ನ್ಯಾಶನಲ್ ಹೆರಾಲ್ಡ್ ಹಗರಣ ಮತ್ತು ನಿರುಪಯುಕ್ತ ಭಾರತೀಯ ಕಾನೂನುಗಳು !

೧. ಸರ್ವೋಚ್ಚ ನ್ಯಾಯಾಲಯದಿಂದ ೨೦೧೨ ರಲ್ಲಿ `ನ್ಯಾಶನಲ್ ಹೆರಾಲ್ಡ್’ ಹಗರಣದ ತನಿಖೆಗೆ ಆದೇಶ

`೨೦೧೨ ರಲ್ಲಿ ಭಾಜಪದ ನೇತಾರ ಮತ್ತು ಆಗಿನ ಸಂಸದರಾದ ಡಾ. ಸುಬ್ರಹ್ಮಣ್ಯಮ್ ಸ್ವಾಮಿಯವರು ಕಾಂಗ್ರೇಸ್‌ನ ನೇತಾರರಾದ ಸೋನಿಯಾ ಗಾಂಧಿ, ರಾಹುಲ ಗಾಂಧಿ, ದಿವಂಗತ ನೇತಾರ ಮೋತಿಲಾಲಾ ವ್ಹೋರಾ, ಆಸ್ಕರ್ ಫರ್ನಾಂಡಿಸ್, ಹಾಗೆಯೇ ಪತ್ರಕರ್ತ ಸುಮನ ದುಬೆ ಮತ್ತು ಕಾಂಗ್ರೆಸ್‌ನ ಇನ್ನೋರ್ವ ನೇತಾರ ಸ್ಯಾಮ್ ಪಿತ್ರೋದಾ ಇವರ ಮೇಲೆ `ನ್ಯಾಶನಲ್ ಹೆರಾಲ್ಡ್’ ಹಗರಣದ ಆರೋಪವನ್ನು ಮಾಡಿದ್ದರು. ಅನಂತರ ಡಾ. ಸ್ವಾಮಿ ಇವರು ನ್ಯಾಯಾಲಯದಲ್ಲಿ ಒಂದು ಮನವಿಯನ್ನು ಸಲ್ಲಿಸಿದ್ದರು. ಆಗ ನ್ಯಾಯಾಲಯವು `ನ್ಯಾಶನಲ್ ಹೆರಾಲ್ಡ್ ಹಗರಣ’ದ ತನಿಖೆಯಾಗಬೇಕು ಮತ್ತು ಅದನ್ನು `ಈಡಿ’ ಮಾಡಬೇಕು’, ಎಂಬ ಆದೇಶವನ್ನು ನೀಡಿತ್ತು. ಈ ಆದೇಶದ ವಿರುದ್ಧ ಕಾಂಗ್ರೇಸ್ ಅಧ್ಯಕ್ಷೆ ಮತ್ತು ಸಂಸದೆ ಸೋನಿಯಾ ಗಾಂಧಿ ಮತ್ತು ಅವರ ಪರಿವಾರ ದೆಹಲಿ ಉಚ್ಚ ನ್ಯಾಯಾಲಯಕ್ಕೆ ಹೋಯಿತು; ಆದರೆ ಉಚ್ಚ ನ್ಯಾಯಾಲಯವೂ `ತನಿಖೆಯಾಗಬೇಕು’, ಎಂಬ ಆದೇಶವನ್ನೇ ನೀಡಿತು. ಈ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಲಾಯಿತು. ಕಳೆದ ೧೦ ವರ್ಷಗಳಲ್ಲಿ ಗಾಂಧಿ ಪರಿವಾರವು ಎಲ್ಲ ನ್ಯಾಯಾಲಯಗಳಿಗೆ ಹೋಗಿ ಬಂದಿದೆ. ಸರ್ವೋಚ್ಚ ನ್ಯಾಯಾಲಯವೂ ತನಿಖೆಗೆ ತಡೆಯಾಜ್ಞೆ ನೀಡದಿದ್ದಾಗ `ಈಡಿ’ಯು ನೋಟಿಸ್ ಹೊರಡಿಸಿತು. ಅದಕ್ಕನುಸಾರ ಈಗ ವಿಚಾರಣೆ ನಡೆದಿದೆ. ಕಾಂಗ್ರೆಸ್‌ನ ಸಂಸದ ರಾಹುಲ ಗಾಂಧಿ ಒಂದೆಡೆ, `ಚೌಕಿದಾರ (ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ) ಚೋರ ಹೈ’ (ಕಳ್ಳರಾಗಿದ್ದಾರೆ) ಮತ್ತು ಇನ್ನೊಂದು ಕಡೆ `ನಾನು ಪ್ರಾಮಾಣಿಕನಾಗಿದ್ದೇನೆ’, `ನನ್ನ ಮೇಲೆ ಯಾವುದೇ ಕಲಂಕವಿಲ್ಲ’, ಹಾಗೆಯೇ `ಸ್ವಾತಂತ್ರ÷್ಯದ ಹೋರಾಟದಲ್ಲಿ ಕಾಂಗ್ರೆಸ್‌ನ ಪಾತ್ರ ಮುಖ್ಯವಾಗಿತ್ತು ಮತ್ತು ನಾವು ಗಾಂಧಿಗಳಾಗಿದ್ದೇವೆ’, ಎಂದು ಹೇಳುತ್ತಿದ್ದರು. ಒಂದು ಕಡೆಗೆ ತಮ್ಮನ್ನು ಗಾಂಧಿ, ಸತ್ಯವಾದಿ, ಅಹಿಂಸಾವಾದಿ ಇರುವುದಾಗಿ ಹೇಳುವುದು ಮತ್ತು ಇನ್ನೊಂದು ಕಡೆ ಹತ್ತು ವರ್ಷಗಳ ನಂತರ ತನಿಖೆ ನಡೆದರೆ ಬೀದಿಗಿಳಿದು ಗೊಂದಲ ಮಾಡುವುದು. ಅವರ ಸ್ಥಿತಿ ಈಗ ಹೀಗಾಗಿದೆ.

ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ

೨. ಆರೋಪದಲ್ಲಿ ಯಾವುದೇ ಸತ್ಯ ಇಲ್ಲದಿದ್ದರೆ ಗಾಂಧಿ ಪರಿವಾರ ಹೆದರದೇ `ಈಡಿ’ಯ ತನಿಖೆಯನ್ನು ಧೈರ್ಯದಿಂದ ಎದುರಿಸುತ್ತಿತ್ತು !

(`ಈಡಿ’ ಅಂದರೆ ಅಪರಾಧಗಳ ವಿಚಾರಣೆಯನ್ನು ಮಾಡುವ ಸರಕಾರದ ಸ್ವತಂತ್ರ ಸಂಸ್ಥೆ – ಸಂಪಾದಕರು)

`ಯಾರು ಪ್ರಮುಖ ರಾಜಕೀಯ ಪಕ್ಷದ ನೇತಾರರು ಮತ್ತು ಈ ದೇಶದ ಮೇಲೆ ರಾಜ್ಯವಾಳಿದವರೇ ಕಾನೂನಿಗೆ ಗೌರವವನ್ನು ಕೊಡದಿದ್ದರೆ, ಇನ್ನು ಜನಸಾಮಾನ್ಯರು ಕೊಡುವರೇ ? ನೀವು ನಿಜವಾಗಿಯೂ ಪ್ರಾಮಾಣಿಕರಾಗಿದ್ದೀರಿ, ನೀವು `ನ್ಯಾಶನಲ್ ಹೆರಾಲ್ಡ್ ಹಗರಣ’ವನ್ನು ಮಾಡಿಲ್ಲ, ನಿಮ್ಮ ಬಳಿ ಕಪ್ಪು ಹಣ ಇಲ್ಲ, ನಿಮ್ಮ ಬಳಿ ಅನಧಿಕೃತ ಆಸ್ತಿ ಇಲ್ಲ, `ನ್ಯಾಶನಲ್ ಹೆರಾಲ್ಡ್’ನಲ್ಲಿ ಯಾವುದೇ ಹಣಕಾಸಿನ ಅವ್ಯವಹಾರ ಆಗಿಲ್ಲ, ಎಂದಾದರೆ ನೀವು ಈ ತನಿಖೆಯನ್ನು ಸ್ವಾಗತಿಸಬೇಕು. ನೀವೇ ಸ್ವತಃ `ಈಡಿ’ ಒಂದು ಬಾರಿ ಅಲ್ಲ, ೧೦೦ ಬಾರಿ ತನಿಖೆ ಮಾಡಲಿ ಎನ್ನಬೇಕು. ಅದಕ್ಕೂ ಮುಂದೆ ಹೋಗಿ ನೀವು `ನಮ್ಮ ಕೇವಲ `ಈಡಿ’ ಮೂಲಕವಷ್ಟೇ ಅಲ್ಲ `ನಾರ್ಕೊ (ಕೆಲವು ಔಷಧಿಗಳನ್ನು ಕೊಟ್ಟು ಆರೋಪಿಯು ಪ್ರಜ್ಞೆ ಕಳೆದುಕೊಂಡ ನಂತರ ಮಾನಸೋಪಚಾರ ತಜ್ಞರ ಉಪಸ್ಥಿತಿಯಲ್ಲಿ ಅವರಿಗೆ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆಯುವುದು), `ಬ್ರೆನ್ ಮ್ಯಾಪಿಂಗ್’ (ವ್ಯಕ್ತಿಗೆ ವಿಶಿಷ್ಟ ಧ್ವನಿಯನ್ನು ಕೇಳಿಸಿ ಅದರ ಮೇಲೆ ಅವನ ಮೆದುಳಿನಲ್ಲಿ ಯಾವ ಪ್ರತಿಕ್ರಿಯೆ ನಿರ್ಮಾಣವಾಗುತ್ತದೆ, ಅದರ ಅಧ್ಯಯನ (ಅಭ್ಯಾಸ) ಮಾಡುವುದು) ಈ ಪರೀಕ್ಷೆಯನ್ನೂ ಮಾಡಿರಿ’, ಎಂದು ಹೇಳುವುದು ಆವಶ್ಯಕವಾಗಿದೆ. ಹೀಗೆ ಹೇಳದೇ ನೀವು ಕೇವಲ `ಇದು ಈಡಿಯ ದುರುಪಯೋಗ ನಡೆದಿದೆ !, ಎಂದಷ್ಟೆ ಕೂಗಿ ಕೂಗಿ ಹೇಳುತ್ತಿರುವಿರಿ.

ಈ ತನಿಖೆಗೆ ಸತತವಾಗಿ ವಿರೋಧವನ್ನು ಮಾಡಿದ್ದರಿಂದ ೧೦ ವರ್ಷಗಳು ವ್ಯರ್ಥವಾದವು. ಗಾಂಧಿ ಪರಿವಾರವು ವರ್ಷ ೨೦೨೨ ರಲ್ಲಿ ಯಾವ ಪ್ರತಿವಾದವನ್ನು ಮಾಡುತ್ತಿದೆಯೋ, ಅದು ಈ ಮೊದಲೇ ಕೆಳಗಿನ ನ್ಯಾಯಾಲಯ, ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯದಲ್ಲಿ ಮಾಡಿ ಆಗಿದೆ. ಎಲ್ಲ ನ್ಯಾಯಾಲಯಗಳು `ಈಡಿ’ಯ ತನಿಖೆ ಯೋಗ್ಯವೆಂದು ಹೇಳಿವೆ. ಒಂದು ವೇಳೆ ಗಾಂಧಿ ಪರಿವಾರ ತಪ್ಪು ಕೆಲಸವನ್ನು ಮಾಡದಿದ್ದರೆ, ಅವರು ತನಿಖೆಯಿಂದ ಏಕೆ ಓಡಿಹೋಗುತ್ತಿದ್ದಾರೆ ? ಇದರ ಅರ್ಥ ಅವರು ತಪ್ಪು ಮಾಡಿದ್ದಾರೆ ಎಂಬುದು ಸಾಬೀತಾಗುತ್ತದೆ.

`ಏನಿದೆ ನ್ಯಾಶನಲ್ ಹೆರಾಲ್ಡ್’ ಹಗರಣ ?

