಂದೆಯೂ ಪಾಕಿಸ್ತಾನದಲ್ಲಿ ಪೊಲಿಯೋ ವಿರೋಧಿ ಲಸಿಕೆಯ ತಂಡದ ಮೇಲೆ ದಾಳಿ ನಡೆದಿದೆ. ಈ ವರ್ಷ ಜೂನ್ ೨೮ ರಂದು ಉತ್ತರ ವಝೀರೀಸ್ತಾನ ಆದಿವಾಸಿ ಜಿಲ್ಲೆಯಲ್ಲಿ ಪೊಲಿಯೊ ವಿರೋಧಿ ಲಸಿಕೆಯ ತಂಡದವರ ಮೇಲಿನ ದಾಳಿಯಲ್ಲಿ ಇಬ್ಬರು ಪೊಲೀಸರ ಸಹಿತ ೩ ಜನರು ಮೃತರಾಗಿದ್ದರು. ಜುಲೈ ೩೦ ರಂದು ಪೇಶಾವರದ ದೌದಝಯೀ ಭಾಗದಲ್ಲಿ ಲಸಿಕೆಯ ತಂಡದವರಿಗೆ ರಕ್ಷಣೆ ನೀಡುವ ಒಬ್ಬ ಪೊಲೀಸನನ್ನು ಕೊಲೆ ಮಾಡಲಾಗಿತ್ತು. ಖೈಬರ ಪಖ್ತುನ್ಖ್ವಾದಲ್ಲಿ ಅಗಸ್ಟ್ ೧ ರಂದು ತಂಡದವರ ರಕ್ಷಣೆ ಮಾಡುವ ಪೊಲೀಸ್ ಅಧಿಕಾರಿಗೆ ಗುಂಡು ಹೊಡೆದು ಹತ್ಯೆ ಮಾಡಲಾಯಿತು. ಅನಂತರ ಅಗಸ್ಟ್ ೧೫ ರಂದು ಇಲ್ಲಿ ಇಬ್ಬರು ಪೊಲೀಸರಿಗೆ ಗುಂಡು ಹೊಡೆಯಲಾಯಿತು.

ಪೊಲಿಯೋ ಲಸಿಕೆಯ ತಂಡದವರ ಮೇಲೆ ಆಕ್ರಮಣ ಆಗುತ್ತದೆ ಏಕೆ ?

ಪಾಕಿಸ್ತಾನದ ಅನೇಕ ಭಾಗದಲ್ಲಿ ಜನರು ಪೊಲಿಯೊ ವಿರೋಧಿ ಲಸಿಕೆಯನ್ನು ವಿರೋಧಿಸುತ್ತಾರೆ. ‘ಪೊಲಿಯೋದ ಲಸಿಕೆಯಿಂದ ಜನರಲ್ಲಿ ಬಂಜೆತನ ಬರುತ್ತದೆ’, ಎಂಬುದು ಅವರ ಅಭಿಪ್ರಾಯವಾಗಿದೆ.