(ಹಿಜಾಬ್ ಎಂದರೆ ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಲು ಉಪಯೋಗಿಸುವ ವಸ್ತ್ರ)
ನವ ದೆಹಲಿ – ಕರ್ನಾಟಕದಲ್ಲಿನ ಶೈಕ್ಷಣಿಕ ಸಂಸ್ಥೆಯಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಹಿಜಾಬ ನಿಷೇಧ ಮಾಡಲಾಗಿದೆ. ಇದರ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದನಂತರ ನ್ಯಾಯಾಲಯವು ಸರಕಾರದ ನಿರ್ಣಯವನ್ನು ಎತ್ತಿ ಹಿಡಿದಿತ್ತು. ಅದಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಇದರ ಬಗ್ಗೆ ನಡೆದಿರುವ ಆಲಿಕೆಯ ಸಮಯದಲ್ಲಿ ಮುಸಲ್ಮಾನರ ಪಕ್ಷದಿಂದ ತಮ್ಮ ಅಭಿಪ್ರಾಯ ಮಂಡಿಸುವಾಗ ನಮಾಜ್, ಹಜ್, ರೋಜಾ, ಜಕಾತ್ (ಇಸ್ಲಾಮಿಗಾಗಿ ದಾನ ನೀಡುವುದು) ಮತ್ತು ಇಮಾನ್ (ಇಸ್ಲಾಮಿನ ಬಗ್ಗೆ ಶ್ರದ್ಧೆ) ಅನಿವಾರ್ಯ ಅಲ್ಲ’ವೆಂದು ಹೇಳಿದೆ. ಇದರ ಬಗ್ಗೆ ನ್ಯಾಯಾಲಯವು, ‘ಹಾಗಾದರೆ ಹಿಜಾಬ್ ಮಹಿಳೆಯರಿಗಾಗಿ ಅನಿವಾರ್ಯ ಹೇಗೆ ? ಎಂದು ಪ್ರಶ್ನಿಸಿದೆ. ಇದರ ಬಗ್ಗೆ ಮುಂದಿನ ಆಲಿಕೆ ಸಪ್ಟೆಂಬರ್ ೧೧ ರಂದು ನಡೆಯಲಿದೆ.
How is #hijab compulsory in #Islam when #namaz isn’t: Supreme Court https://t.co/y57KqINtJ2 pic.twitter.com/PqLVzMS66H
— The Times Of India (@timesofindia) September 9, 2022
೧. ಅರ್ಜಿದಾರ ಫಾತಮಾ ಬುಶರಾ ಇವರ ನ್ಯಾಯವಾದಿ ಮಹಮ್ಮದ್ ನಿಜಾಮುದ್ದೀನ್ ಪಾಷಾ ಇವರ ಪ್ರಕಾರ ಇಸ್ಲಾಮಿನಲ್ಲಿ ೫ ಸಿದ್ದಾಂತಗಳ ಪಾಲಿಸಲು ಯಾವುದೇ ರೀತಿ ಬಲವಂತ ಇರುವುದಿಲ್ಲ; ಆದರೆ ಇದರ ಅರ್ಥ ಅದರ ಪಾಲನೆ ಮಾಡುವುದು ಇಸ್ಲಾಮಿನಲ್ಲಿ ಅವಶ್ಯಕವಾಗಿಲ್ಲ ಎಂದಲ್ಲ.
೨. ಪಾಷಾ ಇವರು ಯುಕ್ತಿವಾದ ಮಾಡುವಾಗ ಸಿಖ್ಕರ ಪಗಡಿಯ ಉದಾಹರಣೆ ನೀಡಿದರು. ಇದರ ಬಗ್ಗೆ ನ್ಯಾಯಾಲಯವು, ಸಿಖ ಧರ್ಮದ ಪ್ರಕಾರ ೫ ‘ಕ’ಕಾರ (ಕಂಗವಾ, ಕೃಪಾಣ, ಕಡಾ, ಕೇಶ ಮತ್ತು ಕಛಹೇರ (ಅಂತರ್ ವಸ್ತ್ರ) ಅವರಿಗೆ ಇವು ಅನಿವಾರ್ಯವಾಗಿದೆ. ಕೃಪಾಣದ ಉಲ್ಲೇಖ ಸಂವಿಧಾನದಲ್ಲೂ ಸಹ ಇದೆ ಎಂದು ಹೇಳಿತು.