ಮಾಜಿ ಪ್ರಧಾನಮಂತ್ರಿ ಜವಾಹರ ಲಾಲ ನೆಹರೂರವರು `ನ್ಯಾಶನಲ್ ಹೆರಾಲ್ಡ್’ ಎಂಬ ಒಂದು ದಿನಪತ್ರಿಕೆಯನ್ನು ಆರಂಭಿಸಿದ್ದರು. `ಅಸೋಸಿ ಯೆಟೆಡ್ ಜರ್ನಲ್ಸ್ ಲಿಮಿಟೆಡ್’ ಹೆಸರಿನ ಸಂಸ್ಥೆಯು ಅದರ ಪ್ರಕಾಶಕವಾಗಿತ್ತು. ವರ್ಷ ೨೦೦೮ ರಲ್ಲಿ ದಿನಪತ್ರಿಕೆಯ ಮೇಲೆ ೯೦ ಕೋಟಿ ರೂಪಾಯಿಗಳ ಸಾಲವಾದುದರಿಂದ ಅದನ್ನು ಮುಚ್ಚಲಾಯಿತು. ಮುಂದೆ ೨೦೧೦ ರಲ್ಲಿ `ಯಂಗ್ ಇಂಡಿಯಾ ಲಿಮಿಟೆಡ್’ ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅದರಲ್ಲಿ ಗಾಂಧಿ ತಾಯಿ-ಮಗನ ಸಹಭಾಗ ಶೇ. ೭೬ ರಷ್ಟಿದೆ ಮತ್ತು ಉಳಿದ ಶೇ. ೨೪ ರಷ್ಟು ಇತರ ಕಾಂಗ್ರೆಸ್ ನೇತಾರರ ಬಳಿಯಿದೆ. `ಯಂಗ್ ಇಂಡಿಯಾ ಲಿಮಿಟೆಡ್’ ಕೇವಲ ೫೦ ಲಕ್ಷ ರೂಪಾಯಿ ಕೊಟ್ಟು ೯೦ ಕೋಟಿ ರೂಪಾಯಿಗಳ ಸಾಲವಿರುವ `ಅಸೋಸಿಯೆಟೆಡ್ ಜರ್ನಲ್ಸ್ ಲಿಮಿಟೆಡ್’ನ್ನು ಖರೀದಿಸಿತು.

೩. ಕಾಂಗ್ರೇಸ್ ತನಿಖೆಯನ್ನು ವಿರೋಧಿಸುತ್ತಿರುವುದರಿಂದ ಅವರು ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಸಂದೇಶ ಜನರಲ್ಲಿ ಹರಡುವುದು

