‘ಏಸುಕ್ರಿಸ್ತನೇ ಏಕೈಕ ಭಗವಂತನಾಗಿದ್ದು ಬೇರೆ ಯಾವುದೇ ದೇವರು ಅಥವಾ ದೇವಿ (ಶಕ್ತಿ) ಇಲ್ಲ’ (ಅಂತೆ) !

ರಾಹುಲ ಗಾಂಧಿಯವರ ಭೇಟಿಯಲ್ಲಿ ಪಾದ್ರಿ ಜಾರ್ಜ್ ಪೋನ್ನಯ್ಯ ಇವರ ಆಕ್ಷೇಪಾರ್ಹ ಹೇಳಿಕೆ !

ಕನ್ಯಾಕುಮಾರಿ (ತಮಿಳುನಾಡು) – ಕಾಂಗ್ರೆಸ್‌ನ ನಾಯಕ ರಾಹುಲ ಗಾಂಧಿ ಇವರು ‘ಭಾರತ ಜೊಡೋ’ ಯಾತ್ರೆಗಾಗಿ ಕನ್ಯಾಕುಮಾರಿಯಲ್ಲಿ ಇರುವಾಗ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಪೋನ್ನಾಯ್ಯ ಇವರನ್ನು ಭೇಟಿ ಮಾಡಿದರು. ಆ ಭೇಟಿಯ ಒಂದು ವಿಡಿಯೋ ಪ್ರಸಾರವಾಗಿದೆ. ಅದರಲ್ಲಿ ರಾಹುಲ್ ಗಾಂಧಿ, ‘ಯೇಸು ಒಬ್ಬನೇ ದೇವರ ರೂಪ ಇದು ಸತ್ಯವೇ ? ಎಂದು ಕೇಳಿದ್ದಾರೆ ಅದಕ್ಕೆ ಪಾದ್ರಿ ಪೊನ್ನಯ್ಯ ರಾಹುಲ್ ಗಾಂಧಿಯವರಿಗೆ ‘ಏಸುಕ್ರಿಸ್ತ ಇವನೋಬ್ಬನೆ ಭಗವಂತ ಬೇರೆ ಯಾವುದೇ ದೇವರು ಅಥವಾ ದೇವಿ (ಶಕ್ತಿ) ಅಲ್ಲ.’ ಎಂದು ಹೇಳುತ್ತಾರೆ. ಅವರ ಹೇಳಿಕೆಯ ಬಗ್ಗೆ ಟೀಕೆಗಳು ನಡೆಯುತ್ತಿವೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರ ವಿರುದ್ಧ ದ್ವೇಷಪೂರಿತ ಹೇಳಿಕೆ ನೀಡಿದ್ದರಿಂದ ಪಾದ್ರಿ ಪೊನ್ನಯ್ಯ ಇವರನ್ನು ಬಂಧಿಸಲಾಗಿತ್ತು.

(ಸೌಜನ್ಯ : TIMES NOW Navbharat)

೧. ಈ ವಿಡಿಯೋದ ಬಗ್ಗೆ ಭಾಜಪದಿಂದ ಟೀಕಿಸಲಾಗುತ್ತಿದೆ. ಭಾಜಪದ ವಕ್ತಾರರು ಶಹಜಾದ ಪುನಾವಾಲಾ ಇವರು, ಇದು ಕಾಂಗ್ರೆಸ್‌ನ ‘ಭಾರತ ಜೋಡೋ’ ಅಭಿಯಾನ ವಾಗಿರದೆ ‘ನಫರತ (ದ್ವೇಷ) ಜೊಡೋ’ ಅಭಿಯಾನ ಇರುವುದು. ಪೋನ್ನಯ್ಯ ಇವರು ಹಿಂದೂ ದೇವತೆಗಳನ್ನು ಅವಮಾನಿಸಿದ್ದಾರೆ. ಈ ಮೊದಲು ಭಾರತಮಾತೆಯ ಬಗ್ಗೆ ಅಯೋಗ್ಯ ಹೇಳಿಕೆ ನೀಡಿದ್ದರು. ಈ ಭೇಟಿಯಲ್ಲಿ ಕಾಂಗ್ರೆಸ್‌ನ ಯೋಚನೆ ಮತ್ತು ಅವರ ಹಿಂದೂ ವಿರೋಧಿ ನಿಲುವು ಕಂಡು ಬರುತ್ತದೆ. ಕಾಂಗ್ರೆಸ್ ಹಿಂದೂ ವಿರೋಧಿ ಇರುವುದು ಇತಿಹಾಸವೇ ಇದೆ. ಎಂದು ಹೇಳಿದರು.

೨. ಭಾಜಪದ ಟಿಕೆಯ ಬಗ್ಗೆ ಕಾಂಗ್ರೆಸ್‌ನ ನಾಯಕ ಜಯರಾಮ ರಮೇಶ ಇವರು, ಈ ವಿಡಿಯೋದಲ್ಲಿ ಏನು ಇದೆ, ಅದು ಪಕ್ಷಕ್ಕೆ ಸಂಬಂಧಪಟ್ಟಲ್ಲ. ‘ಭಾರತ ಜೋಡೋ ಯಾತ್ರೆಗೆ ಸಿಗುತ್ತಿರುವ ಬೆಂಬಲದಿಂದ ಭಾಜಪದವರು ಹೆದರಿದ್ದು ಈ ರೀತಿಯ ಕೆಳಮಟ್ಟದ ರಾಜಕಾರಣ ಮಾಡುತ್ತಿದೆ’ ಎಂದು ಹೇಳಿದರು.

ಸಂಪಾಕಿಯ ನಿಲುವು 

ರಾಹುಲ ಗಾಂಧಿ ಇವರು ‘ಈ ಹೇಳಿಕೆ ಅವರಿಗೆ ಒಪ್ಪಿಗೆ ಇದೆಯೇ ಅಥವಾ ಇಲ್ಲ’ ಇದರ ಬಗ್ಗೆ ಅವರು ಭಾರತೀಯರಿಗೆ ಬಹಿರಂಗವಾಗಿ ಹೇಳಬೇಕು ಇಲ್ಲವಾದರೆ ಅವರು ಈ ಹೇಳಿಕೆ ಒಪ್ಪಿದ್ದಾರೆ ಎಂದು ತಿಳಿಯಲಾಗುವುದು !

ಕಾಂಗ್ರೆಸ್ಸಿಗರು ಈ ಹೇಳಿಕೆ ಏನಾದರೂ ಒಪ್ಪಿದ್ದರೆ ಅವರ ನಿಜವಾದ ಮಾನಸಿಕತೆ ಸ್ಪಷ್ಟವಾಗುತ್ತದೆ ! ಯಾವಾಗಲೂ ಚುನಾವಣೆ ಬಂದ ನಂತರ ಜನಿವಾರ ಧರಿಸಿ ದೇವಸ್ಥಾನಗಳಿಗೆ ಹೋಗುವ ರಾಹುಲ್ ಗಾಂಧಿ ಡಾಂಭಿಕರಾಗಿದ್ದಾರೆ ಎಂದು ಇದರಿಂದ ಸ್ಪಷ್ಟವಾಗುತ್ತದೆ !