ಫೈಜಲ ಎಂಬವನು ಹಿಂದೂ ಎಂದು ಹೇಳಿಕೊಂಡು ಹಿಂದೂ ಯೋಗ ಶಿಕ್ಷಕಿಯನ್ನು ಪ್ರೇಮಜಾಲದಲ್ಲಿ ಸಿಲುಕಿಸಿದನು !

ಲಕ್ಷ್ಮಣಪುರಿ – ನಗರದಲ್ಲಿನ ಫೈಜಲ ಅಹಮ್ಮದ ಎಂಬ ಮುಸಲ್ಮಾನ ಯುವಕನು ಹಿಂದೂ ಎಂದು ಹೇಳಿಕೊಂಡು ಹಿಂದೂ ಯೋಗ ಶಿಕ್ಷಕಿಯೊಂದಿಗೆ ವಿವಾಹವಾಗಿ ಅವಳಿಗೆ ಮತಾಂತರಕ್ಕಾಗಿ ಒತ್ತಡ ಹೇರಿದ ಘಟನೆ ಬೆಳಕಿಗೆ ಬಂದಿದೆ. ಫೈಜಲ ಅಹಮ್ಮದನು ‘ಅಥರ್ವ’ ಆಗಿದ್ದೇನೆ ಎಂದು ಹೇಳುತ್ತಾ ಸಂತ್ರಸ್ತ ಹುಡುಗಿಯನ್ನು ಪ್ರೇಮಜಾಲದಲ್ಲಿ ಸಿಲುಕಿಸಿದನು. ಸಂತ್ರಸ್ತ ಹುಡುಗಿಯೊಂದಿಗೆ ಶಾರೀರಿಕ ಸಂಬಂಧವನ್ನಿಟ್ಟನು ಹಾಗೂ ಅದರ ಅಶ್ಲೀಲ ವಿಡಿಯೋ ತಯಾರಿಸಿದನು.

೧. ಸಂತ್ರಸ್ತ ಹುಡುಗಿ ವಿವಾಹಕ್ಕಾಗಿ ಒತ್ತಡ ಹೇರಿದಾಗ ಅವನು ಆರ್ಯ ಸಮಾಜದ ಮಂದಿರದಲ್ಲಿ ಅವಳೊಂದಿಗೆ ವಿವಾಹವಾದನು. ವಿವಾಹದ ನಂತರ ಅವನು ಫೈಜಲ ಅಹಮ್ಮದ ಆಗಿದ್ದಾನೆಂಬುದು ಯುವತಿಗೆ ಅರಿವಾಯಿತು. ಆಗ ಅವನು ಹುಡುಗಿಗೆ ‘ಇಸ್ಲಾಂ’ ಸ್ವೀಕರಿಸಲು ಒತ್ತಡ ಹೇರಲು ಆರಂಭಿಸಿದನು.

೨. ಹುಡುಗಿ ಮತಾಂತರವಾಗಲು ನಿರಾಕರಿಸಿದಾಗ ಅವನು ಅವಳ ಮೇಲೆ ಅತ್ಯಾಚಾರ ಮಾಡಿದನು. ಮತ್ತು ಅವಳ ಅಶ್ಲೀಲ ವಿಡಿಯೋ ಪ್ರಸಾರ ಮಾಡುವುದಾಗಿ ಹಾಗೂ ಅವಳನ್ನು ಸುಟ್ಟು ಹಾಕುವುದಾಗಿ ಬೆದರಿಕೆಯನ್ನು ನಿಡಿದನು.

೩. ಸಂತ್ರಸ್ತೆ ಹುಡುಗಿಯ ದೂರಿಗನ್ವಯ ಪೊಲೀಸರು ಅಪರಾಧವನ್ನು ದಾಖಲಿಸಿ ಆರೋಪಿ ಫೈಜಲ ಅಹಮ್ಮದನನ್ನು ಬಂದಿಸಿದ್ದಾರೆ. ಆರೋಪಿಯು ಈ ಹಿಂದೆ ೨ ಹಿಂದೂ ಹುಡುಗಿಯರೊಂದಿಗೆ ಸಂಬಂಧ ಇಟ್ಟಿರುವುದು ಬೆಳಕಿಗೆ ಬಂದಿದೆ. ಈ ವಿಷಯದಲ್ಲಿ ಮುಂದಿನ ತನಿಖೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಸದ್ಯ ಹಿಂದೂ ಹೆಸರನ್ನಿಟ್ಟುಕೊಂಡು ಹಿಂದೂ ಯುವತಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಮೋಸಗೊಳಿಸುವ ಪ್ರಕಾರ ನಡೆಯುತ್ತಿದೆ. ಇದನ್ನು ತಡಗಟ್ಟಲು ಹಿಂದೂ ಯುವತಿಯರು ಜಾಗರೂಕರಾಗಿರುವ ಅವಶ್ಯಕತೆಯಿದೆ !