ರಾಹುಲ ಗಾಂಧಿಯವರನ್ನು ವಿಚಾರಣೆಗಾಗಿ ಕರೆದಾಗ, ಸಿಬಿಐ ಮತ್ತು ಈಡಿ’ಯ ಮೇಲೆ ಒತ್ತಡ ತರಲು ಎಲ್ಲ ಕಾಂಗ್ರೆಸ್ಸಿಗರು ಬೀದಿಗಿಳಿದರು. ಅವರು ರಸ್ತೆಗಳನ್ನು ತಡೆದಿದ್ದರಿಂದ ಜನರಿಗೆ ಅಡಚಣೆಯಾಯಿತು. ವಿಚಾರಣೆಯನ್ನು ವಿರೋಧಿಸಲು ಕಾಂಗ್ರೆಸ್‌ನ ಕಾರ್ಯಕರ್ತರು ಬಸ್, ಟ್ರಕ್‌ಗಳೊಂದಿಗೆ ಅನೇಕ ವಾಹನಗಳನ್ನು ಸುಟ್ಟರು ಮತ್ತು ಸಾರ್ವನಿಕ ಸಂಪತ್ತನ್ನು ನಾಶ ಮಾಡಿದರು. ಸೋನಿಯಾ ಗಾಂಧಿಯವರ ವಿಚಾರಣೆ ಮಾಡುವ ಸಮಯ ಬಂದಾಗ ರಾಹುಲ ಗಾಂಧಿಯವರು ಬೀದಿಗಿಳಿದರು. ಇದರಿಂದ ಅವರು ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಸಂದೇಶವೇ ಜನರಲ್ಲಿ ಹರಡಿತು. ಗಾಂಧಿ ಪರಿವಾರ ತನಿಖೆಗೆ ಸಹಕಾರ ಮಾಡುವ ಬದಲು ಬೀದಿಗಿಳಿಯುತ್ತಿದೆ. ಕಾರ್ಯಕರ್ತರು ಬೀದಿಗಿಳಿದರೆ `ಈಡಿ’ ಮತ್ತು `ಸಿಬಿಐ’ ತಮ್ಮ ಕೆಲಸವನ್ನು ಬಿಟ್ಟು ಕೊಡುತ್ತವೆಯೇ ?’ ಈ ಇಲಾಖೆಗಳಿಗೆ ಮೋಸ ಮಾಡಲು ಅವರು ಸಂಪೂರ್ಣ ೧೦ ವರ್ಷಗಳ ಸಮಯವನ್ನು ತೆಗೆದುಕೊಂಡಿದ್ದಾರೆ. ಈಗ ಎಲ್ಲ ನ್ಯಾಯಾಲಯಗಳಿಗೆ ತಿರುಗಾಡಿ ಆಗಿದೆ. ಆದುದರಿಂದ ಅವರು ತನಿಖೆಗೆ ಸಹಕರಿಸುವುದು ಅಪೇಕ್ಷಿತವಿದೆ. ಕಾಂಗ್ರೆಸ್ ಪಕ್ಷವು ಯಾವ ರೀತಿ ಈ ತನಿಖೆಯನ್ನು ವಿರೋಧಿಸುತ್ತಿದೆಯೋ, ಅದನ್ನು ನೋಡಿದರೆ ಇದರಿಂದ ಅವರಿಗೆ ಏನಾದರೂ ಲಾಭವಾಗುವುದು ಎಂದು ನನಗೆ ಅನಿಸುವುದಿಲ್ಲ. ತದ್ವಿರುದ್ದ `ಗಾಂಧಿ ಕುಟುಂಬದವರು ಕಳ್ಳರಾಗಿದ್ದಾರೆ’ ಎಂಬುದೇ ಜನತೆಯ ಎದುರು ತೀವ್ರತೆಯಿಂದ ಬರುತ್ತಿದೆ.

೪. ಕಾಂಗ್ರೆಸ್ ಕೇವಲ ಇಬ್ಬರಿಗಾಗಿ ದೇಶದಾದ್ಯಂತದ ಜನರಿಗೆ ತೊಂದರೆಗಳನ್ನು ಕೊಡುವುದು

ಸೋನಿಯಾ ಗಾಂಧಿ ಮತ್ತು ರಾಹುಲ ಗಾಂಧಿ ಇವರು ಸಂಸದರಾಗಿದ್ದಾರೆ, ಅಂದರೆ ಅವರು ಕಾನೂನುಗಳನ್ನು ಮಾಡುವವರಾಗಿದ್ದಾರೆ; ಆದರೆ ಈಗ ಅವರೇ ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ. ಅವರಿಗೆ ಸಂಸದರ ವೇತನ, ವಾಹನ, ಬಂಗಲೆ, ಭತ್ತೆ, ಸುರಕ್ಷೆ ಈ ವಿವಿಧ ಸೌಲಭ್ಯಗಳು ಸಿಬಿಐ ವಿರುದ್ಧ ಬೀದಿಗಿಳಿಯಲು ಸಿಗುತ್ತವೆಯೇ ? ಅಥವಾ ಅವರು ಒಳ್ಳೆಯ ಕಾನೂನುಗಳನ್ನು ಮತ್ತು ನಿಯಮಗಳನ್ನು ತಯಾರಿಸಬೇಕೆಂದು ಅವರಿಗೆ ಜನತೆಯ ಹಣದಿಂದ ಇವೆಲ್ಲವುಗಳು ಸಿಗುತ್ತಿವೆ ? ಅವರು ಜನತೆಯ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಸಾಮಾನ್ಯ ಜನತೆಗೆ ಅನಿಸುತ್ತದೆ. ಇದನ್ನು ಮಾಡುವ ಬದಲು ಕಾಂಗ್ರೆಸ್ ಕೇವಲ ಇಬ್ಬರ ಸಮಸ್ಯೆಯನ್ನು ಎತ್ತುತ್ತಿದೆ. ಇವರಿಬ್ಬರಿಗಾಗಿ ದೇಶದಾದ್ಯಂತದ ಕಾರ್ಯಕರ್ತರನ್ನು ಬೀದಿಗಿಳಿಸಲಾಗುತ್ತಿದೆ. ರಸ್ತೆತಡೆಯಿಂದ ಜನರಿಗೆ ತೊಂದರೆಯಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳೂ ಇದರಿಂದ ಹೊರತಾಗಿಲ್ಲ. ಒಮ್ಮೆ ಅವರಿಗೆ ರಸ್ತೆಯ ಮೇಲಿನ ಇವರ ಗದ್ದಲದಿಂದ ನ್ಯಾಯಾಲಯಕ್ಕೆ ತಲುಪಲು ತಡವಾಯಿತು ಮತ್ತು ನ್ಯಾಯಾಲಯದ ಕಾರ್ಯಕಲಾಪಗಳು ತಡವಾಗಿ ಆರಂಭವಾದವು.

೫. ಭಾರತೀಯ ಕಾಯದೆಗಳಲ್ಲಿ ಸುಧಾರಣೆಯಾದಾಗಲೇ ದೇಶದ ವಿಕಾಸ, ಸಮೃದ್ಧಿಯಾಗಿ ಶಾಂತಿ ನೆಲೆಸುವುದು !

ಇದೇ ವೇಗದಲ್ಲಿ ಕೆಲಸಗಳು ಆಗತೊಡಗಿದರೆ ಆರೋಪ ಪತ್ರವನ್ನು ದಾಖಲಿಸಲು ೧೦ ವರ್ಷಗಳು, ಅನಂತರ ಕೆಳಗಿನ ನ್ಯಾಯಾಲಯದಲ್ಲಿ ೧೦ ವರ್ಷಗಳ ಕಾಲ ಮೊಕದ್ದಮೆ ನಡೆಯುವವರೆಗೆ ೨೦೪೨ ಬರುವುದು. ೧೦ ವರ್ಷಗಳ ಕಾಲ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುವುದು, ಅಲ್ಲಿಯವರೆಗೆ ೨೦೫೨ ಬರುವುದು. ನಂತರ ೧೦ ವರ್ಷ ಉಚ್ಚ ನ್ಯಾಯಾಲದಲ್ಲಿ ಮೊಕದ್ದಮೆ ನಡೆಯುವುದು, ಅಷ್ಟರವರೆಗೆ ವರ್ಷ ೨೦೬೨ ಬರುವುದು. ಸರಕಾರಕ್ಕೆ ನನ್ನ ವಿನಂತಿ ಏನೆಂದರೆ, ಯಾವ ರೀತಿ ಅಮೇರಿಕಾ, ಚೀನಾ, ಸಿಂಗಾಪುರ ಮುಂತಾದ ದೇಶಗಳಲ್ಲಿ `ಜ್ಯುಡಿಶಿಯಲ್ ಚಾರ್ಟರ್’ (ನ್ಯಾಯಿಕ ಸನದ) ಇದೆ, ಅಂದರೆ ವಿಚಾರಣೆಯನ್ನು ಪೂರ್ಣಗೊಳಿಸುವುದು, ಸಾಕ್ಷಿದಾರರ ಸಾಕ್ಷಿಗಳನ್ನು ಪೂರ್ಣಗೊಳಿಸುವುದು, ಇಂತಹ ಪ್ರತಿಯೊಂದು ವಿಷಯಕ್ಕಾಗಿ ಅಲ್ಲಿ ಸಮಯಮಿತಿಯನ್ನು ನಿರ್ಧರಿಸಲಾಗಿದೆ, ಅಂತಹ `ಜ್ಯುಡಿಶಿಯಲ್ ಚಾರ್ಟರ್’ನ್ನು ಭಾರತದಲ್ಲಿ ಏಕೆ ತರ ಬಾರದು ? ಭಾರತದಲ್ಲಿಯೂ ನ್ಯಾಯಾಂಗ ಸುಧಾರಣೆಯು ಆವಶ್ಯಕವಾಗಿದೆ. ಹಾಗೆಯೇ ನಾಗರಿಕ ಸನದ್ (ಸಿಟಿಝನ್ ಚಾರ್ಟರ್) ಜಾರಿಗೆ ತರಬೇಕು. ಈ ಪ್ರಕಾರದ ಕಾನೂನನ್ನು ಅಮೇರಿಕೆಯೂ ಮಾನ್ಯ ಮಾಡಿದೆ. ಅಲ್ಲಿ ಶಾಂತಿ, ವಿಕಾಸ, ಸಮೃದ್ಧಿ ಇದೆ. ಅಪರಾಧಿಗಳಿಗೆ ತಕ್ಷಣ ಶಿಕ್ಷೆಯನ್ನು ಸಿಗಲು ಚೀನಾ ಇದೇ ಸಿದ್ಧಾಂತವನ್ನು ಸ್ವೀಕರಿಸಿ ಕಠಿಣ ಕಾನೂನನ್ನು ರಚಿಸಿದೆ. ಅಲ್ಲಿಯೂ ಶಾಂತಿ ಮತ್ತು ಸಮೃದ್ಧಿ ನೆಲೆಸಿದೆ.

ಸಿಂಗಾಪುರವೂ ಇದನ್ನೇ ಮಾಡಿದೆ. ಹಾಗಾಗಿ ಅಲ್ಲಿಯೂ ಶಾಂತಿ ಇದೆ. ಭಾರತವೇಕೆ ಈ ಸಿದ್ಧಾಂತವನ್ನು ಸ್ವೀಕರಿಸುವುದಿಲ್ಲ ? ತಪ್ಪು ಕಾನೂನುಗಳಿಂದಾಗಿಯೇ ೧೦ ವರ್ಷಗಳ ನಂತರ ೨೦೧೨ ರ ಪ್ರಕರಣದ ವಿಚಾರಣೆಯಾಗುತ್ತಿದೆ. ಇದೆಲ್ಲ ಈ ತಪ್ಪು ಕಾನೂನುಗಳಿಂದಾಗಿಯೇ ನಡೆಯುತ್ತಿದೆ. ಸಾಕ್ಷಾ÷್ಯಧಾರಗಳ ಅಭಾವದಿಂದ ನಾಳೆ ಈ ಜನರು ತಪ್ಪಿಸಿಕೊಳ್ಳಲೂಬಹುದು.

೬. ದೊಡ್ಡ ರಾಜಕೀಯ ಅಪರಾಧಿಗಳಿಗೆ ಶಿಕ್ಷೆಯಾಗಲು ಭಾರತೀಯ ನ್ಯಾಯವ್ಯವಸ್ಥೆಯಲ್ಲಿ ಬದಲಾವಣೆ ಆವಶ್ಯಕ !

`ಎಮ್.ಐ.ಎಮ್.’ನ ಮುಖಂಡ ಅಕಬರುದ್ದೀನ್ ಓವೈಸಿ ಇವನು, “ಕೇವಲ ೧೫ ನಿಮಿಷಗಳಿಗಾಗಿ ಪೋಲಿಸರನ್ನು ಬದಿಗೆ ಸರಿಸಿರಿ, ಎಲ್ಲ ಹಿಂದೂಗಳನ್ನು ಮುಗಿಸಿಬಿಡುತ್ತೇವೆ ಎಂದು ಬಹಿರಂಗವಾಗಿ ಹೇಳಿದ ನಂತರವೂ ಅವನು ಮುಕ್ತನಾಗುತ್ತಾನೆ. ಭಯೋತ್ಪಾದಕ ಬಿಟ್ಟಾ ಕರಾಟೆ ಇವನೂ ೧೬ ಜನರ ಹತ್ಯೆಗೈದ ಬಗ್ಗೆ ಎಲ್ಲರ ಮುಂದೆ ಹೇಳಿದ್ದರೂ, ಇಲ್ಲಿಯವರೆಗೆ ಅವನಿಗೆ ಗಲ್ಲು ಶಿಕ್ಷೆಯಾಗಿಲ್ಲ. ನಾನು ನನ್ನ ಜನರನ್ನು ಕೊಂದಿದ್ದೇನೆ ಎಂದು ಒಪ್ಪಿಕೊಂಡ ಯಾಸಿನ್ ಮಲಿಕ್‌ನಿಗೂ ಇಂದಿನವರೆಗೆ ಗಲ್ಲು ಶಿಕ್ಷೆಯಾಗಿಲ್ಲ. ಇದೇ ರೀತಿ ಆಂಗ್ಲರ ಕಾನೂನುಗಳು ಮುಂದುವರೆದರೆ, ಕಾನೂನುಗಳಲ್ಲಿ ಸುಧಾರಣೆಯನ್ನು ಮಾಡದಿದ್ದರೆ, ಪೊಲೀಸರು ಮತ್ತು ನ್ಯಾಯಾಂಗ ಸುಧಾರಣೆಯನ್ನು ಮಾಡದಿದ್ದರೆ, ಕಠಿಣ ಕಾನೂನುಗಳನ್ನು ಮಾಡದಿದ್ದರೆ, ನ್ಯಾಯಾಂಗ ಸನ್ನದು (ಜುಡಸೀಯಲ್ ಚಾರ್ಟರ್), ನಾಗರಿಕ ಸನದು (ಸಿಟಿಝನ್ ಚಾರ್ಟರ್) ಜಾರಿಗೆ ತರದಿದ್ದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ೧೦-೨೦ ವರ್ಷಗಳಲ್ಲಿ ಗಾಂಧಿ ಪರಿವಾರದ ಸದಸ್ಯರೂ ಸಹಜವಾಗಿ ತಪ್ಪಿಸಿಕೊಳ್ಳಬಹುದು ಎಂದು ಅನಿಸುತ್ತದೆ. ಗಾಂಧಿ ಪರಿವಾರದ ವಿರುದ್ಧ ಯಾರು ಸಾಕ್ಷಿ ನೀಡುವರು ? ನಾರ್ಕೊ, ಬ್ರೇನ್ ಮ್ಯಾಪಿಂಗ್‌ನ ಕಾನೂನುಗಳು ನಮ್ಮ ದೇಶದಲ್ಲಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ ಗಾಂಧಿ ಇವರು ನಿಜ ಹೇಳಲಾರರು, ಹಾಗೆಯೇ ಅವರು ಯಾವುದೇ ಪುರಾವೆಗಳನ್ನೂ ಉಳಿಸಲಾರರು. ಅವರಿಂದ ಸತ್ಯವನ್ನು ಹೇಳಲು ಪೊಲೀಸರು ಅವರಿಗೆ `ಥರ್ಡ್ ಡಿಗ್ರಿ’ಯನ್ನು (ಹೊಡೆಯುವುದು, ಬಡೆಯುವುದು) ಬಳಸಲಾರರು. ಆದುದರಿಂದ ಇದರಿಂದ ಏನಾಗಬಹುದು ? ೧೦-೨೦ ವರ್ಷಗಳ ಕಾಲ ಮೊಕದ್ದಮೆ ನಡೆಯುವುದು ಮತ್ತು ಸಾಕ್ಷ್ಯಾಧಾರಗಳ ಕೊರತೆಯಿಂದ ಅವರು ಬಿಡುಗಡೆಯಾಗುವರು. ಇಂತಹವರಿಗೆ ಇಲ್ಲಿಯವರೆಗೆ ಶಿಕ್ಷೆಯಾಗಿಲ್ಲ. ಆದುದರಿಂದ ಎಲ್ಲಿಯವರೆಗೆ ಈ ತಪ್ಪು ಕಾನೂನುಗಳು ಮತ್ತು ನ್ಯಾಯವ್ಯವಸ್ಥೆಯಲ್ಲಿ ಸುಧಾರಣೆಯಾಗುವುದಿಲ್ಲವೋ, ಅಲ್ಲಿಯ ವರೆಗೆ ರಾಹುಲ-ಸೋನಿಯಾ ಗಾಂಧಿ ಇವರಂತಹವರಿಗೆ ಶಿಕ್ಷೆಯಾಗುವುದಿಲ್ಲ. ಆದುದರಿಂದ ಎಲ್ಲರೂ ತಪ್ಪು ಕಾನೂನುಗಳನ್ನು ಬದಲಾಯಿಸಿ ಹೆಚ್ಚು ಕಠೋರ ಕಾನೂನುಗಳನ್ನು ಮಾಡಲು ಸಂಸದರಿಗೆ ಒತ್ತಡವನ್ನು ತರುವುದು ಆವಶ್ಯಕವಾಗಿದೆ.’

– ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ, ನವ ದೆಹಲಿ. (೨೭.೭.೨೦೨೨)